ದೀಪಾವಳಿ
ದೀಪಾವಳಿ
ಕತ್ತಲೊಡಿಸಿ ಬೆಳಕು ಬೀರಲೆಂದು
ಬಂದಿದೆ ದೀಪಾವಳಿ,
ಮನೆ ಮನಗಳ ಬೆಸೆದು
ವಿರಸಗಳ ಸರಿಸಿ ಮೂಡಲಿ ಹರ್ಷಾವಳಿ |
ಅಂಧಕಾರದಲ್ಲಿ ಮುಳುಗಿದ ಮನಕೆ
ದೃಷ್ಟಿ ತುಂಬಲಿ ದೀಪಾವಳಿ,
ಧನ ಕನಕದೊಂದಿಗೆ ನೀಡಲಿ
ಆರೋಗ್ಯ ಆಯುಷ್ಯವೆಂಬ ಪ್ರಭಾವಳಿ |
ಉತ್ಸಾಹದೊಂದಿಗೆ ನಡೆಯಲಿ
ಕುಟುಂಬದೊಂದಿಗೆ ದೀಪಾವಳಿ,
ಮೌನಗಳ ಮುರಿದು
ಮನಗಳಾಗದಿರಲಿ ದಿವಾಳಿ |
