Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

PRASANNA KUMAR

Classics Inspirational Others

4  

PRASANNA KUMAR

Classics Inspirational Others

ದಾರಿಹೋಕನ ಪದಗಳು

ದಾರಿಹೋಕನ ಪದಗಳು

1 min
283


ನನಗಿಂತ ಹಿರಿದಿಲ್ಲ ನಾನಿರದೆ ಏನಿಲ್ಲ

ತೇಲದಿರು ಭ್ರಮೆಯಲ್ಲಿ ನಾ ಮೇಲುಯೆಂದು

ಬದುಕು ಕಲಿಸುವ ಪಾಠ ಶಾಲೆ ಕಲಿಸದು ಕೇಳು

ಜೀವನವೇ ಪಾಠಶಾಲೆ – ದಾರಿಹೋಕ


ಮತಗಳ ಭಿಕ್ಷೆಯನು ಬೇಡುವರು ವಿನಯದಿ

ಜನಸೇವೆ ನಮ್ಮುಸಿರು ಎಂದು ಹೇಳುವರು

ಗೆಲುವನ್ನು ಪಡೆವರು ಗದ್ದುಗೆಯನೇರುವರು

ಪ್ರಜೆಗಳ ಮರೆಯುವರೋ - ದಾರಿಹೋಕ

 

ಕಾಲನ ಬಲೆಯಲ್ಲಿ ಎಲ್ಲರೂ ಸಿಲುಕುವರು

ಬಿಡಿಸಿ ಕೊಂಬುವರು ಜಗದಲ್ಲಿ ಯಾರಿಹರು

ಸಿರಿತನ ಬಡತನ ಮೇಲು ಕೀಳೆನ್ನದ ಜವನ

ಪಾಶಕೆ ಭೇದವುಂಟೆ - ದಾರಿಹೋಕ

 

ವೇಷದಲಿ ಬೈರಾಗಿ ಅಂತರಂಗದಿ ಚೋರ

ಕಾಣುವ ರೀತಿಗಳು ಒಳ್ಳೆಯದೆ ಹೇಳುವೆಯಾ

ಹಸುವಿನ ಗುಣ ತೋರಿ ಹುಲಿಯಂತೆ ಸಿಗಿಯುವ

ಜನರುಂಟು ಲೋಕದಲಿ - ದಾರಿಹೋಕ

 

 

 


Rate this content
Log in

Similar kannada poem from Classics