ಬತ್ತಿಲ್ಲ ಜೀವದಾಸೆ
ಬತ್ತಿಲ್ಲ ಜೀವದಾಸೆ
ಬತ್ತಿದ ಕಂಗಳು
ಉಹಿಸಲಾಗದ ಕ್ಷಣಗಳು
ಮಸುಕಾದ ರೂಪುರೇಷೆಗಳು
ಯಾರೋ ಬಂದರು
ಯಾರೋ ಹೋದರು
ಅವ್ವ ನಾ ಯಾರಂತ ಗೊತ್ತಾತಾ?
ನಿಮ್ಮ ನೆಗ್ಯಾನಿ ಮಗ
ಅವ್ವಗ ಬರಾಕ ಆಗಂಗಿಲ್ಲ
ಮೊಣಕಾಲು ಬಿದ್ದಾವು
ಕುಂತಲ್ಲೆ ಎಲ್ಲಾ?
ಅರ್ಧ ಮರ್ದ ಕೇಳಿಸಿತ್ತು
ಮರುಗಿದ್ದು ಮನಸ್ಸು
ಜಿನುಗದ ಕಣ್ಣೀರು
ದೇಹ ಬಾಚಿ ಗೀಚಿದರೂ
ಜಿನುಗದು ಹನಿ ರಕ್ತ
ಮುದುಕಾದ್ವಾ?
ನೆರೆಕಂಡ ನೆತ್ತಿ,ಗಡ್ಡ
ಕುಹಕ ನಗೆ ಬೀರಿದಂತೆ
ಯೌವ್ವದನ ನಂಟು
ಕೈಕಾಲು ಆಡುತ್ತಿಲ್ಲ
ಬಾಯಿ ಚಪಲ ತೀರುತ್ತಿಲ್ಲ
ಆದರೂ ಬಯಸಿದ್ದೆಲ್ಲ ಬೇಕು
ಮಸಣದ ದಾರಿ
ದಿನನಿತ್ಯದ ಕನಸು
ಕಂಗಳಲಿ ಮೂಡಿದ ಚಿತ್ರ
ಅರೆ ಬರೆ ಭಾವಚಿತ್ರ
ಎಲ್ಲವೂ ಶೂನ್ಯ
ಬತ್ತಿದ,ಬರಡಾದ ಭಾವದಲ್ಲಿ
ಉಸಿರೊಂದೇ ಖಾತ್ರಿ
ಇನ್ನೂ ಬದುಕಿದ್ದಾರೆ
ಬತ್ತಿಲ್ಲ ಜೀವದಾಸೆ.
