ಬೆಳದಿಂಗಳು
ಬೆಳದಿಂಗಳು
ಬೆಳಂದಿಗಳ ಬಾಲೆ ನನ್ನವಳು,
ನನ್ನವಳು ನನ್ನ ಮನಸ್ಸ ಕದ್ದಿಹಳು,
ಕದ್ಧಿಹಳು ನನ್ನ ಅಮೂಲ್ಯ ಕ್ಷಣಗಳನ್ನು,
ಕ್ಷಣಗಳನ್ನು ಅವಳಿಗಾಗಿ ಮುಡಿಪಾಗಿಟ್ಟಿರುವೆ,
ಮುಡಿಪಾಗಿಟ್ಟಿರುವೆ ನನ್ನ ಬಾಳನು ಅವಳಿಗಾಗಿ,
ಅವಳಿಗಾಗಿ ನನ್ನ ಹೃದಯ ಬಡಿತವು,
ಬಡಿತವು ಸಾರುತಿದೆ ಅವಳ ನೆನಪುಗಳನು,
ನೆನಪುಗಳ ಸವಿಯುತ ನನ್ನ ಬಾಳು ಹಿಗ್ಗುತಿದೆ,
ಹಿಗ್ಗುತ ತೇಲಾಡುತಿದೆ ಮನವು ಹರುಷದಲ್ಲಿ,
ಹರುಷವನು ಪಸರಿಸುತ ನನ್ನ ಬಾಳ ಬೆಳಗಿಹಳು,
ಬೆಳಗಿಹಳು ನಮ್ಮ ಅನನ್ಯ ಸಂಬಂಧವನ್ನು,
ಸಂಬಂಧವನ್ನು ಸುವರ್ಣಾಕ್ಷರಗಳಲ್ಲಿ ನಾವು ಬರೆಯುವೆವು,
ಬರೆಯುವೆವು ನಮ್ಮಿಬ್ಬರ ಅಮೂಲ್ಯ ಜೀವನ ಪುಸ್ತಕವನ್ನು,
ಪುಸ್ತಕವನ್ನು ಪವಿತ್ರ ಪ್ರೇಮಕ್ಕೆ ಅರ್ಪಿಸುವೆವು,
