ಬದುಕೆಂಬ ಪುಸ್ತಕ
ಬದುಕೆಂಬ ಪುಸ್ತಕ
ಬದುಕ ಹೊತ್ತಿಗೆಯ
ಮೊದಲ ಪುಟದಲಿ
ಆ ವಿಧಾತ ಬರೆದ
ಜನನವೆಂಬ ಪದ
ಕೊನೆಯ ಪುಟದಲ್ಲಿ
ಮರಣವೆಂಬ ಪದ
ಇವೆರಡೂ ಪುಟಗಳ
ನಡುವೆ ಪುಟಗಟ್ಟಲೆ
ಕೌಮಾರ ಯೌವನ
ಪ್ರೌಢ ವಾರ್ಧಕ್ಯಗಳ
ಮಹಾ ವಾಕ್ಯಗಳು
ನಿಗೂಢ ಲಿಪಿಯಲಿ
ಬದುಕ ಹೊತ್ತಿಗೆಯ
ಬೆನ್ನ ಮೇಲೆ ಹೊರೆಸಿ
ಕಳುಹಿಸಿದ ಈ ಭುವಿಗೆ
