ಅಮ್ಮ
ಅಮ್ಮ


ಅಮ್ಮ- ಆರಾಧಿಸುವ ಭಕ್ತ ನಾನು
ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಪುಣ್ಯವಂತ ನಾನು
ನನ್ನ ಆರಾಧ್ಯ ದೇವತೆಗೆ ಮಾಡುವೆನು ಪ್ರೀತಿಯ ನಮನ
ನನ್ನ ಮನದಲ್ಲಿ ಪೂಜಿಸುವೆನು ಪ್ರತಿದಿನ
ನಾ ಕಂಡ ಅಭೂತಪೂರ್ವ ಶಕ್ತಿ ನೀನು
ಹೆಣ್ಣಿನ ಶೌರ್ಯತನಕ್ಕೆ ಉದಾಹರಣೆ ನೀನು
ನಿನ್ನ ಮುದ್ದು ಮಗ ನಾನು
ನಿನ್ನನ್ನು ಮಗುವಿನಂತೆ ನೋಡಿಕೊಳ್ಳುವೆನು ನಾನು
ಮುಂದಿನ ಜನ್ಮದಲ್ಲಿ ನಿನ್ನ ತಾಯಿಯಾಗುವ ಆಸೆ
ನನ್ನ ತೋಳುಗಳಲ್ಲಿ ನಿನ್ನನ್ನು ಮುದ್ದಾಡಿ ಬೆಳೆಸುವ ಆಸೆ
ಹೇ ಮಾತೆ!! ನಿನಗೆ ಸಾಟಿ ಯಾರಿಲ್ಲ
ನನಗೆ ನಿನಗಿಂತ ಇನ್ನೊಂದು ದೇವರಿಲ್ಲ