ಅವಳು
ಅವಳು
1 min
2.6K
ಅವಳು - ನಮ್ಮ ಮನೆಯ ಬೆಳಕು
ಅವಳಿದ್ದರೆ ಮನೆಯೆಲ್ಲಾ ಹೊಳಪು
ಅವಳು - ನಮ್ಮ ಹೆತ್ತ ತಾಯಿ
ಅವಳು - ಒಡಹುಟ್ಟಿದ ಸಹೋದರಿ
ಅವಳು - ಕೈಹಿಡಿದ ಧರ್ಮಪತ್ನಿ
ಅವಳು - ನಾವು ಹೆತ್ತ ಸುಪುತ್ರಿ
ಅವಳು - ನಮ್ಮನ್ನು ಹೊರೆಯುವ ಭೂಮಿತಾಯಿ
ಅವಳು - ನಮ್ಮನ್ನು ಪೋಷಿಸುವ ಜೀವನದಿ
ಅವಳ ಚಂದ ನೋಡಿ ಮೆಚ್ಚಿರಿ
ಆದರೆ ಅವಳನ್ನು ಆರಾಧಿಸುವುದನ್ನು ಮರೆಯದಿರಿ
ಅವಳು ಕತ್ತಿ ಹಿಡಿದರೆ, ವೀರ ಹೋರಾಟಗಾರ್ತಿ
ಅವಳು ಕಲಮು ಹಿಡಿದರೆ, ಅಸಾಮಾನ್ಯ ಬರಹಗಾರ್ತಿ
ಅವಳನ್ನು ಅರಿಯದ ಮೂರ್ಖರ ಸಮಾಜ ನಮ್ಮದು
ಅವಳನ್ನು ಕಡೆಗಣಿಸುವ ಪುರುಷ ಸಮಾಜ ನಮ್ಮದು
ಅವಳು ಸೃಷ್ಟಿಸಿದ ಜೀವಿಗಳು ನಾವೆಲ್ಲರೂ
ಅವಳನ್ನು ಪೂಜಿಸೋಣ ನಾವೆಲ್ಲರೂ