ರಕ್ಷಾಬಂಧನ
ರಕ್ಷಾಬಂಧನ

1 min

3.4K
ನನ್ನ ಪ್ರೀತಿಯ ಅಕ್ಕ
ನಿನ್ನನ್ನು ಕಾಡಿಸದೆ ಇದ್ದ ದಿನವಿಲ್ಲ
ನಿನ್ನನ್ನು ಸದಾ ಸ್ಪೂರ್ತಿದಾಯಕವಾಗಿ ಕಂಡೆ
ನಿನ್ನ ಗಟ್ಟಿತನವನ್ನು ಅಪ್ಪ ಹೋದಾಗ ಕಂಡೆ
ನಮ್ಮ ತಾಯಿಗೆ ತಾಯಿಯಾಗಿ ನಿಂತೆ
ನನ್ನನ್ನು ನಿನ್ನ ಮಗುವಾಗಿ ಕಂಡೆ
ನಿನ್ನ ಪ್ರೀತಿಗೆ ನಾನು ಸದಾ ಚಿರಋಣಿ ಆಗಿದ್ದೇನೆ
ಅಪ್ಪನ ಸ್ಥಾನದಲ್ಲಿ ನಿಂತು ನಿನ್ನನ್ನು ಸದಾ ಕಾಪಾಡುವೆ
ನೀನು ಮದುವೆಯಾಗಿ ಗಂಡನ ಮನೆಗೆ ಹೋದರು
ನಮ್ಮ ಮನೆಯ ರಾಜಕುಮಾರಿ ನೀನು.