ಪವನ್ ಚಿರಾಯ

Romance Inspirational Thriller

4  

ಪವನ್ ಚಿರಾಯ

Romance Inspirational Thriller

ಸೌಂದರ್ಯಗಣಿ

ಸೌಂದರ್ಯಗಣಿ

6 mins
630



"ಸೌಂದರ್ಯ"__ ಬೇಗ ಎದ್ದೇಳು ಮಗಳೇ ಕಾಲೇಜಿಗೆ ತಡ ಆಗುತ್ತೆ, ಎಂದು ಶಾಂತಲಾ ಅಡುಗೆ ಮನೆಯಿಂದ ಹಂಚು ಹಾರುವ ಹಾಗೆ ಕೂಗುತ್ತಾಳೆ, ಆಯ್ತು ಅಮ್ಮ ಕೂಗ್ಬೇಡ ಇನ್ ಹತ್ತು ನಿಮಿಷದಲ್ಲಿ ರೆಡಿ ಆಗ್ತೀನಿ ತಿಂಡಿ ಏನ್ ಮಾಡಿದ್ದೀಯಾ, ಮೊದಲು ರೆಡಿ ಆಗಿ ಬಾರೆ ಚಪಾತಿ ಮಾಡ್ತಿದೀನಿ ತಿಂದು ಕಾಲೇಜಿಗೆ ಹೋಗುವಂತೆ.


ಅಮ್ಮಾ,,,, ಏನಮ್ಮಾ ಇದು!! ಚಪಾತಿ ಅಂದು ರೊಟ್ಟಿ ಕೊಟ್ಟೀಯಾ ನಂಗ್ ಬೇಡ ನೀನೇ ತಿನ್ನು, ಬಾಯ್ ಬರ್ತೀನಿ ನಾನು ಎಂದು ಸ್ಕೂಟಿ ತಗೊಂಡು ಕಾಲೇಜಿಗೆ ಹೊರಟಳು.


ಸೌಂದರ್ಯ ತುಂಬಾ ಸೊಂಬೇರಿ, ಅಪ್ಪ ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅಮ್ಮನ ಮುದ್ದಿನ ಮಗಳಾಗಿ ಬೆಳೆದಳು.


ಅಂದು ಕಾಲೇಜಿಗೆ ಬೇರೆಯೊಂದು ಕಾಲೇಜಿಂದ ವರ್ಗಾವಣೆ ಆಗಿ ಬಂದ "ಗಣೇಶ್" ಒಬ್ಬ ಸೀದ ಸಾದ ಹುಡುಗ, ಸೌಂದರ್ಯಳ ಕ್ಲಾಸ್ಗೆ ಬಂದ ಕ್ಷಣ ಸೌಂದರ್ಯ ಅವನ ' ಮೊದಲ ನೋಟಕ್ಕೆ ಮಾರು ಹೋದಳು' ಅಂತ ಆಕರ್ಷಣೆ.


ಈ ಆಕರ್ಷಣೆ ಸ್ನೇಹ ಬೆಳೆಸುವ ಮಟ್ಟಿಗೆ ಹೋಯಿತು, ಇಬ್ಬರು ಪರಸ್ಪರ ಒಳ್ಳೆಯ ಸ್ನೇಹಿತಾಗಿದ್ದರು, ಗಣೇಶ್ ನನ್ನು ಒಂದು ದಿನ ಮನೆಗೆ ಕರೆದುಕೊಂಡು ಹೋಗಿ ತನ್ನ ಅಮ್ಮ ಶಾಂತಲಾಳಿಗೂ ಪರಿಚಯಿಸಿದ್ದಳು, ಹೀಗೆ ಇವರಿಬ್ಬರ ಸ್ನೇಹ ತುಂಬಾ ಗಟ್ಟಿಯಾಗಿ ಬೆಳಯತೊಡಗಿತು.


ಇದ್ದಕ್ಕಿದ್ದಂತೆ ಒಂದು ದಿನ ಕ್ಲಾಸ್ ರೂಂನಲ್ಲಿ ಕುಳಿತಿರುವಾಗ "ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿರುವೆ ನಿನ್ನ ಬಿಟ್ಟು ನನಗಿರಲು ಸಾಧ್ಯವಿಲ್ಲ" ಎಂದು ಹೇಳಿದಾಗ ಅವನು "ನನಗೂ ನಿನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ" ಎಂದ, ಗಣೇಶ್ ಬಾ ನಮ್ಮ ಅಮ್ಮನನ್ನು ಒಪ್ಪಿಸಿ ನಾವು ಮದುವೆ ಆಗಿ ಸುಖವಾಗಿರೋಣ ಎಂದು ಹೊರಟರು.


"ಗಣೇಶ್ ನೀನೇ ಹೇಳು ಎಂದು ಮೆಲುಧನಿಯಲಿ ಹೇಳಿದಳು, ಶಾಂತಲಾ ಆಂಟಿ ಅದೂ ಅದೂ", ಹೇಳು ಗಣೇಶ್ ಏನೂ ಅಂತ, ಮೊದಲು ಬಾ ಕೂತ್ಕೊಂಡ್ ಮಾತಾಡ್ತಿರಿ ಕಾಫೀ ತಂದ್ಕೊಡ್ತೀನಿ ಎಂದು ಹೊರಟಳು, ಹೇ ಗಣೇಶ್ ಹೇಳೋದ್ ಬಿಟ್ಟು ಏನ್ ಮಾಡ್ತಿದೀಯಾ ನೀನು, ಎಲ್ಲಾ ನಾನೇ ಹೇಳ್ಬೇಕಾ, ಅಯ್ಯೋ ನಂಗು ಮಾತಾಡಕ್ ಬಿಡೆ ಹೇಳ್ತೀನಿ ಸುಮ್ಮನೆ ಇರು ಬಾ ಕೂತ್ಕೋಳೋಣ ಎಂದು ಅಲ್ಲೆ ಇದ್ದ ಸೋಪಾ ಮೇಲೆ ಕೂತರು, ಶಾಂತಲಾ ಕಾಫೀ ತಂದು ಕೊಟ್ಟು ಹೇಳು ಗಣೇಶ್ ಏನೋ ಹೇಳ್ಬೇಕು ಅಂದಲಾ,

"ಆಂಟಿ ಅದೂ ಅದೂ ನಾನು ನಾನು ನಿಮ್ಮ ಮಗಳನ್ನಾ ಪ್ರೀತಿಸ್ತಿದೀನಿ, ಅವಳನ್ನೆ ಮದುವೆ ಆಗ್ಬೇಕು ಅಂತ್ತೀದೀನಿ ಅದಿಕೆ ನಿಮ್ಮ ಒಪ್ಪಿಗೆ ಬೇಕು",,,,,,,


ಕೋಪಗೊಂಡ ಶಾಂತಲಾ, "ಹೇಯ್ ಎದ್ದೇಳೋ ಮೇಲೆ ಇಷ್ಟು ದಿನ ಪ್ರೆಂಡ್ಸು ಜೊತೆಯಲ್ಲಿ ಇರ್ತಾರೆ ಅಂತ ಬಿಟ್ರೆ ಮದುವೆ ಆಗ್ತೀನಿ ಅಂತಾ ಹೇಳ್ತೀಯಾ ಮೊದಲು ಮನೆಯಿಂದ ಆಚೆ ನಡಿ ಹೋಗು,

ಆಂಟಿ ನಾನೇಳೋ ಮಾತು ಕೇಳಿ ಮೊದಲು ನಿಮ್ಮೆದುರಿಗೆ ಇರ್ತೀವಿ ಕಾಲೇಜು ಇನ್ನೇನು ೨ ತಿಂಗಳಲ್ಲೇ ಮುಗಿಯುತ್ತೆ ಒಳ್ಳೆ ಕೆಲಸ ಸಿಗುತ್ತೆ ಇಬ್ಬರೂ ನೆಮ್ಮದಿಯಿಂದ ಜೀವನ ನಡೆಸ್ತೀವಿ ನೀವೇನು ಯೋಚನೆ ಮಾಡೋ ಅಗತ್ಯ ಇಲ್ಲ ,

ಅಮ್ಮ ಅಮ್ಮಾ ಒಪ್ಪ್ಕೊಳಮ್ಮಾ ನಾನು ಗಣೇಶ್ ನ ತುಂಬಾ ಪ್ರೀತಿಸ್ತೀದ್ದೀನಿ ನಂಗ್ ಬಿಟ್ಟಿರಕ್ಕಾಗಲ್ಲ ಅಮ್ಮಾ ಅವನ್ನಾ ಪ್ಲೀಸ್ ಅಪ್ಪಂಗೂ ಹೇಳಿ ಒಪ್ಪಿಸಮ್ಮ,,

ಹೇಯ್ ಎದ್ದೇಳೋ ಮೇಲೆ ಇಲ್ಲ ಪೋಲೀಸ್ ಕಂಪ್ಲೇಂಟ್ ಕೊಡ್ತೀನಿ ನೋಡು,

ಆಂಟಿ ಆಂಟಿ ಕೂಲ್ ಕೂಲ್ ನಾವ್ ಮಾಡಿದ್ದು ತಮಾಷೆಗೆ ಎಂದು ಬೀಸೋ ದೊಣ್ಣೆಯಿಂದ ಪಾರಾದ, ಸೌಂದರ್ಯ ಗಲಿಬಿಲಿಗೊಂಡು ಏನ್ ಹೇಳ್ತಿದ್ದಾನೆ ಎಂದು ಜೋರಾಗಿ ನಗುತ್ತಾ ಏಪ್ರಿಲ್‌ ಫೂಲ್ ಅಂತ ಖುಷಿಯಿಂದ ಕುಣಿದಾಡಿದಳು,

ನೀವು ಇದೆ ತರ ತಮಾಷೆ ಮಾಡ್ಕೊಂಡ್ ಇರಿ ಎಂದು ಮೂತಿ ಊದಿಸಿಕೊಂಡು ಅಡುಗೆ ಮನೆ ಸೇರಿದಳು.


ಶಾಂತಲಾ ಆಂಟಿ ನಾನು ಹೋಗ್ತೀದ್ದೀನಿ ಎಂದು ಹೊರಟ, ಸೌಂದರ್ಯ ನಾಳೆ ಕಾಲೇಜಿನಲ್ಲಿ ಸಿಗೋಣಾ ಬಾಯ್ ಎಂದು ಹೊರಟ.


ಮರುದಿನ ಕಾಲೇಜಿನಲ್ಲಿ, ಹೇ ಗಣೇಶ್ ಯಾಕ್ ನೀನು ಅಂಗೆ ಹೇಳಿದ್ದು ನನ್ನ ಕಂಡ್ರೆ ನಿಂಗೆ ಇಷ್ಟ ಇಲ್ವಾ ಥೂ ಹೋಗೋ ನೀನು ತುಂಬಾ ಕೆಟ್ಟವನು ಎಂದು ಕೋಪಗೊಂಡು ಮುಖ ತಿರುಗಿಸಿದಳು,

ಅಯ್ಯೋ ನನ್ನ ಪೆದ್ದು ನಾನೆಲ್ಲಿ ನಿನ್ನ ಪ್ರೀತಿಸಲ್ಲ ಎಂದೆ, ನಿಮ್ಮಮ್ಮನ ರೌದ್ರ ರೂಪ ನೋಡಿ ಈತರ ಮಾಡ್ದೆ ನಾವಿಬ್ಬರೂ ಹೋಡಿ ಹೋಗಿ ಮದುವೆ ಆಗೋಣಾ ಆಮೇಲೆ ಸ್ವಲ್ಪ ದಿನ ಆದ್ಮೇಲೆ ಬಂದ್ರೆ ಆಯ್ತು ಸರಿ ಹೋಗ್ತರೆ, ನಂಗೆತು ಯಾರಿದ್ದಾರೆ ನಾನೊಬ್ಬ ಅನಾಥ ನೀನೊಬ್ಬಳೆ ನನ್ನ ಜೀವನದ ಜೊತೆಗಾತಿ, ನಾಳೆ ರೆಡಿ ಇರು ಬೇರೆ ಊರಿಗೆ ಹೋಗಿ ದೇವಸ್ಥಾನದಲ್ಲಿ ಮದುವೆ ಆಗೋಣಾ,

ಸರಿ ಗಣೇಶ್ ನಾವಿಬ್ಬರೂ ಹೀಗೆ ಸದಾ ಜೊತೆಗಿರೋಣಾ ಏಳೇಳು ಜನ್ಮಕ್ಕು ಎಂದು ಗಣೇಶ್ ನ ಭುಜದ ಮೇಲೆ "ಒರಗಿದಳು".


ಮಾರನೇ ದಿನ ಎಂದಿನಂತೆ ಬಟ್ಟೆ ಬರೆ ಎಲ್ಲಾ ಪ್ಯಾಕ್ ಮಾಡಿಕೊಂಡು ಸೌಂದರ್ಯ ಕಾಲೇಜಿಗೆ ಹೋಗುವೆ ಎಂದು ಶಾಂತಲಾ ಕಣ್ಣು ತಪ್ಪಿಸಿ ಹೊರಟಳು.


ಗಣೇಶ್ ಬಾ ನಾನು ನೀನು ಇಬ್ಬರೂ ದೂರ ಹೋಗಿ ಅಲ್ಲೇ ಇರೋಣಾ ಮತ್ತೆ ಈ ಊರಿಗೆ ಬರುವುದೆ ಬೇಡ ಅಲ್ಲೇ ನಮ್ಮ ಪುಟ್ಟ ಸಂಸಾರದೊಂದಿಗೆ ಖುಷಿಯಾಗಿರೋಣ,

ಹೇಯ್ ಏನ್ ನೀನು ಇದ್ದಕ್ಕಿದ್ದಂಗ್ ಪ್ಲಾನ್ ಚೇಂಜ್ ಮಾಡ್ದೆ ಸರಿ ನಡಿ ಯಾರ್ ಕಣ್ಣಿಗೂ ಬೀಳ್ ಬಾರದು ಎಂದು ಬಸ್ ಹತ್ತಿ ಹೊರಟರು,

ಪರಊರಿನ ಸಣ್ಣ ದೇವಸ್ಥಾನ ಒಂದರಲ್ಲಿ ಮದುವೆ ಆದರೂ, ಗಣೇಶ್ ತನ್ನ ಗೆಳೆಯನ ಸಹಾಯದಿಂದ ಸಣ್ಣ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ.


ಇತ್ತ ಸಂಜೆಯಾದರು ಮಗಳು ಬಂದಿಲ್ಲ ಎಂದು ಶಾಂತಲಾ ಫೋನ್ ಮಾಡಿದಾಗ ಸ್ವಿಚ್ ಆಫ್ ಬಂತು, ಗಣೇಶ್ ಗೆ ಫೋನ್ ಮಾಡಿ ಕೇಳೋಣ ಎಂದು ಮಾಡಿದರೆ ಅವನದು ಕೂಡಾ ಸ್ವಿಚ್ ಆಫ್, ಭಯಗೊಂಡ ಶಾಂತಲಾ ಅರುಣ್(ಪತಿ)ಗೆ ಫೋನ್ ಮಾಡಿ ವಿಷಯ ತಿಳಿಸಿದಳು,

ಈ ವಿಷಯ ನನಗೆ ಮೊದಲೆ ಯಾಕೆ ತಿಳಿಸಿಲ್ಲ ಎಂದು ಕೋಪಗೊಂಡು ಸರಿ ನಾಳೆ ಬೆಳಗ್ಗೆ ಬರುತ್ತೇನೆ ಮೊದಲು ಪೋಲೀಸ್ ಕಂಪ್ಲೇಂಟ್ ಕೊಡು ಎಂದು ಫೋನ್ ಇಟ್ಟ.


ನೋಡಿ ಅಮ್ಮಾ ೨೪ ಘಂಟೆಗೂ ಮುಂಚೆ ಯಾವುದೇ ಕಾಣೆಯಾದ ಕೇಸ್ ತಗೋಳೋದಿಲ್ಲ ನಾಳೆ ತನಕ ಕಾಯಿರಿ ಆಮೇಲೆ ಬರ್ಲಿಲ್ಲ ಅಂದಾಗ ಕೇಸ್ ತಗೋತೀನಿ ಹೋಗಿ ಮನೆಗೆ , ಹೇ ಪಿಸಿ ಇವರನ್ ಮನೆಗೆ ಕಳ್ಸು,

ಸರ್ ದಯವಿಟ್ಟು ನಮ್ಮ ಹುಡುಗಿನಾ ಹುಡುಕಿಸಿಕೊಡಿ ಸರ್ ಅವನೇ ನನ್ನ ಮಗಳನ್ ಕರ್ಕೊಂಡ್ ಹೋಗಿರೋದು ಪ್ಲೀಸ್ ಸರ್ ಏನಾದರೂ ಮಾಡಕ್ಕು ಮುಂಚೆ ಹುಡುಕಿಕೊಡಿ ಸರ್ ಎಂದು ಗೋಗರೆದರು ಪ್ರಯೋಜನವಾಗದೆ ಮನೆಗೆ ಬಂದಳು ಶಾಂತಲಾ.


ಅತ್ತ ಸೌಂದರ್ಯ ಗಣೇಶ್ ಖುಷಿಯಿಂದ ಮಾತಾನಾಡುತ್ತಿದ್ದಾಗ ಒಮ್ಮಲೇ ಸೌಂದರ್ಯಳಿಗೆ ದುಃಖ ಉಮ್ಮಳಿಸಿ ಬಂತು ಅಮ್ಮನ ಪರಿಸ್ಥಿತಿ ನೆನೆದು, ಗಣೇಶ್ ಸೌಂದರ್ಯಳನ್ನು ಸಮಾಧಾನ ಮಾಡುತ್ತಾ ನಾವು ಆದಷ್ಟೂ ಬೇಗ ಮನೆಗೆ ಹೋಗೋಣಾ ಅಮ್ಮನಿಗೆ ಈ ವಿಷಯ ತಿಳಿಸೋಣ ಅನ್ನುತ್ತಾ ನಿದ್ರೆಗೆ ಜಾರಿದರು


ಬೆಳಗ್ಗೆ ಅರುಣ್ ಮನೆಗೆ ಬಂದು, ಶಾಂತಲಾ ಶಾಂತಲಾ,,, ನಿನಿಗೆ ಮೊದಲೆ ಹೇಳಿದ್ದೆ ಯಾರತ್ರನೂ ಅಷ್ಟು ಸಲುಗೆ ಬೆಳ್ಸಕೋಬೇಡ ಅಂತ , ಪೋಲೀಸ್ ಕಂಪ್ಲೇಂಟ್ ಕೊಟ್ಟ,

ಇಲ್ಲ ರೀ ೨೪ ಘಂಟೆಗೂ ಮುಂಚೆ ತಗೋಳಲ್ಲ, ಏನ್ ಮಾಡಿದ್ರು ತಗೊಂಡಿಲ್ಲ ರೀ,

ನಡಿ ಈಗ ಪೊಲೀಸ್ ಸ್ಟೇಷನ್ ಗೆ.


ಸರ್ ನನ್ನ ಹೆಸರು ಅರುಣ್ ಅಂತ ಇವಳು ನನ್ನ ಹೆಂಡತಿ, ಹೆಸರು ಶಾಂತಲಾ ಅಂತ ನೆನ್ನೆ ನನ್ನ ಮಗಳು ಕಾಣೆಯಾದ್ಲು ಅಂತ ಕಂಪ್ಲೇಂಟ್ ಕೊಡಕ್ ಬಂದ್ರೆ,

ಸರ್ ಸರ್ ಅಲ್ಲಿ ರೇಲ್ವೆ ಹಳಿ ಮೇಲೆ ಯಾರೋ ಇಬ್ಬರೂ ಸತ್ತಿದ್ದಾರಂತೆ ಸರ್,

ಏನಯ್ಯಾ ರವಿ ಕರ್ಮ ಇದು, ಅಮ್ಮಾ ನೀವಿಬ್ರೂ ಅಲ್ಲಿ ಕಂಪ್ಲೇಂಟ್ ಬರ್ಸಿ ನಾನ್ ಅದೇನಂತ ನೋಡ್ಕೊಂಡ್ ಬರ್ತೀನಿ.


ಅಯ್ಯೋ ಅಲ್ಲಿ ಯಾರೋ ಪ್ರೇಮಿಗಳಂತೆ ಮನೆಯಲ್ಲಿ ಒಪ್ಪಿಲ್ಲ ಅಂತ ರೈಲಿಗೆ ತಲೆ ಕೊಟ್ಟವರೆ ಗುರುತೆ ಸಿಗ್ದಂಗೆ ಆಗಿದೆ ಪಾಪ ಅದೇನ್ ತಂದೆ ತಾಯಿನೊ ಈಗ ಇಬ್ಬರ ಸಾವು ನೋಡ್ಕೊಂಡ್ ಅದೇನ್ ಸಾಧಿಸ್ಬಿಟ್ರೋ

ಎನ್ನುವ ಪಿಸುಮಾತು ಕೇಳಿ ಶಾಂತಲಾ ಅಯ್ಯೋ ನನ್ನ ಮಗಳೆ ಯಾಕೆ ಹೀಗೆ ಮಾಡ್ಕೊಂಡೆ,


ಗಣೇಶ್ ತಂದಿದ್ದ ಹಣ ದಿನೇ ದಿನೇ ಕರಗುತ್ತಾ ಬಂತು ಮನೆಯ ಯಜಮಾನ ಕೂಡಾ ಇಬ್ಬರನ್ನು ಹೊರಹಾಕಿದ ಯಾವುದೇ ಬೇರೆ ದಾರಿ ಕಾಣದೆ ಮುಂದೆ ಏನೆಂದು ನಡಿಯುವಾಗ ಒಂದು ಅಜ್ಜಿ ಪ್ರಜ್ಞೆ ತಪ್ಪಿ ಬಿದ್ದಳು, ಆ ಅಜ್ಜಿಗೆ ಚಿಕಿತ್ಸೆ ಕೊಡಿಸಿ ವಿಚಾರಿಸಿದಾಗ, ನನಗೆ ಯಾರು ಇಲ್ಲ ಕಣ್ರಪ್ಪಾ ನೀವೂ ನನ್ನ ಜೊತೆನೆ ಇರ್ತೀರಾ ಎಂದು ಅಜ್ಜಿ ಕೇಳಿದಳು,

ಆ ದೇವರೆ ನಮಗೆ ದಾರಿ ತೋರಿದ್ದಾನೆಂದು ಗಣೇಶ್ ಸೌಂದರ್ಯ ಒಪ್ಪಿದರು.


ಅಜ್ಜಿ ಜೊತೆಗೆ ಸೌಂದರ್ಯ ತುಂಬಾ ಚೆನ್ನಾಗಿ ಬೆರೆತಿದ್ದಳು, ಗಣೇಶ್ ಅಲ್ಲೆ ಗಾರೆ ಕೆಲಸ ಮಾಡುತ್ತಾ ಖುಷಿಯಿಂದ ಜೀವನ ಸಾಗಿಸುತ್ತಿದ್ದರು.


ಒಂದು ದಿನ ಅಜ್ಜಿ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದರು,

ಅಷ್ಟೊತ್ತಿಗೆ ಸೌಂದರ್ಯ ೪ ತಿಂಗಳ ಗರ್ಭಿಣಿ ಆಗಿದ್ದಳು, ತುಂಬಾ ದುಃಖದಿಂದ ಅಜ್ಜಿಯ ಅಂತ್ಯಸಂಸ್ಕಾರ ಮಾಡಿಬಂದರು, ಗಣೇಶ್ ನನಗೆ ಅಮ್ಮನ ನೆನಪು ಬರುತ್ತಿದೆ ನಾವು ಅಲ್ಲೇ ಹೋಗೋಣಾ ಬಾ,


ಅಯ್ಯೋ ನನ್ನ ಮುದ್ದು ಮರಿ ಹೋಗೋಣಾ ಇರು ಸ್ವಲ್ಪ ದಿನ ಎಲ್ಲಾ ತಣ್ಣಗಾಗಲಿ,


ಗಣೇಶ್ ನಮ್ಮನ್ನು ಯಾಕೆ ಇನ್ನೂ ಯಾರು ಹುಡುಕಿಕೊಂಡು ಬಂದಿಲ್ಲ ನಾವು ಬೇಡ ಅಂತ ಏನಾದರೂ ಬಿಟ್ಟಿದ್ದಾರ ಒಂದು ತಿಳತಿಲ್ಲ ಕಣೋ,,,,,, ಅದೆಲ್ಲಾ ಯೋಚನೆ ಮಾಡ್ಬೇಡ ನೀನು ಈಗ ರೆಸ್ಟ್ ಮಾಡು.


ಮರುದಿನ ಬೆಳಗ್ಗೆ, ಗಣೇಶ್ ಗಣೇಶ್ ಎಂದು ಎದ್ದು ನೋಡಿದಾಗ ಆಗಲೇ ಅವನು ಅರೆ ಬೆಂದ ಅನ್ನ ಜೊತೆಗೆ ಉಪ್ಪು ಖಾರ ಇರದ ಸಾಂಬಾರ್ ಮಾಡಿ ಕೆಲಸಕ್ಕೆ ಹೊರಟಿದ್ದ, ಅದನ್ನೇ ತಿಂದು ಸೌಂದರ್ಯ ಅಯ್ಯೋ ಪೆದ್ದ ನನಗೆ ಅಡುಗೆ ಬರಲ್ಲ ಅಂದ್ಬಿಟ್ಟು ನೀನೇ ಅಡುಗೆ ಮಾಡಿ ಹೋಗಿದ್ದೀಯಾ ಅಜ್ಜಿ ಎಲ್ಲಾ ಹೇಳ್ಕೊಟ್ಟಿದ್ದಾರೆ ಕಣೋ ಎಂದು ಒಬ್ಬಳೇ ಮುಗುಳ್ ನಗುತ್ತಾ ಮನೆಕೆಲಸ ಮಾಡಲು ಮುಂದಾದಳು.


ಇತ್ತೀಚಿಗೆ ಸೌಂದರ್ಯಳನ್ನು ಕಂಡರೆ ಸಿಡಿದು ಬೀಳುತ್ತಿದ್ದ ಅದೇನು ಅಡುಗೆ ಮಾಡ್ಡಿದ್ದೀಯಾ ಥೂ ಇದು ಒಂದು ಊಟವಾ ನೀನು ಸುಮ್ಮನೆ ಆ ಮೂಲೆಲಿ ಕೂತ್ಕೊ ನಾನೇ ಮಾಡ್ತೀನಿ ಎಂದು ಕೋಪಗೊಂಡು ಅಡುಗೆ ಮಾಡಲು ಕಣ್ಣೀರಾಕುತ್ತಾ ಹೊರಟ,


ತಗೋ ತಿನ್ನು ಎಂದು ತಾನು ಮಾಡಿದ ಅನ್ನ ಸಾರು ತಟ್ಟೆಗೆ ಹಾಕಿ ತಂದಕೊಟ್ಟ,

ಇವನಿಗೆ ನಾನು ಬಾರವಾಗುತ್ತಿದ್ದೇನೆ ಹೊರಗು ದುಡಿದು ಬರುತ್ತಾನೆ ಇಲ್ಲಿ ನನಗೆ ಆಯಾಸ ಆಗಬಾರದೆಂದು ಅಡುಗೆ ಚೆನ್ನಾಗಿಲ್ಲ ಅಂತ ಹೇಳಿ ಅವನೇ ಅಡುಗೆ ಕೂಡಾ ಮಾಡ್ತಿದ್ದಾನೆ ಎಂದು ಮನಸ್ಸಿನಲ್ಲಿ ಕೊರಗಿ, ಗಣೇಶ್ ಇಬ್ಬರೂ ಅಮ್ಮನ ಮನೆಗೆ ಹೋಗೋಣಾ ಬಾ ನಿನ್ನ ಕಷ್ಟ ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ, ಸೌಂದರ್ಯ ಮೊದಲೆ ಗರ್ಭಿಣಿ ಅವಳಿಗೆ ಕಷ್ಟ ತಪ್ಪುವುದೆಂದು ಒಪ್ಪಿದ.


ಮರುದಿನ ಬೆಳಗ್ಗೆ ಇಬ್ಬರೂ ಜೊತೆಯಾಗಿ ಹೊಟ್ಟೆಯೊಳಗೆ ಕರುಳಿನ ಕುಡಿಯೊಂದಿಗೆ ಪಯಣ ಬೆಳೆಸಿದರು, ಸಂಜೆ ಅಮ್ಮನ ಮನೆಗೆ ಬಂದರೆ ಅಲ್ಲಿ ಯಾರು ಇಲ್ಲ, ಪಾಳುಬಿದ್ದ ಮನೆಯಂತಾಗಿದೆ, ಅಕ್ಕ-ಪಕ್ಕದಲ್ಲಿ ವಿಚಾರಿಸಿದಾಗ, ಪಕ್ಕದ ಮನೆಯ ಅಜ್ಜ ಹೇಳಿದ ''ಅಂದು ನೀವು ಇಬ್ಬರು ಓಡಿ ಹೋದಾಗ ನಿಮ್ಮ ಅಪ್ಪ ಅಮ್ಮ ಪೋಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಡಲು ಹೋದಾಗ ಯಾರೋ ಇಬ್ಬರ ಸಾವಿನ ಸುದ್ದಿ ಕೇಳಿ ನೀವೆ ಸತ್ತಿದ್ದೀರೆಂದು ತಿಳಿದು ಅವರ ಮುಖ ಕೂಡಾ ನೋಡದೆ ಮನೆಗೆ ಬಂದು ನೇಣು ಬಿಗಿದುಕೊಂಡು ಸತ್ತರು'' ಅಂದಾಗ ಫುಲ್ ಗಾಬರಿಯಿಂದ ಹೀಗಾಗಬಾರದು ಹೀಗಾಗಬಾರದು ಅಮ್ಮಾ,,,,ಅಪ್ಪಾ,,,,,, ಎಂದು ಕೂಗುತ್ತಾ ಧಡಕ್ಕನೆ ಎದ್ದಳು.


ಎನಾಯಿತು ಸೌಂದರ್ಯ ನಿಂಗೆ ಹುಷಾರಾಗಿದ್ದೀಯಾ ಸಂಜೆ ಓಡಿ ಹೋಗಿ ಮದುವೆ ಆಗೋಣಾ ಅಂತ ಹೇಳಿದ್ನಲಾ ಭಯ ಯಾಕೆ ಕೂಲ್ ಎಂದ,

ಗಣೇಶ್ ಗಣೇಶ್ ನಾನು ಮೊದಲು ಅಮ್ಮ ಅಪ್ಪನ್ನ ನೋಡ್ಬೇಕು ಅಂದಳು,

ಏನೇ ಆಯ್ತು ನಿಂಗೆ ಸಂಜೆ ಓಡಿ ಹೋಗಬೇಕು ನೀನ್ ನೋಡಿದ್ರೆ ಅಮ್ಮ ಅಪ್ಪನ್ನ ನೋಡ್ಬೇಕು ಅಂತಿದ್ದೀಯಾ ಯಾಕೆ ತಲೆ ಗಿಲೆ ಕೆಟ್ಟಿದೆಯಾ ಎನ್ನಲು ಸೌಂದರ್ಯ ಕಂಡ ಕನಸನ್ನೆಲ್ಲ ಎಳೆ ಎಳೆಯಾಗಿ ಹೇಳಿದಳು, ಸೌಂದರ್ಯ ನೀನ್ ಹೇಳಿದ್ ನಿಜ ನಾವ್ ಎಂತ ದೊಡ್ಡ ತಪ್ಪು ಮಾಡ್ತಿದ್ವಿ ಇಬ್ಬರ ಸಾವಿಗೆ ಕಾರಣ ಆಗ್ತಿದ್ವಿ ನಿಮ್ ಅಮ್ಮ ಅಪ್ಪನ ಒಪ್ಪಿಸೆ ಮದುವೆ ಆಗೋಣಾ ನಡಿ ಎಂದು ಮನೆ ಕಡೆ ಹೊರಟರು.


ಅಮ್ಮ ನನ್ನನ್ನು ಕ್ಷಮಿಸಿ ಬಿಡಮ್ಮ ನಾವು ದೊಡ್ಡ ತಪ್ಪು ಮಾಡುತಿದ್ದೆವು ಎಂದು ನಡೆದ ಘಟನೆಯನ್ನೆಲ್ಲ ಸಂಪೂರ್ಣವಾಗಿ ಹೇಳಿದಳು,

ಅಯ್ಯೋ ಹುಚ್ಚಿ ನೀವು ಮಾತ್ರ ತಮಾಷೆ ಮಾಡ್ತೀರಾ ನಾನು ಮಾಡ್ಬಾರ್ದ, ಗಣೇಶ ಒಳ್ಳೆಯ ಹುಡುಗ ಅವನ್ನೆ ಕೊಟ್ಟು ಮದುವೆ ಮಾಡೋಣಾ ಅನ್ಕೊಂಡಿದ್ದೆ ಮೊನ್ನೆ ನೀವೇ ಬಂದು ಹೇಳಿದಾಗ ನಂಗೆ ಇನ್ನೂ ಜಾಸ್ತಿ ಖುಷಿ ಆಯಿತು ಇಷ್ಟು ಬೇಗ ಒಪ್ಪ್ಕೊಂಡ್ರೆ ಮಜಾ ಇರಲ್ಲ ಅಂತಾ ನಾನು ಹಾಗೆ ಮಾಡಿದ್ದು ಎಂದು ಮಗಳನ್ನು ಮುದ್ದಾಡಿದರು, ನಂತರ ಅರುಣ್ ಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿ, ಅರುಣ್ ಬಂದ ನಂತರ ಇಬ್ಬರಿಗೂ ಮದುವೆ ಮಾಡಿಸಿ ಅನ್ಯೂನ್ಯವಾಗಿ ಸುಖಸಂಸಾರ ನಡೆಸಿದರು.


ಶು


Rate this content
Log in

More kannada story from ಪವನ್ ಚಿರಾಯ

Similar kannada story from Romance