Sonu Imambhai

Abstract Horror Others

3.4  

Sonu Imambhai

Abstract Horror Others

ಸಾವಿನ ಭಯ

ಸಾವಿನ ಭಯ

2 mins
250


ಲೀಸಾ ಮತ್ತು ಮೇರಿ ಕಾಲೇಜಿನ ಸ್ನೇಹಿತೆಯರು.ಅವರಿಬ್ಬರ ಸ್ನೇಹ ಸಂಬಂಧ ತುಂಬಾ ಆಳವಾಗಿ ಬೆಳೆಯ ತೊಡಗಿತು,ಒಂದಿನ ಲೀಸಾಳನ್ನು ಮೇರಿಯು ತನ್ನ ಮನೆಗೆ ಕಾಫಿ ಕುಡಿಯಲಿಕ್ಕೆ ಆಹ್ವಾನವಿತ್ತಳು.ಅದಕ್ಕೆ ಸಮ್ಮತಿಸಿ ಲೀಸಾ ಹೊರಡಲು ರೆಡಿಯಾಗಿ‌ ಹೊರಟು ನಿಂತಳು.ಸ್ವಲ್ಪ ನಡಿಗೆ ಕ್ರಮಿಸಿದ ತಕ್ಷಣ ಮೇರಿಯ ಮನೆ ಆದರೂ ಒಬ್ಬರನ್ನೊಬ್ಬರು ಮುಂಚೆ ಎಂದೂ ನೋಡಿರಲಿಲ್ಲ! ಇನ್ನೇನು‌ ಮೇರಿಯ ಮನೆ ತಲುಪಿದಳು ಲೀಸಾ.ಮೇರಿ ಖುಷಿಯಿಂದ ಸ್ವಾಗತಿಸಿದಳು.ಇಬ್ಬರು ಸ್ನೇಹಿತೆಯರು ಮಾತು ಶುರು ಮಾಡಿದರು,ಮಾತಿನಾಡುತ್ತಾ ಕುಳಿತ ಇಬ್ಬರಿಗೂ ಸೂರ್ಯ ಇನ್ನೇನು ಸರಿದು ಹೋಗಿ ಕತ್ತಲಾಗುವ ಹಂತಕ್ಕೆ ಬಂದಿದೆ ಅನ್ನುವ ಪರಿಯೇ ಇರಲಿಲ್ಲ.!ಥಟ್ಟನೆ ಲೀಸಾ ಕಿಟಕಿಯ ಕಡೆ ಕಣ್ಣು ಹಾಯಿಸಿದಾಗ ಕತ್ತಲಾಗುತ್ತದೆ ಎಂದು ಅರಿವಾಯಿತು!

ಲೀಸಾ ನಾನಿನ್ನು ಹೊರಡುತ್ತೇನೆ ಎಂದು ಮೇರಿಗೆ ಹೇಳಿದಳು.


ಮೇರಿಯು ಮನೆಗೆ ಅತಿಥಿಯಾಗಿ ಬಂದ ತನ್ನ ಸ್ನೇಹಿತೆ ಮಾತಿನ ಬರದಲ್ಲಿ ಕಾಫಿ ಕೊಡುವುದೇ ಮರೆತು ಹೋಗಿದೆ ಎನ್ನುವ ತನ್ನ ತಪ್ಪು ಅರಿವಾಯಿತು, ತಪ್ಪಾಯಿತು ಎಂದು ಕ್ಷಮೆ ಕೇಳಿ, ಲೀಸಾಳಿಗೆ ಕಾಫಿ ಕುಡಿದು ಹೋಗು ಎಂದು ಹೇಳಿದಳು. ಇತ್ತ ಲೀಸಾ " ತೊಂದರೆ ತಗೋಬೇಡ ಕಣೆ,ಮತ್ತೊಮ್ಮೆ ಬಂದಾಗ ಕಾಫಿ ಅಷ್ಟೇ ಅಲ್ಲ ಊಟ ಮಾಡ್ಕೊಂಡು ಹೋಗ್ತೀನಂತೆ" ಎಂದಳು.


ಆದರೆ ಮೇರಿ " ಇಲ್ಲ! ನೀನು ನಮ್ಮ ಮನೆಗೆ ಬಂದ ಅತಿಥಿ ನಿನ್ನ ಹಾಗೆ ಕಳಿಸುವುದು ನಮ್ಮ ಸಂಸ್ಕಾರವಲ್ಲ " ಎನ್ನುತಾ ಅಡುಗೆ ಮನೆಗೆ ತೆರಳಿದಳು.


ಇತ್ತ ಕಾಯುತ್ತ ಕುಳಿತ ಲೀಸಾ,ಸುಮ್ಮನೆ ಮನೆಯೆಲ್ಲಾ ಕಣ್ಣಾಹಿಸುತ್ತಾ ಲೀಸಾಳ ರೂಮಿಗೆ ಹೋದಳು,ಅಲ್ಲೊಂದು ಹುಡುಗಿ ಕುಳಿತಿರುವುದು,ಲೀಸಾಳ ಗಮನಕ್ಕೆ ಬರುತ್ತೆ. ಆದರೆ ಮೇರಿಗಿಂತ ಚಿಕ್ಕವಯಸ್ಸಿನ ಹುಡುಗಿ ಯಾರೆಂಬ ಕುತೂಹಲದಿಂದ ಆ ಹುಡುಗಿ ಕಡೆ ಹೋಗುತ್ತಾಳೆ.ಹೋಗಿ ಆ ಹುಡುಗಿಗೆ ಭುಜ ಮುಟ್ಟಿ " ನೀವು ಯಾರೆಂದು ತಿಳಿಯಬಹುದೇ?" ಎಂದು ಕೇಳುತ್ತಾಳೆ ಅದಕ್ಕೆ ಆ ಹುಡುಗಿ " ನಾನು ವಿನ್ನೀ ಅಂತ ಮೇರಿಯ ತಂಗಿ" ಎಂದು ಹೇಳುತ್ತಾಳೆ.ಆದರೆ ಮೇರಿಯು ತನೆಗೆ ತಂಗಿ‌ ಇರುವುದರ ಬಗ್ಗೆ ಎಲ್ಲಿಯೂ ಹೇಳಿಕೊಂಡಿರುವುದಿಲ್ಲ ,ಅದನ್ನೇ ಲೀಸಾ ಯೋಚಿಸುತ್ತಾ ನಿಂತಾಗ ಆ ಕಡೆಯಿಂದ ಮೇರಿ " ಲೀಸಾ ಎಲ್ಲೋದೆ? ಲೀಸಾ.....ಲೀಸಾ...." ಎಂದು ಕರೆದಳು. ತಕ್ಷಣವೇ "ಬಂದೇ ಇರೇ" ಎನ್ನುತ್ತಾ ಲೀಸಾ ಹೋದಳು.


ಮೇರಿ: ಕಾಫಿ ಬಿಸಿ ಇರೋವಾಗ್ಲೆ ಕುಡಿಬೇಕು,ಬಾ ಬೇಗ ಕುಡಿ....

ಲೀಸಾ: ( ಕಾಫಿ ಸವಿಯುತ್ತಾ) ತುಂಬಾ ಚೆನ್ನಾಗಿ ಮಾಡಿದ್ದೀಯ

ಮೇರಿ: ಥ್ಯಾಂಕ್ಯು

ಲೀಸಾ: ( ಮುಗುಳ್ನಗುತ್ತಾ) ಅದು ಹಾಗಿರಲಿ ನಿನ್ ತಂಗಿಗೆ ಯಾಕೆ ಕಾಫಿ ಕೊಡಲಿಲ್ಲ ನೀನು?ಪಾಪ ನಿನ್ ರೂಮ್‌ನಲ್ಲಿ ಒಬ್ಬಳೇ ಕೂತಿದ್ದಾಳೆ...

ಮೇರಿ ಒಂದು ಸಲಕ್ಕೆ ಭಯವಾದರೂ ಸಹ ಸುಮ್ನೆ ಯೋಚನೆ ಮಾಡೋಕೆ ಶುರು ಮಾಡಿದಳು..

ಲೀಸಾ: ಮೇರಿ ಏನು ಯೋಚಿಸ್ತಾ ಇದ್ದೀಯ?

ಮೇರಿ: ಯಾವ ತಂಗಿ ಬಗ್ಗೆ ಮಾತಾಡ್ತಿದ್ದೀಯ ಕಣೆ?

ಲೀಸಾ: ವಿನ್ನಿ ಬಗ್ಗೆ...


ಮೇರಿ ಭಯದಿಂದ ನಡುಗ ತೊಡಗಿದಳು...ಇದನ್ನ ಗಮನಿಸಿದ ಲೀಸಾ " ಏನಾಯ್ತು ? " ಎಂದಳು.

ಆವಾಗ ಲೀಸಾ ಭಯ ಪಡಬಹುದು ಅಂದುಕೊಂಡು "ಏ..ಏನಿಲ್ಲ..." ( ಭಯದಿಂದ)

ಲೀಸಾ: ಹೇಳು ಏನಾಯ್ತು...


ಕೊನೆಯದಾಗಿ ಲೀಸಾಳ ಹಠಕ್ಕೆ ಮಣಿದ ಮೇರಿ, " ವಿನ್ನಿ ನನ್ನ ತಂಗಿ ಹೌದು ಆದರೆ ಅವಳು ಕಾರ್ ಅಪಘಾತದಲ್ಲಿ ಮರಣ ಹೊಂದಿ ಮೂರು ವರ್ಷವಾಯ್ತು" ಎಂದಳು...


ಲೀಸಾ: (ಭಯದಿಂದ) ನಿಜಾನಾ?

ಮೇರಿ: ಹೌದು ಕಣೇ!

ಮೇರಿಯನ್ನು ತಕ್ಷಣ ಕರೆದುಕೊಂಡು ಲೀಸಾ ಮೇರಿಯ ರೂಮ್‌ಗೆ ಕರೆದುಕೊಂಡು ನಡೆದಳು.ಆಗ ರೂಮ್‌ನಲ್ಲಿ ಎಲ್ಲವೂ ಕಾಲಿಯಾಗಿತ್ತು! ಅಲ್ಲಿ ಯಾರು ಇರಲಿಲ್ಲ..!


Rate this content
Log in

More kannada story from Sonu Imambhai

Similar kannada story from Abstract