Sonu Imambhai

Children Stories Inspirational Children

3.5  

Sonu Imambhai

Children Stories Inspirational Children

ತಾಯಿ

ತಾಯಿ

2 mins
1.4K


ಜಗತ್ತಿನಲ್ಲಿ ಎಲ್ಲ ಭಾಗದಲ್ಲೂ ದೇವರು ಬರಲಾಗುವುದಿಲ್ಲ ಅನ್ನುವ ವಿಚಾರಕ್ಕೆ ದೇವರು ತಾಯಿಯನ್ನು ಸೃಷ್ಟಿಸಿದ ಎನ್ನುವ ಮಾತು ನಾವು ನೀವೆಲ್ಲರೂ ಕೇಳಿದ್ದುಂಟು! ತಾಯಿಯು ತನ್ನ ಮಕ್ಕಳಿಗಾಗಿ‌ ಮಾಡಿದ ತ್ಯಾಗಕ್ಕೆ ಎಷ್ಟೇ ಜನ್ಮ ಅವಳ ಸೇವೆ ಮಾಡಿದರು ಅವಳ ಋಣ ತೀರಿಸಲು ಸಾಧ್ಯವಿಲ್ಲ!ಅಂತಹ ತಾಯಿಯ ಋಣ ತೀರಸಲು ಮುಂದಾದ ದಡ್ಡ ಮಗ ಹಾಗೂ ತಾಯಿಯ ನಡುವಿನ ಸಂಭಾಷಣೆ ನಿಮಗಾಗಿ.....


ಮಗ:ಅಮ್ಮ ನನಗಾಗಿ ನೀನು ಅದನ್ನ ಮಾಡಿದ್ದೀನಿ,ಇದನ್ನ ಮಾಡಿದ್ದೀನಿ‌ ಅನ್ನುವ ಮಾತುಗಳು ನನಗೆ ಸಹಿಸಲಾಗುತ್ತಿಲ್ಲ.ಎಷ್ಟು ದಿನಗಳವರೆಗೂ ಇದನ್ನೇ ಹೇಳ್ತೀಯಾ?ನನಗಾಗಿ ನೀನು‌ ಏನು ಮಾಡಿದ್ದೀಯ ಹೇಳಿ ಬಿಡು,ಇವತ್ತೇ ನಿನ್ನೆಲ್ಲ ಋಣ ತೀರಿಸಿಬಿಡುವೇ ನಿನ್ನ ಜೊತೆ ಇರುವ ಎಲ್ಲಾ ಕ್ಷಣಗಳು ಇದನ್ನೇ ಕೇಳುವುದಾಯ್ತು!

ತಾಯಿ:ನನ್ನ ಋಣ ತೀರಿಸುವೆಯಾ?

ಮಗ:ಹೌದು ಅದಕ್ಕಾಗಿ ನಾನು ಏನು ಮಾಡಬೇಕು ಹೇಳು.

ತಾಯಿ:ಇವತ್ತು ಒಂದು ದಿನ ನನ್ನ ಕೋಣೆಯಲ್ಲಿ ನನ್ನ ಪಕ್ಕ ಮಲಗು ನನ್ನೆಲ್ಲಾ ಋಣ ನೀನು ತೀರಿಸಿದಂತಾಗುತ್ತದೆ.

ಮಗ:ಇಷ್ಟು ಸುಲಭವೇ ನಿನ್ನ ಋಣ ತೀರಿಸುವುದು?

ಆಯ್ತು ಇವತ್ತಿನ ದಿನ ನಾನು ನಿನ್ನ ಕೋಣೆಯಲ್ಲಿ ಮಲಗುವೆ.

(ರಾತ್ರಿ ಆಗುತ್ತಿದ್ದಂತೆ ಮಗನನ್ನ ಕರೆದಳು ತಾಯಿ,ತಾಯಿ ಮಗ ಇಬ್ಬರು ಮಲಗಿದರು,ಮಗನಿಗೆ ನಿದ್ದೆ ಬರುತ್ತಿರುವ ಸಂದರ್ಭದಲ್ಲಿ ತಾಯಿ ಅವನನ್ನು ಎಚ್ಚರಿಸಿದಳು)

ತಾಯಿ:ಮಗ ನನಗೆ ತುಂಬಾ ಬಾಯಾರಿಕೆ ಆಗುತ್ತಿದೆ,ಸ್ವಲ್ಪ ನೀರು ತಂದು ಕೊಡು.

(ಮಗನಿಗೆ ನಿದ್ದೆಯಿಂದ ಎ‍ಚ್ಚರಿಸಿದ ಕೋಪ ಇದ್ದರು,ಸಮಾಧಾನದಿಂದ ಉತ್ತರಿಸಿದ.)

ಮಗ:ಆಯ್ತು ಅಮ್ಮ!ತಂದುಕೊಡುವೆ...

(ಮಗ ನೀರು ತಂದು ಕೊಡುತ್ತಿದ್ದಂತೆಯೇ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆಯ ತುಂಬಾ ನೀರು ಹಾಕುತ್ತಾಳೆ)

ಮಗ:ಅಮ್ಮ ಇದೇನು ನಿನ್ನ‌ ಕೆಲಸ?ನೀನು‌ ನೀರು ಚೆಲ್ಲಿದರೇ ನಾನು ಹೇಗೆ ನಿದ್ರಿಸಲಿ ಈ ಹಾಸಿಗೆಯಲ್ಲಿ ???(ಕೋಪದಿಂದ)

ತಾಯಿ:ತಪ್ಪಾಯ್ತು ಮಗ,ವಯಸ್ಸಾಯ್ತು ಕೈಯಲ್ಲಿ ನೀರಿನ ಲೋಟ ಹಿಡಿಯುವ ಶಕ್ತಿಯು ನನ್ನಲ್ಲಿ ಇಲ್ಲ,ಹಾಗಾಗಿ ಕೈ ಜಾರಿತು,ಪರವಾಗಿಲ್ಲ ಏನು ಆಗಲ್ಲ ಅದರಲ್ಲೇ ಮಲಗು.

ಮಗ:ಏನು ಕರ್ಮ ನನ್ನದು!ಇದೇ ಗೋಳಿನ ಬದುಕು ನನ್ನದಾಯಿತು,ಯಾವಾಗ ಈ ಮುದುಕಿಯಿಂದ ನೆಮ್ಮದಿ ದೊರೆಯುವುದೋ ನನಗೆ!(ಅಮ್ಮ ಮೇಲಿನ ಕೋಪದಲ್ಲಿ ಗುಣುಗುತ್ತಾ)

(ಹೀಗೆ ಸ್ವಲ್ಪ ಹೊತ್ತಾದ ಮೇಲೆ ಮಗನಿಗೆ ನಿದ್ದೆ ಬರಲಾರಂಭಿಸಿತು. ಮತ್ತೆ ಮಗನನ್ನು ಎಚ್ಚರಿಸಿ ನೀರು ತಂದುಕೊಡಲು ಹೇಳಿದಳು,ಮಗ ಕೋಪದಿಂದ ಎದ್ದು ಮತ್ತದೆ ಗೊಣಗಾಟದಲ್ಲಿ ನೀರು ತಂದುಕೊಡುವನು.ತಾಯಿ ಮೊದಲಿನ ಹಾಗೆ ಸ್ವಲ್ಪ ನೀರು ಕುಡಿದು ಮಗನ ಹಾಸಿಗೆ ಮೇಲೆ ನೀರು ಹಾಕಿದಳು.)

ಮಗ:ಅಮ್ಮ ನಿನಗೆ ಬುದ್ದಿ ಇಲ್ಲವೇ,ನನ್ನ ಹಾಸಿಗೆ ನೀನು ಒದ್ದೆ ಮಾಡುತ್ತಲೇ ಹೋದರೆ ನಾನು ಹೇಗೆ ನಿದ್ರಿಸಲಿ,ಈ ನರಕ ನನಗೆ ಬೇಡ ನಾನು ನನ್ನ ಕೋಣೆಯಲ್ಲಿಯೇ ಮಲಗುವೆ,ನೀನು ಬೇಡ ನಿನ್ನ ಋಣವು ಬೇಡ!(ತಾಯಿ ಮಗನನ್ನ ಕರೆದು ಜೋರಾಗಿ ಹೊಡೆಯುವಳು.)ಯಾಕೆ ಹೊಡೆದೆ???(ಕೋಪದಲ್ಲಿ)

ತಾಯಿ:ಇವತ್ತು ನಿನ್ನ ಹಾಸಿಗೆ ನೀರಾಯಿತೆಂದು ನನ್ನ ಮೇಲೆ ಅಷ್ಟು ಕೋಪದಲ್ಲಿ ನೀನು ನನಗೆ ಮಾತನಾಡಿದೆ,ನೀನು ಚಿಕ್ಕವನಿದ್ದಾಗ ನನ್ನ ಪಕ್ಕದಲ್ಲಿ ನಿನ್ನ ಮಲಗಿಸಿಕೊಂಡಾಗ,ನೀನು ಮೂತ್ರ ಮಾಡಿದರೆ ಆ ಜಾಗದಲ್ಲಿ ನಾನು ಮಲಗಿ ನಿನ್ನ ಬೆಚ್ಚಗಿರಿಸುತ್ತಿದ್ದೆ.ಎಡಕ್ಕೆ ಮೂತ್ರ ಮಾಡಿದರೆ ನಿನ್ನ ನನ್ನ ಬಲಗಡೆ ಮಲಗಿಸಿ ನಿನ್ನ ಮೂತ್ರದಲ್ಲಿ ನಾನು ಮಲಗುತ್ತಿದ್ದೆ,ಒಂದುವೇಳೆ ನೀನು ಅಲ್ಲಿಯೂ ಮೂತ್ರ ಮಾಡಿದರೆ,ನನ್ನ ಎದೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದೆ.ನಿನ್ನ ಹಾಸಿಗೆ ಬರಿ ನೀರಿನಿಂದ ಒದ್ದೆಯಾಗಿದೆ, ಆದರೆ ನಿನ್ನ ಹೊಲಸಿನಿಂದ ನನ್ನ ಹಾಸಿಗೆ ಒದ್ದೆ ಮಾಡಿದ್ದರೂ ನಾನು ನಿನ್ನ ಭಾರವೆಂದು ದೂರಲಿಲ್ಲ,ಆದರೆ ನೀನು ನನಗೆ ವಯಸ್ಸಾದ ಕಾರಣ ನನ್ನ ಬಗೆಗೆ ಅಗೌರವದ ನುಡಿಗಳಾನ್ನಾಡುವೆಯಾ??ಈ ಜಗತ್ತಿನಲ್ಲಿ ತಾಯಿಯ ಋಣ ಯಾವ ಮಗನಿಗೂ ತೀರಿಸಲು ಸಾಧ್ಯವಿಲ್ಲ ಅನ್ನುವುದನ್ನು ಅರಿತುಕೊಂಡು ಬದುಕು ಮಗ.!


(ಮಗನಿಗೆ ತಾನು ಮಾತನಾಡಿದ ನುಡಿಗಳು ತನಗೆ ನಾಚಿಕೆ ತರಿಸಿದವು,ತಾಯಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡ!)

ನಮಗಾಗಿ ತನ್ನೆಲ್ಲಾ ಆಸೆಗಳನ್ನ ಬದಿಗೊತ್ತಿ ಕೇವಲ ಮಕ್ಕಳಿಗಾಗಿ ಬದುಕುವ ಜೀವ ತಾಯಿ!ಅಂತಹ ಜಗತ್ತಿನ ಎಲ್ಲಾ ತಾಯಂದಿರಿಗೆ ನನ್ನ ನಮನಗಳು,ಹಾಗೆ ತಾಯಿಯನ್ನು ನಾಯಿಯಂತೆ ನೋಡದಿರಿ,ತಾಯಿಯಿಲ್ಲದೆ ಜಗವೆಲ್ಲ ನಮ್ಮ ಜೊತೆಗಿದ್ದರೂ,ತಾಯಿಯೆಂಬ ಶ್ರೇಷ್ಠ ಚೈತನ್ಯ ಇಲ್ಲದ ಕೊರಗು ನರಕಕ್ಕಿಂತ ಕೀಳಾಗಿ ಇರುತ್ತದೆ!ತಾಯಿಯನ್ನು ‌ಗೌರವಿಸಿ.....

*ಭಾವನೆಗಳ ಬದುಕು ಸೋನು

(ವಿ.ಸೂ: ಒಬ್ಬ ವ್ಯಕ್ತಿಯ ಹಿಂದಿ ಭಾಷಣದ ಕನ್ನಡ ಅನುವಾದ )


Rate this content
Log in

More kannada story from Sonu Imambhai