Tejaswi sajjan

Horror Crime Thriller

3  

Tejaswi sajjan

Horror Crime Thriller

ರೀ - ಬೂಟ್ (re-boot)

ರೀ - ಬೂಟ್ (re-boot)

9 mins
218


"ಹಾ ಭಾವ... ಇವಾಗ ಮನೆ ಇಂದ ಹೊರಟೆ.. ಕ್ಯಾಬ್ ಇವಾಗ ಬಂತು.. ಐ ವಿಲ್ ಬಿ ಇನ್ ದ ಏರ್ಪೋರ್ಟ್ ವೆರಿ ಸೂನ್.. ಅಲ್ಲಿಂದ 13 ಘಂಟೆ journey ಅಲ್ವಾ.. ಸೀ ಯು ಸೂನ್... "

ಹೀಗೆ ಫೋನ್ಇಳಿಸಿ ಕ್ಯಾಬ್ ಡೋರ್ ಬಿಗಿ ಮಾಡಿಕೊಂಡ ಧ್ರುವ.

ಅವನು ಜಗತ್ತಿನ ಕಣ್ಣಲ್ಲಿ ಒಬ್ಬ ಐಎಎಸ್ aspirant, ಸಾಮಾನ್ಯಕ್ಕಿಂತ್ತಾ ಹೆಚ್ಚೇ ಎನ್ನಬಹುದಾದಂತ ಬುದ್ಧಿಮಟ್ಟ.. ಸಧ್ಯಕ್ಕೆ ಸಾಧನೆಗೆಂದು ಕಾಯುತ್ತ ತನ್ನ ಓದಿನಲ್ಲಿ ಮಗ್ನನಾಗಿದ್ದ ವಿದ್ಯಾರ್ಥಿ ಎಂದೇ ಹೇಳಬಹುದು..

ಆದರೆ ಜಗತ್ತಿಗೆ ಗೊತ್ತಿರದ ಇನ್ನೊಂದು ಜಗತ್ತು ಅವನ ಸುತ್ತ ಜೇಡರಬಲೆಯಂತೆ ಸುತ್ತಿಕೊಳ್ಳುತ್ತಿತ್ತು..

ಇದ್ದಕಿದ್ದಂತೆ ಒಂದು ದಿನ ಅಪ್ಪನೆದುರಿಗೆ ಕೂತಾಗ ತಾನು ನ್ಯೂಯೋರ್ಕ್ ನಲ್ಲಿರುವ ತನ್ನ ಅಕ್ಕನ ಮನೆಗೆ ಹೋಗುತ್ತೇನೆಂದು.. ಹೇಗಿದ್ದರೂ ಕಾಲಾವಕಾಶವಿದೆ.. ಒಂದು ಕೋರ್ಸ್ ಮಾಡಿಕೊಂಡು ಬರುತ್ತೇನೆಂದು ಹೇಳಿ ವೀಸಾ ಗೆ ಅಪ್ಲೈ ಮಾಡಿರುವುದಾಗಿಯೂ ಹೇಳಿ ಒಪ್ಪಿಸಿದ..

ಈಗ ನ್ಯೂಯಾರ್ಕ್ಗೆ ಹೊರಟ್ಟಿದ್ದ ಫ್ಲೈಟ್ ಕಣ್ಣ ಮುಂದೆ ಬಂದಿಳಿಯಿತು..

ಸಣ್ಣ ಜಿಟಿ ಜಿಟಿ ಮಳೆ ಬಂದು ಹೋಗಿ ರನ್ವೇ ತುಂಬೆಲ್ಲ ಬೆಳಕಾಗುವಂತ ತೆಳು ಪರದೆಯ ನೀರು..

ಫುಟ್ಬೋರ್ಡ್ ಮೇಲೆ ನಿಂತು ಹಿಂತಿರುಗಿ ನೋಡಿದ..

ವಾಪಸ್ ತಾಯ್ನಾಡಿಗೆ ಬರುತ್ತೇನೆಂಬ ನಂಬಿಕೆಯಿಲ್ಲ.. ಕೊನೆಯಬಾರಿ ಕಣ್ತುಂಬಿಕೊಲ್ಲುವವನಂತೆ ಒತ್ತರಿಸಿಕೊಂಡು ಬಂದ ಕಣ್ಣನೀರನಿಂಗಿಸಿಕೊಂಡು ಮುಷ್ಠಿಬಿಗಿ ಮಾಡಿ ಮುಮ್ಮುಖ ತಿರುಗಿ ನಡೆದು ತನ್ನ ಜಾಗ ಹುಡುಕಿಕೊಂಡು ಕೂತು..

"ಮ್ಮ್.. ಇನ್ನು 13 ಘಂಟೆ.. ನನ್ ಹಿಂದೆ CIA, ISI, MOSSAD, KGB ಯಾರ್ ಬೇಕಾದ್ರು ಇರ್ಬೋದು ಅಂತ ಹೇಳಿದಾರೆ.. ಇಲ್ಲೇ.. ಈ ಫ್ಲೈಟ್ನಲ್ಲೆ.. ಕೋ ಪ್ಯಾಸೆಂಜರ್ ಆಗಿನೇ ಇರ್ಬೋದು.. ನೋಡೋಣ.. ಏನಾಗುತ್ತೋ"

            


                   *        *      *



J.F.K ಏರ್ಪೋರ್ಟ್ನಲ್ಲಿ..

( ಏರ್ಲೈನ್ಸ್ ನಂ: 1308 ಲೀವಿಂಗ್ ಟು ಎಸ್ಟೋನಿಯಾ, EST 19:30 ಈಸ್ ಆನ್ ದಿ ರನ್ವೇ. ಏರಿಂಡಿಯಾ ನಂ:1121 ಫ್ರಮ್ ಬೆಂಗಳೂರು ಅರೈವಿಂಗ್ ಶಾರ್ಟ್ಲಿ )

"ಇಲ್ಲಿ ಲಗೇಜ್ಗೆ ಕಾಯ್ತಾ ಇದ್ದೀನಿ..ಹಾ.. ಸಿಮ್ ಕಾರ್ಡ್ ಎಲ್ಲ ಸಿಗ್ತು.. ಬೇಗ ಬನ್ನಿ ಭಾವ..ಹೊಟ್ಟೆ ಹಸೀತಿದೆ"

"ಹಾ ಮಗ..ನಮ್ಮನೆಇಂದ ಅಲ್ಲಿಗೆ 90 ಮಿನಿಟ್ಸ್ ಡ್ರೈವ್.. and i am already halfway through .. ಬರ್ತಾ ಇದ್ದೀನಿ. ಅಷ್ಟ್ರಲ್ಲಿ ಲಗೇಜ್ ಎಲ್ಲ ತಗೊಂಡು ಟರ್ಮಿನಲ್ 9 ಗೇಟ್ 3 ಹತ್ರ ಇರು"

"ಹೂ sure..ಬನ್ನಿ "




                  *         *         *





"....ಮ್ಮ್.. ಮತ್ತೇನ್ ಮಗ..? {ಗಲ್ಪ್.. } ಹೆಂಗಿದೆ ನಿನ್ ಸಿವಿಲ್ಸ್ ಗೆ ಪ್ರೆಪರೇಶನ್? ಏನ್ ರಾಂಕ್ ಬರ್ತೀಯೋ? "

(ಬಾಯಲ್ಲಿ ತುತ್ತಿಟ್ಟುಕೊಂಡು ನೀರು ಕುಡಿಯುತ್ತ ಯಾದವ, ಅವನ ಭಾವ ಕೇಳಿದ )

"ಪರ್ವಾಗಿಲ್ಲ ಭಾವ.. ನಡೀತಿದೆ ಹಾಗೆ..ವಿಶೇಷ ಏನಿಲ್ಲ ಅನ್ನಕೊಳ್ಳಿ.. ರಾಂಕ್ ಎಲ್ಲ ಪ್ರೆಡಿಕ್ಟ್ ಮಾಡಿಲ್ಲ ನೋಡಿ.. ಡೋಂಟ್ ವರಿ..ಒಳ್ಳೆ ರಾಂಕೆ ಬರ್ತೀನಿ.. "

ಮುಗುಳ್ನಕ್ಕ ಧ್ರುವ..ಅಷ್ಟ್ರಲ್ಲಿ ಅಡ್ಡ ಬಾಯಿ ಹಾಕಿದ ಅವನಕ್ಕ ನೇಹಾ..

"ರೀ.. ನೀವ್ ಹಂಗ್ ಅಂದ್ಕೊಳ್ಳೋಕೆ ಹೋಗ್ಬೇಡಿ.. PU ಅಲ್ಲಿದ್ದಾಗಲೂ ಹಿಂಗೇ ಡವ್ ಮಾಡ್ತಿದ್ದ...ರಿಸಲ್ಟ್ ಬಂದಾಗ K-CET 3rd ರಾಂಕ್ ಹೊಡ್ದ್ಬಿಟ್ಟ.. ಎಲ್ಲ ಡವ್ ಗಳು ಗೊತ್ತು ನಮ್ ಗೆ... "

"ಸುಮ್ನಿರೇ ಹಂಗೇನಿಲ್ಲ... ಆದ್ರೂ ಭಾವ ನೀವ್ ಏನೇ ಹೇಳಿ... ಅಡಿಗೆ ಮಾತ್ರ ಅಮೃತ... "

(ಎಂದು ನಗಲು ಶುರು ಮಾಡುತ್ತಾನೆ )

"ಅಯ್ಯೋ ಆದ್ರೂ ಕಥೆ ಕೇಳ್ಬೇಡ ಗುರೂ!! ಮೊನ್ನೆ ಇಂಡಿಯನ್ ಇನ್ಸ್ಪೈರ್ಡ್ ಇಟಾಲಿಯನ್ ರಿಸ್ಸೊಟ್ಟೊ ಮಾಡ್ತೀನಿ ಅಂತ ಹೇಳಿ ಉಳೀ ಕಿಚಡಿ ಮಾಡಿಕೊಟ್ಟು...ಎರಡ್ ದಿನ literally I couldn't go work to my office man..!she broke my appetite! ಬೇಡಾ ನನ್ ಫಜೀತಿ.."

ಇಬ್ಬರು ಅವಳ ಮುಖ ನೋಡಿ ನಗಲು ಶುರು ಮಾಡುತ್ತಾರೆ.. ಸಿಟ್ಟಿಗೆದ್ದ ನೇಹಾ...

"ಯಾಕೋ ನನ್ಮಗನೇ!!?? ಹಾಕೆಸ್ಕೊಂಡ್ ಹಾಕೆಸ್ಕೊಂಡ್ ಹೊಡ್ದೆ!! ಆವಾಗ ಚೆನ್ನಗಿತ್ತಾ? "

"ಅಯ್ಯೋ ಬಿಟ್ಟಬಿಡ್ಡಮ್ಮ ನನ್ನ !!"

"ಸಾಕು ಸಾಕು ನಿಮ್ ಜಗಳ ನಿಲ್ಸಿ !!!"

(ಎಲ್ಲರೂ ನಗಲು ಶುರು ಮಾಡುತ್ತಾರೆ )

         

               *       *          *

ಅಮೇರಿಕಾದ ಟಿಪಿಕಲ್ ಕಂಟ್ರಿ ವುಡ್ಕ್ಯಾಬಿನ್ ಮನೆ. ಕೊಂಚ ದೊಡ್ಡದೆಂದೇ ಹೇಳಬಹುದು. ಸುತ್ತ ಮುತ್ತ ತನ್ನ ಸೆರಗನ್ನೆಬ್ಬಿಸ್ಸಿದ್ದ ಹಚ್ಚ ಹಸುರಿನ  ಹಾರ್ರಿಮನ್ನ್ ಕಾಡುಗಳು ಮತ್ತು ಪರ್ವತ ಶ್ರೇಣಿಗಳು. ಮಧ್ಯ ಅಲ್ಲಲ್ಲಿ ಕೊಂಚ ಚುಕ್ಕಿಗಳನಿಟ್ಟoತ ಹುಲ್ಲುಹಾಸುಗಳು...

ಜನರು ಅಲ್ಲಲ್ಲಿ ಹೈನುಗಾರಿಕೆ, ಹಂದಿಗಳ ಸಾಕುವಿಕೆ ಮಾಡಿಕೊಂಡೆ ಜೀವನ ನೆಡೆಸುತ್ತಿದ್ದರು.

ಎಲ್ಲೋ ಒಂದು ಪೆಟ್ರೋಲ್ ಬಂಕುಗಳು, ಅದಕ್ಕಂಟಿಕೊಂಡಂತೆ ಸಣ್ಣ ಸುಪೆರ್ಮಾರ್ಕೆಟ್ಗಳು.

ಇಷ್ಟು ಬಿಟ್ಟರೆ ಜನಕ್ಕೆ ತಮ್ಮ ಕಷ್ಟ, ಸುಖ, ನೋವು, ನಲಿವು , ದುಃಖ, ದುಮ್ಮಾನ ಹೇಳಿ ಕೊಳ್ಳಲು ಸಿಗುವ ಸಂಗಾತಿಗಳು, ಮಹಾಗೊಂಡಾರಣ್ಯ, ಕಾರೆಂಬ ಕತ್ತಲು, ಭೋರ್ಗರೆವ ಬೀಸುಗಾಳಿ, ಕಾಡಿನ ಗರ್ಭದಿಂದ ಬರುವ ಪ್ರಾಣಿಸಂಕುಲದ ಚೀರಾಟಗಳು.ಇಷ್ಟೇ..

"ಲೋ ಧ್ರುವ... ಇನ್ನೊಂದ್ ವರ್ಷ ಆದ್ರೂ ಇಲ್ಲೇ ಇರ್ತ್ಯ ಅಲ್ವಾ .. ಸುಮ್ನೆ ಟೈಮ್ ಯಾಕ್ ವೇಸ್ಟ್ ಮಾಡ್ತ್ಯ? ಮನೇಲಿ ನಾನು ಭಾವ ಇಬ್ಬರು ಇರಲ್ಲಪ.. ನಿಂಗು ಬೇಜಾರಲ್ವ? "

"ಹ್ಞೂ ಕಣೆ... ಸಾಕಾಗ್ಹೋಗುತ್ತೆ ಅನ್ನಿಸ್ತಿದೆ.. ನಾನ್ ಅನ್ಕೊಂಡ್ ನ್ಯೂಯೋರ್ಕ್ ಏನೇನು ಅಲ್ಲ ಇದು.... ಅಟ್ಲಿಸ್ಟ್ ನಮ್ ಮಲ್ನಾಡ್ ತರ ಇಲ್ಲವಲ್ಲೇ? "

"ಅದು ಬಿಡು. ನಾನ್ ಹೇಳೋದ್ ಕೇಳು ನೀನು ನಾಳೆ ಸಿವಿಲ್ ಸರ್ವೆಂಟ್ ಆಗೋವನಿದಿಯ. my brother will be a responsible guy tomorrow! ಏನಾದ್ರು ಉಪಯೋಗ ಆಗೋ ಕೋರ್ಸ್ ಆದ್ರೂ ಮಾಡೋ ಧ್ರುವ !"

ಆಗ ಯಾದವನು..

" ಹೂ ಮಗ.. ಇಲ್ಲೇ ಹಾರ್ರಿಮನ್ನ್ ಸ್ಟೇಟ್ ಯೂನಿವರ್ಸಿಟಿ ಅಂತ ಇದೆ ಅಲ್ವಾ...ನಾಳೆ ಹೋಗಿ ವಿಚಾರಿಸಿ ಬಾ...ಸರಿ ಹೋದ್ರೆ ಸೇರುವೆಯಂತೆ.. ಏನು? "

"ನಾನು ಮುಂಚೆನೇ ಇದ್ರ ಬಗ್ಗೆ ಯೋಚ್ನೆ ಮಾಡಿದೀನಿ ಭಾವ.. ಹಾರ್ರಿಮನ್ನ್ ಸ್ಟೇಟ್ ಯೂನಿವರ್ಸಿಟಿ ಗೇಟ್ ಕೂಡ ಬರ್ದು ಪಾಸ್ ಆಗೇ ನಂಗೆ ಸ್ಟೂಡೆಂಟ್ ವೀಸಾ ಸಿಕ್ಕಿದ್ದು. ಫೋರೆನ್ಸಿಕ್ ಸೈನ್ಸ್ ಅಲ್ಲಿ ಸ್ಪೇಸಿಯಲೈಸ್ಡ್ ಡಿಪ್ಲೋಮ ಕೋರ್ಸ್ ಮಾಡ್ಬೇಕು ಅನ್ಕೊಂಡಿದೀನಿ.. i belive it would be really helpful.."

"ರೀ... ನಾನ್ ಹೇಳ್ಲಿಲ್ವ.... ಇವ್ನು ಹಿಂಗೇ ಬಾಂಬ್ ಮೇಲೆ ಬಾಂಬ್ ಹಾಕ್ತಾ ಇರ್ತಾನೆ ನೋಡಿ "

"ನೀನು ಬೆಡ್ ರೆಡಿ ಮಾಡು ನದಿಯಮ್ಮ... ನಿದ್ದೆ ಬರ್ತಿದೆ "

"ಹಾ ಬಾ ಹೀಗೆ ಮೇಲೆ ಹೋಗಣ...ಅಲ್ಲೇ ರೆಡಿ ಮಾಡಿದೀನಿ..ಹಂಗೆ ಬೆಳಿಗ್ಗೆ ತಿಂಡಿ ಆದ್ಮೇಲೆ ನಾನೇ ಡ್ರಾಪ್ ಮಾಡ್ತೀನಿ... ಸಂಜೆ ನಿಮ್ ಭಾವ ಪಿಕ್ ಮಾಡ್ತಾರೆ "

"ಡನ್ sister!!"

"ಹಾಗೆ.. ನೀನು ಟ್ಯಾಬ್ಲೆಟ್ ಎಲ್ಲ ತಗೋತಿದ್ಯಾ ಅಲ್ವೇನೋ ಪುಟ್ಟ? ಇವಾಗ ಹೇಗಿದೆ? "

"ಹ್ಮ್ಮ್... ಗೊತ್ತಲ್ವಾ.. ಏನು ಮಾಡೋಕಾಗಲ್ಲ ಕಣೆ.. ಇದೊಂತರ ಬಿಟ್ಟು ಬಿಡ್ಡೆ ಇರೋ ಖಾಯಿಲೆ.. ಅನುಭವಿಸಬೇಕು ವಾಸಿ ಆಗೋವರ್ಗು... "

"ಗುರುರಾಯ್ರಿದ್ದಾರೆ... ನೀನು ತಲೆ ಕೆಡಿಸ್ಕೊಬೇಡ "

ಹೀಗೆ ವಿನೋದವಾಗಿ ಮಾತಾಡುತ್ತ ಮೆಟ್ಟಿಲ ಹತ್ತಿರ ಬರುತ್ತಿದ್ದಂತೆ...

"ಧಡಾರ್!!!!"



ಇಬ್ಬರು ಬೆಚ್ಚುತ್ತಾರೆ..

"ಏನಕ್ಕ ಅದು ಶಬ್ಧ? "

"..........."

"ಹೇಯ್... ನಿನ್ನೆ ಕೇಳಿದ್ದು... ಏನದು ಶಬ್ಧ? "

(ತಡವರಿಸುತ್ತ ) "ಏನಿಲ್ಲ ಕಣೋ.. ಮೋಸ್ಟ್ಲಿ ಗ್ಯಾರೇಜ್ ಸ್ಟೋರ್ರೂಮ್ ಡೋರ್ ಓಪನ್ ಆಗಿರ್ಬೋದು ಅನ್ಸುತ್ತೆ.. ನಿಮ್ ಭಾವ ನೋಡ್ತಾರೆ ಬಿಡು... ಇಲ್ಲಾಂದ್ರೆ ಬೆಳಿಗ್ಗೆ ನೋಡಿದ್ರಾಯ್ತು... ಲೇಟ್ ಆಯ್ತು... ನೀನ್ ಬಾ "

"ಹ್ಮ್ಮ್.. ಸರಿ ಬಾ "

                 *             *               *


ಅದು ಹಾರ್ರಿಮನ್ನ್ ಸ್ಟೇಟ್ ಯೂನಿವರ್ಸಿಟಿ ಇದ್ದ ಕಾಸಲ್. ಇರೋಕ್ವೋಯಾನ್ ಮತ್ತು ಅಲ್ಗೊಂಕ್ವೋಯಾನ್ ಬುಡಕಟ್ಟುಗಳು ವಸಾ ಹತ್ತಿಗಾಗಿ ಹೋರಾಡಿದ, ಬೇಲಿಗಳನ್ನು , ಕೋಟೆ ಗಳನ್ನು ಕಟ್ಟಿದ ಜಾಗ.

ಈ ಹಾರ್ರಿಮನ್ನ್ ಎಂಬ ದಟ್ಟ ಅಡವಿಯ ಪರ್ವತ ಶ್ರೇಣಿಗಳ ನಟ್ಟ ನಡುವೆ, ಇತಿಹಾಸದ ನಿಗೂಢ ಸತ್ಯಗಳನ್ನು, ಕೇಳದ ಚೀರಾಟಗಳನ್ನು, ಹಾಡದ ಲಾವಣಿಗಳನ್ನು ಗರ್ಭದಲ್ಲಡಗಿಸಿ, ಅಲುಗದೆ ಹುತ್ತದಂತೆ ಕೂತಿತ್ತು.

ಆ ದೈತ್ಯ ಕಾಸಲ್ ನ ಕೂಡ ಪೂರ್ಣವಾಗಿ ಯಾರು ನೋಡಿರಲಿಲ್ಲ. ಅದರ ಹಲವಾರು ಅನ್ವೇಷಿಸದ ಜಾಗಗಳು ಆ ದೆವ್ವದಂಥ ಕಾಡಿನ ಕಬಂಧಬಾಹುಗಳಲ್ಲಿ ಜೀರ್ಣವಾಗಿ ಹೋಗಿತ್ತು.

"ಏನ್ ಗುರು ಇದು ಹೀಗಿದೆ!? ಯಾವ್ ಕಡೆ ಇಂದ ಹೋಗ್ಬೇಕು ಈ ಕ್ಯಾಂಪಸ್ಗೆ? ಎಂಟ್ರನ್ಸ್ ಗೇಟೇ ಕಾಣಿಸ್ತಿಲ್ವಾಲ್ಲ? "

ಜುಯ್ಯನೆ ಹೋದ ಕಾರು ಹಾರಿಸಿಕೊಂಡು ಹೋದ ಎಲೆಗಳ ಗತಿಯಷ್ಟೇ ಅನಿರೀಕ್ಷಿತವಾಗಿತ್ತು ಅವನ ಮುಂದಿನ ದಾರಿ. 

ಹಾಗೆ ಮುಂದೆ ಯಾವುದೋ ಕೋಟೆಯ ಕವಲೊಂದು ಕಂಡಂತಾಗಿ ಅಲ್ಲಿಗೆ ನೆಡೆದ ಧ್ರುವ.

ಹಾರ್ರಿಮನ್ನ್ ಸ್ಟೇಟ್ ಯೂನಿವರ್ಸಿಟಿ ಯು ಈ ತೆರನಾಗಿ ಜೀರ್ಣಾವಸ್ಥೆಯಲ್ಲಿದ್ದ ಕಾಸಲ್ ನ ಉಪಯೋಗಿಸಬಹುದಾದ ಜಾಗವನ್ನು ಗುತ್ತಿಗೆ ಹಿಡಿದು ಅದರಲ್ಲಿಯೇ ಕಾಲೇಜು ಕ್ಯಾಂಪಸ್ ಅನ್ನು ನಡೆಸುತ್ತಿತ್ತು.

ಹಳೆಯ ಕೋಟೆಯೊಂದರ ಕಿಂಡಿಯಿಂದ ನಡೆದಂತಾ ಅನುಭವವಾಯ್ತು ಧ್ರುವನಿಗೆ. ನಡೆವ ದಾರಿಯ ಇಕ್ಕೆಲಗಳಲ್ಲಿಯೂ ಉದ್ದನೆಯ ಭೂತಾಕಾರದ ಮರಗಳು ಯಾರ ಆರೈಕೆಯಡಿಯಲ್ಲಿಯೂ ಬೆಳೆದಂತೆ ಕಾಣಲಿಲ್ಲ.ಯಾವುದೊ ಯುದ್ಧದ ಯಾರೋ ರಾಜನಡಿ ಯುದ್ಧ ಮಾಡಿದ ಯಾರೋ ಸಹಸ್ರ ಸೈನಿಕರ ಕಳೇಬರಗಳ ಆಕಾರ-ಸತ್ವಗಳೆರಡನ್ನು ಉಂಡು ದೈಯ್ಯದಂತೆ ಬೆಳೆದ ಮರಗಳಾಗಿ ಕಂಡವು.

ದೂರದಲ್ಲಿ ಯಾರೋ ನಡೆದುಕೊಂಡು ಹೋಗಿತ್ತಿರುವಂತೆ ಕಂಡಿತು ಧ್ರುವನಿಗೆ.

"hey! I think I have been lost. would you mind showing me the way to the main campus office of the universe?"

"oh not at all! you look like a new dawg to this place, and you look like an Indian."

"I am dhruv, from India, Karnataka to be precise..well you do look a bit like Indian too. I ain't any wrong I suppose... "

"nice to meet u dhruv.. I am Catherine. and u are right.. ನನ್ನ ಅಜ್ಜಿ ತಾತ are from mysore, But ನನ್ನ ತಾಯಿ, she is an american. so yeah ನಂಗೆ ಕನ್ನಡ ಸ್ವಲ್ಪ ಬರುತ್ತೆ "

"oh tats great!! ಹಾಗಾದ್ರೆ ನಿಮಗೆ ನಾನು ಇಲ್ಲಿ ಗೊತ್ತಿಲ್ದೆ ಇರೋ ವಿಚಾರ matte ಜಾಗಗಳ ಬಗ್ಗೆ ಕೇಳಿದ್ರೆ, would you mind? "

ನಗುತ್ತಾನೆ

"anytime homie, cools from my side. "

" thank you so much!"

ಹಾಗೆ ಮಾತನಾಡುತ್ತ ಬರುವಾಗ ದಾರಿ ಇಬ್ಬಾಗವಾಗುವoತೆ ಕಂಡಿತು.

"fine then... i gotta take a different route now, you need to walk for anotger 10 mins to reach the campus..

catch u later"

ಎಂದು ಕ್ಯಾಥರೀನ್ ಳು ಇನ್ನೊಂದು ದಾರಿ ಹಿಡಿಯ ಹೊರಟಳು..

"hey! ಈ ದಾರಿ? where does it go"?

"........"

"bye...."

                  *           *              *

ತನ್ನ ಇಷ್ಟದ ಕ್ಲಾಸಿಕಲ್ ಮಕ್ಕಳ ಕಾದಂಬರಿ ಹ್ಯಾರಿ ಪಾಟರ್ ಕಥೆಯ hogwarts ಕಾಸಲ್ ನಂತೆ, halloweem ಥೀಮ್ ಒಂದರ ರೂಪಕದಂತೆ ಕಂಡ ಈ ಕಾಸಲ್ ಧ್ರುವನ ಮನಸ್ಸಿಗೆ ಬಹಳೇ ಹಿಡಿಸಿತ್ತು. ಪ್ರಫುಲ್ಲ ಸಂಗೀತದ ಪಲ್ಲವಿಯನ್ನು ಅನುಭವಿಸುವ0ತೆ ಆ ಜಾಗದ ಆತ್ಮವನ್ನು ಅನುಭವಿಸತೊಡಗಿದ್ದ ಧ್ರುವ..

"......no brother, this college, it sucks.i mean to the core man."

" true tat. But dude, trust me. with all the places around this college. you will have the days to be remembered in ur life!"

ಕ್ಯಾಂಪಸ್ಗೆ ಹೋಗಿ ಸೇರಿದ ತರುವಾಯ ಅಲ್ಲಿನ ಗೆಳೆಯರೊಂದಿಗೆ ಹರಟಲು ಶುರುಹಚ್ಚಿಕೊಂಡ  ಧ್ರುವ...

" I think one of our seniors would also like to join us in our expeditions homies. she is a senior to us I believe " ಎಂದ ಧ್ರುವ.

"woah, wait. did u say u just flirted a senior? you are nuts, bro" ಉದ್ಗರಿಸಿದ ಥಾಮಸ್.

"dude, dude wait, come on man, who is that...? " ಕುತೂಹಲಿಯಾಗಿ ಕೇಳಿದಳು ಜೆನ್ನಾ.

"ah..I just know her by her name. katherine "

"katherine....? "

ಒಟ್ಟಿಗೆ ಎಲ್ಲರು ಕೇಳುತ್ತಾರೆ... ಆತಂಕ ಮಿಳಿತ ಉದ್ಘಾರ ದಿಂದ...

"yeah...why? what's so wrong about that "ಕುತೂಹಲ, ಆತಂಕ ಬೆರೆತ ಧ್ವನಿಯಲ್ಲಿ ಕೇಳಿದ ಧ್ರುವ...

ತತ್ಕ್ಷಣ ಅಡ್ಡ ಹಾಕಿದ ನತಾಶಾ...

"there is no one with that name in the campus.. let's leave guys.."

             

ಎಂದು ಹೇಳ ಹೆಸರಿಲ್ಲದಂತೆ ಎಲ್ಲರು ಒಮ್ಮೆಲೇ ಹೊರಟು  ಹೋದರು..

     

             *              *              *

        

"what the..." ಎಂದುಕೊಂಡ ಧ್ರುವ.

ಕ್ಯಾಥೆರಿನ್ ಎನ್ನುವವಳು ಯಾರು ಇಲ್ಲ? ಏನಿದರರ್ಥ? ಹಾಗಾದರೆ ಬೆಳಿಗ್ಗೆ ನನಗೆ ದಾರಿ ತೋರಿಸಿದವರ್ಯರು? ನನ್ನೊಂದಿಗೆ ಬಂದಿದ್ದು, ಮಾತನಾಡಿದ್ದು, ಅನ್ಯ ದಾರಿ ಹಿಡಿದಿದ್ದು...?

ಇವರೆಲ್ಲ ಒಂದೇಸಲ ಈ ತೆರನಾಗಿ ಎದ್ದು ಹೋದದ್ಯಾಕೆ?

ಗೊಂದಲದ ಗೂಡಾಯ್ತು ಧ್ರುವನ ತಲೆ.

            *           *          *

ಸಾವರಿಸಿಕೊಂಡ ಧ್ರುವ ಮುಂದೆ ವಿಚಾರಿಸುವ ಎಂದುಕೊಂಡ...

ಕಾಲೇಜ್ನಲ್ಲಿ ತನಗೆ ಮುಂಚಿನಿಂದಲೂ ಇಷ್ಟವಾದ ಜಾಗ ಅಂದ್ರೆ ಅದು ಲೈಬ್ರರಿ. ಈ ಕ್ಯಾಂಪಸ್ನ ಲೈಬ್ರರಿ ಹೇಗಿದೆ ನೋಡೋಣ ಎಂದುಕೊಂಡು ಅಲ್ಲಿದ್ದ ಕ್ಯಾಂಪಸ್ ಲೆಜೆಂಡ್ ಒಂದರ ಬಳಿ ಬಂದ.ಪ್ಯಾಸೇಜು ಒಂದನ್ನು ದಾಟಿ ಬರುತ್ತಿದಂತೆಯೇ....

ದೂರದಲ್ಲಿ ಮೇಲಂತಸ್ತಿನ ಮೇಲಿಂದ ಯಾರೋ ಧುಮುಕುವುದಕ್ಕೆ ನಿಂತಿರುವಂತೆ ಕಂಡಿತು...

ಗಾಬರಿಬಿದ್ದ ಧ್ರುವ ಓಡಿಬಂದು ಹಿಡಿಯುವುದಕ್ಕೂ ಆ ಹುಡುಗಿ ಹಾರುವುದಕ್ಕೂ ಸರಿ ಹೋಯ್ತು...

ಕೊನೆಗೂ ಕೈ, ಜಾರಲಿಲ್ಲ!!

ಅವಳನ್ನು ಎತ್ತುತ್ತಲೇ ಅವಳೇನೋ ವಿಶೇಷವಾಗಿ ಕಂಡಳು...ಅಪ್ಸರೆಯಲ್ಲ ... ಆದರೂ ಏನೋ ವಿಶೇಷವಾಗಿ ಕಂಡಳು..

ಅವಳೇನು ಇವನು ಕಂಡ ಮೊದಲ ಸುಂದರಿ ಅಲ್ಲ... ಅಥವಾ ಬೇರೆಯವರಿಗೆ ಸುಂದರಿಯಾಗಿಯೂ ಕಾಣಬಲ್ಲಂತವಳೂ ಅಲ್ಲ...

ಆದರೆ ಪ್ರತಿಯೊಬ್ಬ ಹುಡುಗನಿಗೂ ಒಂದು ಆಸೆ ಇರುತ್ತೆ.ಅವನ ಹುಡುಗಿ ಅವನಿಗೆ ದೇವತೆಯಂತೆ ಕಾಣಿಸ್ಬೇಕು. ನೋಡಿದ ತಕ್ಷಣ ನನ್ನೊವಳು ಅನ್ನಿಸ್ಬೇಕು. "ಏನ್ ಗುರು ಇಷ್ಟ್ ಚೆಂದ ಇದಾಳೆ !" ಅನ್ನಿಸ್ಬೇಕು.

ಆ ಒಂದು ಕ್ಷಣದಲ್ಲಿ ಕಾಣಿಸ್ತಾಳೆ. ಅದು ಪ್ರಕೃತಿ ಅನ್ಸುತ್ತೆ. ಮುಂದೆ ಯಾವತ್ತು ನೋಡಿದ್ರು ಹಾಗೆ ಕಾಣಿಸ್ತಾಳೆ. ದೇವತೆ ತರ. ಅವಳು ಬೇರೆಯವರಿಗೆ ಹೇಗೆ ಕಂಡರೂ, ಗುಣ-ನಡತೆಗಳು ಇಂಥವೆಂದು ತಿಳಿದಮೇಲೂ ಇವನಿಗೆ ಅವಳು ಸ್ವಪ್ನಸುಂದರಿಯೇ !

ಆ ಸ್ವಪ್ನಸುಂದರಿ ಇವನಿಗೆ ಮುಖ ತೋರಿಸದಂತೆ ಅಳುತ್ತ, ಪಂಚವಟಿಯಲ್ಲಿ ಮಾಯವಾದ ಮಾಯಾಜಿಂಕೆಯಂತೆ ಮಾಯವಾದಳು,

ಸ್ವಪ್ನಸುಂದರಿಯೇ !

          *                 *               *


"hi.. ನನ್ ಹೆಸರು ಶಾನ್. you can call me Mr.shaun. ತುಂಬಾ ದಿನ ಆದ್ಮೇಲೆ ನಮ್ ನೆಲದ ಹುಡ್ಗನ್ನೋಡಿ ಬಹಳ ಖುಷಿ ಆಯ್ತು "

" ನನಗೂ ಸರ್!! ಈ ವಯಸ್ಸಲ್ಲಿ ! I mean you are 93!

ಇಷ್ಟು ದೊಡ್ಡ ರೆಸ್ಪಾನ್ಸಿಬಿಲಿಟಿ ತಗೊಂಡು ಇಲ್ಲಿ ಲೈಬ್ರರಿಯನ್ ಆಗಿದಿರಲ್ಲ... U truly are an inspiration " ಎಂದ ಧ್ರುವ, ಅತ್ಯಂತ ಅನಿರೀಕ್ಷಿತವಾಗಿ ಸಿಕ್ಕ ತನ್ನದೇ ನಾಡಿನ ಮತ್ಸದ್ದಿಯಂತೆ ಕಂಡ ಶಾನರಿಗೆ.

"You see mr.dhruv. ನಾನು ಈ ದೇಶಕ್ಕೆ ಬಂದು 65 ವರ್ಷ ಮೇಲಾಯ್ತು. ಇಲ್ಲಿ ಬಂದ್ಮೇಲೆ ತುಂಬಾ ಕಷ್ಟಗಳನ್ನ ನೋಡಿದೀನಿ.. ನಾನು ಓದಿದ್ದ archeology ಗೆ ಇದಕ್ಕಿಂತ ಒಳ್ಳೇದು ಅನ್ನಿಸ್ಕೊಳೋ ಸಂಬಳದ ಕೆಲಸ ಇನ್ನೊಂದ್ ಸಿಗಲ್ಲಪ್ಪ. ಅದಿಕ್ಕೆ ಇಲ್ಲೇ ಇದ್ದೀನಿ."

" ಅಯ್ಯೋ.. ಹಾಗನ್ನಬೇಡಿ ಸರ್. ನಿಮ್ಮಂಥ archeologistists ಇಲ್ಲ ಅಂದಿದ್ರೆ ತಮ್ಮ ಇತಿಹಾಸ ಗೊತ್ತಿಲ್ಲದೇ ಎಷ್ಟೋ ದೇಶಗಳು ಗತವೈಭವವನ್ನೇ ಮರ್ತ್ಬಿಡ್ತಿದ್ವು ಅನ್ಸುತ್ತೆ. ಡೆಡ್ ಸೀ ಸ್ಕ್ರೋಲ್ಸ್ ನಿಂದ ಟುಟುನ್ಕಾಮೂನ್ ಸಮಾಧಿ ವರೆಗೆ ಎಲ್ಲ ನಿಮ್ಮಂತವರು ನೀಡಿದ ಕೊಡುಗೆ ಅಲ್ವೇ ಸರ್? "

"ಪ್ರಪಂಚದ ಎಲ್ಲ archaelogical ಎಸ್ಪಿಎಡಿಷನ್ಗಳು incomplete my boy. ಯಾವೊಬ್ಬ archeologist ಗೂ ಸಹ ತಾನು ಹುಡುಕಹೊರಟ ವಸ್ತು ಸಿಗದೇ, ಬೇರೇನೋ ಸಿಕ್ಕಿ ಹೆಸರಾದವನೇ, ಕಥೆಗಳನ್ನಷ್ಟೇ ಕೇಳಿ el-dorado ವನ್ನ ಹುಡುಕಿದವರೆಷ್ಟು? ಇಂಕಾನ್ನರ ರಾಜಧಾನಿ ಯನ್ನುಡುಕ ಹೊರಟವರಿಗೆ ಕೊನೆಗೆ ಸಿಕ್ಕಿದು ಮಾಚು ಪಿಚು ಅಲ್ಲವೇ? archeolgy and history ಎರಡೂ ಯಾವಾಗ್ಲೂ ಅನಿರೀಕ್ಷಿತಗಳು ಮತ್ತು ಅದ್ಭುತಗಳನ್ನೇ ಅಡಡಗಿಸಿಕೊಂಡಿರುತ್ತವೆ. ಆಶ್ಚರ್ಯವೆಂದರೆ ಎರಡೂ ಮಾನವನಿರ್ಮಿತವೇ. ಅದೇ ಜೀವನ.. "

ಶಾನರೊಂದಿಗೆ ಮಾತನಾಡುತ್ತ ಧ್ರುವನಿಗೆ ಮನಸ್ಸು ಹಾಯಾದೆನಿಸಿತು. ತನ್ನವರೊಬ್ಬರು ಮನಸ್ಸು ಬಿಚ್ಚಿ ಕೊಳ್ಳಲು ಇದ್ದಾರೆ ಎಂದಿಗೂ ಹಿತವೇ ಅಲ್ಲವೇ?

" mr.shaun, ಈ ಕಾಸಲ್ ನ ಕಥೆ ಏನು? "

"so u are intrested about this castle, let me tell you. ಈ ಜಾಗ ಬಹಳ ಹಿಂದೆ ಇರೋಕ್ವೋಯಾನ್ ಮತ್ತು ಅಲ್ಗೊಂಕ್ವೋಯಾನ್ ಎಂಬ ಬುಡಕಟ್ಟು ಜನಾಂಗದವರು ಸಾಮರಸ್ಯ ದಿಂದಲೇ ಇದ್ದ ಜಾಗ, ಕಾಲಾನಂತರ ರಾಜಕೀಯ ಪರಿಸ್ಥಿತಿಗಳು ಹತೋಟಿಸಲಾಗದಂತೆ ಕೈಮೀರಿ ಶತಮಾನಗಳ ಶತೃತ್ವಕ್ಕೆ ಬೀಜವಾಯ್ತು.. 16 ನೇ ಶತಮಾನದ ಪೂರ್ವಾರ್ಧದಲ್ಲಿ ಈ ಬುಡಕಟ್ಟುಗಳ ಮೇಲೇರಿದ dutch ವಸಾಹತುಶಾಹಿ ಆಡಳಿತ ಈ ಜಾಗದಲ್ಲಿ ಈ ಮಹಾಕೋಟೆ ಕಟ್ಟಿತು.. ಮತ್ತೆ ಬುಡಕ್ಕಟ್ಟು ಜನಾಂಗಕ್ಕೂ ಹೊರಗಿನವರಿಗೂ ಹೊಡೆದಾಟ ಪ್ರಾರಂಭವಾಗಿ 1796ರ ಸುಮಾರಿಗೆ ಈ ನೇಟಿವ್ ಅಮೆರಿಕನ್ನರ ಕೈಗೆ ಈ ಕೋಟೆ ಬಂತು. 1812 ರಲ್ಲಿ ನಡೆದ ಉತ್ತರ ಕೆನಡಾದ ಯುದ್ಧದ ಪರಿಣಾಮವೊಂದರಂತೆ ಈ ಜಾಗಕ್ಕೇರಿಬಂದ ಬ್ರಿಟಿಷರು ಇಲ್ಲಿ ನರಮೇಧ ನಡೆಸಿ ಈ ಜಾಗವನ್ನು ವಶಮಾಡಿಕೊಂಡರು. ಮೂಲ ಅಮೆರಿಕನ್ನರ ಮೂಲ ಜಾಗವು ಅವರಿಗೆ ಇಲ್ಲದಂತಾಯ್ತು ನೋಡು.. ಇದನ್ನೇ ಇತಿಹಾಸ ಅನ್ನೋದಲ್ವೇ.. full of surprises and unpredictable incidenta popping out of no where?.. "

"Tats quite a story to be honest ! by the way ಎಷ್ಟು ದೊಡ್ಡದಾಗಿರ್ಬೋದು mr.shaun ಈ castle? "

"1815 ರಲ್ಲಿ ನಡೆದ ಸರ್ವೇ ಪ್ರಕಾರ ಸುಮಾರು 2.5 ಸ್ಕ್ವೇರ್ ಕಿಲೋಮೀಟರುಗಳು, ಅರ್ಥಾತ್ 550 ಎಕರೆ "

"really.. ! I MEAN ಅಷ್ಟೊಂದ್ ದೊಡ್ಡದಾಗಿ ಕಾಣ್ಸಲ್ಲ ಅಲ್ವಾ ಈ ಕ್ಯಾಂಪಸ್? "

ಮುಗುಳ್ನಕ್ಕ mr.shaun,

"my Dear young man, ನೀನು ನೋಡ್ತಿರೋದು ಕ್ಯಾಂಪಸ್ ನ 15-20% ಮಾತ್ರ. ಉಳ್ದಿದ್ದು ಈ ದಟ್ಟ ಕಾಡಿನಲ್ಲಿ ಜೀರ್ಣವಾಗಿ ಹೋಗಿದೆ. ಇಟ್ಸ್ unexplored"

"tat sounds crazy sir"

" it is indeed!"

ಧ್ರುವನಿಗೆ ಎಲ್ಲವು ಸೋಜಿಗದಂತೆ ಕಾಣತೊಡಗಿತು. ಏನೋ ನೆನೆಸಿಕೊಂಡವಂತೆ ವಾಚ್ ನೋಡಿಕೊಂಡು ಸಮಯವಾಗಿದೆ ಎಂದು ಅರಿತ.

"ಸರಿ ಸರ್. it was great meeting you. ಆಗಾಗ ನಿಮಗೆ ಹೀಗೆ ತೊಂದ್ರೆ ಕೊಡ್ತಿರ್ತೀನಿ "

" do not worry my boy. ಆಗಾಗ ಬರ್ತಾ iru"

ಹೊರಟ ಧ್ರುವ ಏನೋ ನೆನೆಸಿಕೊಂಡವಂತೆ...

"ಸರ್ !"

"yes? "

"ತಮಿಗೆನೋ ಕೇಳ್ಬೇಕಿತ್ತು, ತಪ್ಪು ತಿಳಿಬಾರ್ದು "

"oh not at all..go on my boy"

"ನಿಮಗೆ katherine ಯಾರು ಅಂತ ಏನಾದ್ರು.... "

ತನ್ನ ಕನ್ನಡಕ ಸಂದಿಯಿಂದಲೇ ಧ್ರುವನನ್ನ ದಿಟ್ಟಿಸಿದ mr.shaunನ್ನ ಸೂಕ್ಷ್ಮ ಚಲನೆಯನ್ನು ಗ್ರಹಿಸಿದ ಧ್ರುವ.

ದಪ್ಪಬೆಳ್ಳಿ ಮೀಸೆಯನ್ನ ನೀವಿಕೊಳುತ್ತ mr.shaun ರು

"ಆ ಹೆಸರಿನ ಯಾರೂ ಇಲ್ಲಿಲ್ಲ... ಹೋಗಿ ಬಾ "

ಎಂದರು.

"ನಿಮ್ಮನ್ನ ನೋಡಿದ್ರೆ ನಿಮಗೇನೋ ಗೊತ್ತಿದೆ ಅನ್ನಿಸ್ತಿದೆ.  mr.shaun trust me. ಹೇಳಿ "

ಊರುಗೋಲನ್ನು ಕುರ್ಚಿಗಾನಿಸಿ ವಯಿಸ್ಟ್ಕೋಟ್ ಅನ್ನು ಸರಿ ಮಾಡಿಕೊಂಡು ಮೇಜಿಗೆ ಮೊಣಕೈ ಊರಿ ಹೇಳಿದರು mr.shaun

"ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿ ಉಳಿಯುವುದು ಸೂಕ್ತ. some question are better left unanswered . i hope you understand, my boy. ಹೋಗಿ ಬಾ.. "

                  *                *                *

ದಿಗ್ಬ್ರಾಂತನಾಗಿದ್ದ ಧ್ರುವ..

ಬೆಳಿಗ್ಗೆಯಷ್ಟೇ ಸುಗಮ ಸಂಗೀತದ ನಿನಾದದಂತೆ ಆ ಪರಿಸರವನ್ನು, ಆ ಕೋಟೆ ಯನ್ನು ಅನುಭವಿಸಿದ ಧ್ರುವನಿಗೆ ಸಂಜೆಯಷ್ಟರಲ್ಲಿ ಮುಳುಗುವ ಸೂರ್ಯನೊಂದಿಗೆ ಆ ಭಾವವೆಲ್ಲವೂ ಮುಳುಗಿ ನಿಗೂಢ ಕತ್ತಲೆಯ ವ್ಯಕ್ತಿತ್ವ ಹೊತ್ತ ಆತ್ಮಹೀನ ಕಳೇಬರದಂತೆ ಕಂಡಿತು ಆ ಕೋಟೆ...

ಕೋಟೆಯ ಇನ್ನೊಂದು ಬದಿಯಲ್ಲಿ ಇದ್ದ ಮುಖ್ಯ ದ್ವಾರದ ಬಳಿಬರುವಶ್ಟರಲ್ಲಿ ಯಾದವನೂ ಬಂದ. ಇವನನ್ನು ಹತ್ತಿಸಿಕೊಂಡು ಆ ಕಾಡಿನ ದಾರಿಯಲ್ಲಿ ಮನೆಯ ಕಡೆ ಹೊರಟ.

ಹಾಗೆ ಕಾಡು, ಪರ್ವತ, ಹುಲ್ಲುಗಾವಲು ಹೀಗೆ ಅವುಗಳೇ  ತುಂಬಿದ್ದ ಆ ಜಾಗದಲ್ಲಿ ಇದ್ದಕಿದ್ದಂತೆ ಪಾಳುಬಿದ್ದಂತಿದ್ದ ಮನೆಯೊಂದು ದೂರದ ಬೆಟ್ಟವೊಂದರಲ್ಲಿ ಧ್ರುವನ ಸೂಕ್ಷ್ಮ ಕಣ್ಣಿಗೆ ಕಂಡಿತು.

"ಭಾವ, ಅದ್ಯಾವುದದು ಅಷ್ಟು ದೊಡ್ಡದಾಗಿ ಪಾಳುಬಿದ್ದಿದ್ಯಲ್ಲ ಆ ಮನೆ? ಏನಾದ್ರು ಕಥೆ? ಯಾರಿರ್ತಾರೆ ಅಲ್ಲಿ? "

"ಹೇಯ್ ! ನಿಂಗೆ ತಲೆ ಕೆಟ್ಟಿದ್ಯಾ? ವಿಂಡೋ ಏರಿಸು ಮೊದ್ಲು "

ಎಂದು ಹೇಳಿ ತಾನೇ ಖುದ್ದು centralized ವಿಂಡೋ ಏರಿಸಿದ ಯಾದವ.

ಧ್ರುವನಿಗೆ ಸೋಜಿಗವೆನಿಸಿತು.


         *                  *                    *

"ಭಾವ.. ನಂಗೆ ಬಿರಿಯಾನಿ ತಿನ್ನೋ ಹಾಗ್ ಆಗಿದೆ.. ನೀವ್ ಹೋಗಿ.. ಆ ಪೆಟ್ರೋಲ್ ಬಂಕ್ ಸೂಪರ್ಮಾರ್ಕೆಟ್ ಇಂದ ನಾನು ಬೇಕಿರೋ ಐಟಂ ಎಲ್ಲ ತಗೊಂಡ್ ಬರ್ತೀನಿ "

" ok ಮಗ, ಬೇಗ ಬಂದ್ಬಿಡು ಇಲ್ಲಿಂದ ದಾರಿ ಗೊತ್ತಲ್ವಾ "

" ಹೂ ಭಾವ, dont worry. ನನ್ ಬರ್ತೀನಿ "

                    *             *           *

"ಅಕ್ಕ ಬಿರಿಯಾನಿ ತುಂಬಾ ಚೆನ್ನಾಗ್ ಮಾಡಿದ್ಯಾ ಕಣೆ, ಸೇಮ್ ಅಮ್ಮಂದೇ ಟೇಸ್ಟ್.. ಭಾವ i can taste tat ಇಟಾಲಿಯನ್ ರಿಸ್ಸೊಟ್ಟೊ... "

"ಸುಮ್ನಿರಪ್ಪಾ... ಮತ್ತೆ ಇದಕ್ಕೆ ಮೆಕ್ಸಿಕನ್ ಟಚ್ ಮಾಡ್ತೀನಿ, continental ಮಾಡ್ತೀನಿ ಅಂತ ಕೂತ್ರೆ ತಿನ್ನೋ ಒಂದ್ ಒಳ್ಳೇದು ಐಟಂ ಗು ಮಣ್ಣ್ ಬೀಳುತ್ತೆ "

ಇಬ್ಬರು ನಗಲು ಶುರುವಿಟ್ಟುಕೊಳ್ಳುತ್ತಾರೆ..

"ನಿಮ್ಮನ್ನ ಆಮೇಲೆ ವಿಚಾರಿಸ್ಕೊತೀನಿ... ಅದಿರ್ಲಿ ಕಾಲೇಜು ಹೇಗಿತ್ತೋ ಧ್ರುವ? "

ಇದನ್ನ ಕೇಳಿದ ತಕ್ಷಣ ಒಂದು ಕ್ಷಣ ತನಗಿಂದು ಆದ ಬ್ರಹ್ಮಾಂಡ ದರ್ಶನಗಳನ್ನು ನೆನಪಿಸಿಕೊಂಡು katherine ಳ ವಿಚಾರ ನೆನಪಾಗಿ ಎಲ್ಲವು ನೆತ್ತಿಗೇರಿತು...

"ಅದಿರ್ಲಿ ತಡಿ... ಭಾವ ಆ ಮನೆ ಇತ್ತಲ "

"ಯಾವ್ದೋ "

" ಅದೇ... ಆಗುಡ್ಡದ ಮೇಲೆ.... "

ನೀರು ಕುಡಿಯುತ್ತಿದ್ದ ಯಾದವ ನೀರನಿಳಿಸಿ ನೇಹಾ ಯಾದವರಿಬ್ಬರು ಒಬ್ಬರನ್ನೊಬ್ಬರು ನೋಡಿಕೊಂಡರು...

"ಯಾಕೆ... ಏನಾಯ್ತು? "

"ಏನಿಲ್ಲ, ಹೇಳ್ತೀನಿ... ಆದ್ರೆ ಆ ಬಗ್ಗೆ ತುಂಬಾ ತಲೆ ಕೆಡಿಸ್ಕೊಬೇಡ ಮತ್ತೆ ಕೇಳೋಕೂ ಹೋಗ್ಬೇಡ "

"ಸರಿ ಹೇಳಿ "

" ಹೀಗೆ ಸುಮಾರು ವರ್ಷದ ಹಿಂದೆ ಆ ಮನೇಲಿ ಇಂಡಿಯಾ ದಿಂದ ಬಂದಿದ್ದ ಒಂದು ಹನ್ನೊಂದು ಜನದ ಕುಟುಂಬ ಇತ್ತು. ಶ್ರೀಮಂತರು, ಬಟ್ಟೆ mill ಗಳ ಮಾಲೀಕರು. ಸುಖವಾಗೇ ಇತ್ತಂತೆ ಜೀವನ."

" ಒಂದ್ ದಿನ ಇದ್ದಕ್ಕಿಂದ್ದಂತೆ ಆ ಮನೆ 11 ಜನ ಸತ್ತುಹೋಗಿದ್ರೂ. police ಕೂಡ ಬಂದು inveatigate ಮಾಡಿ ಇದೊಂದು ಮಾಸ್ ಸುಯಿಸೈಡ್ ಕೇಸ್, ರೀಸನ್ being unknown ಅಂತ quote ಮಾಡಿ ಕೇಸ್ ಕ್ಲೋಸ್ maadidru"

" ಆ ಮನೇಲಿದ್ದಾಗ ವಾಚುಮನ್ ಈ deaths ಗಿದ್ದ ಒಬ್ಬನೇ ಒಬ್ಬ ಸಾಕ್ಷಿ. ಬಟ್ ಅವ್ನು ಮಿಸ್ಸಿಂಗ್ ಅಂತ ಆಮೇಲೆ ರಿಪೋರ್ಟ್ ಆಯ್ತು "

" ಹಲವಾರು detective, case volunteers, ಫೋರೆನ್ಸಿಕ್ experts ಎಲ್ಲ examine ಮಾಡಿ ಹಲವಾರು theories ಕೊಟ್ರು 

ಕೆಲವ್ರು ಬಿಸಿನೆಸ್ ಲಾಸ್ ಆಗಿದ್ದ ಹೊಡತ ತಾಳಲಾರದೆ ಅಂತ ಹೇಳಿದ್ರು. ಕೆಲವ್ರು ಆ ಮನೇಲಿದ್ದ ವಾಚುಮನ್ ಈ ದುಡ್ಡಿನ ಆಸೆಗೋಸ್ಕರ ಎಲ್ಲರನ್ನ ಕೊಲೆ ಮಾಡಿ ದುಡ್ಡು ಡೊಚ್ಕೊಂಡು ತಲೆಮಾರ್ಸ್ಕೊಂಡ ಅಂತ ಹೇಳಿದ್ರು, ಮತ್ತೊಬ್ರು ಇದೊಂದು ಭಾರತೀಯ ರಿಲಿಜಿಯಸ್ ritual, ಮೋಕ್ಷಕ್ಕೊಸ್ಕರ ಈ ರೀತಿ ಮಾಡ್ತಾರೆ ಅಂತ ಥಿಯೋರೈಸೆ ಮಾಡಿದರೇ,  ಇನ್ನು ಕೆಲವ್ರು ಆ ಮನೆ ಯಜಮಾನನಿಗೆ illuminati or ಉಸ್ಸೋಕ್ ಸೀಕ್ರೆಟ್ ಸೊಸೈಟಿ ಗಳ ಲಿಂಕ್ ಇದ್ದಿರೋದ್ರಿಂದ  ಅದ್ರ ಪ್ರಭಾವಕ್ಕೆ  ಒಳಗಾಗಿದ್ನ ಅನ್ನೋ ಮಟ್ಟಕ್ಕೆ ಕೇಸ್ ಹೋಯ್ತು. "

"ಕೊನೆಗೆ ಏನನ್ನು conclude ಮಾಡೋಕಾಗ್ದೆ ಅದೊಂದು abandoned ಮ್ಯಾನ್ಶನ್ ಆಗಿದೆ. ಕೆಲವು ಉತ್ಸಾಹಿ ಯುವಕರು ಅದನ್ನ ಪರಿಶೀಲಿಸಲಿಕ್ಕೆ  ಹೋಗಿ ನಿಗೂಢವಾಗಿ ಸತ್ತರು, ಈ ಜಾಗ ಹಾಂಟೆಡ್ ಆಗಿದೆ , ದೈಯ್ಯದ ಕಾಟ ಇದೆ ಅಂತ ಪುಕಾರಾಗಿ ಹೋಯ್ತು. ಆಗಿಂದ ಅಂತೂ ಜನ aa ಕಡೆ ತಲೆ ಕೂಡ ಹಾಕಲ್ಲ... ನೀನು ಅಷ್ಟೇ ಹುಷಾರಾಗಿರು.. "

" ಇವತ್ತಿಗೂ ಕೂಡ unsolved ಆಗೇ ಇದೆ case"

ಅಂತ ಹೇಳಿ ಮಾತುಮುಗಿಸಿದವನಂತೆ ನೀರು ಕುಡಿದ ಯಾದವ.

"ಇಷ್ಟ್ ದಿನ ಕೇಸ್ ಸಾಲ್ವ್ ಆಗಿಲ್ಲ. ಇನ್ಮುಂದೆ ಆಗುತ್ತೆ "

"ಅಂದ್ರೆ...? "

" ಈ ಕೇಸ್ ನ solve ಮಾಡೋಕೆ ಅಂತನೇ ಗವರ್ನಮೆಂಟ್ of ಇಂಡಿಯಾ ದ ರಿಸರ್ಚ್ and ಅನಾಲಿಸಿಸ್ ವಿಂಗ್ ನ ಆಫೀಸರ್ ಆಗಿ ನನ್ನ ಸ್ಪೆಷಲ್ ಪೋಸ್ಟ್ ಅಲ್ಲಿ ಇಲ್ಲಿಗೆ ಅಪೋಯಿಂಟ್ ಮಾಡಿದ್ದಾರೆ "

          " ನಾನು ಧ್ರುವ, RAW ನ designated undercover officer"

(ಮುಂದುವರೆಯುತ್ತದೆ... )

           *                    *                   *


Rate this content
Log in

More kannada story from Tejaswi sajjan

Similar kannada story from Horror