STORYMIRROR

Vidya N

Horror Romance Fantasy

2  

Vidya N

Horror Romance Fantasy

ಪ್ರಕೃತಿ ಮಾತೆಯ ರಹಸ್ಯ!!!

ಪ್ರಕೃತಿ ಮಾತೆಯ ರಹಸ್ಯ!!!

2 mins
99

ಪ್ರಕೃತಿ ರಹಸ್ಯದ ತೊಟ್ಟಿಲು !! ಈ ನನ್ನ ಮಾತಿಗೆ ಒಂದು ಸಣ್ಣ ಕಥೆ ಬರೆಯುವುದರ ಮೂಲಕ ನನಗೆ ಅನಿಸಿದ್ದನ್ನು ತಿಳಿಸಿರುವೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ!!!


ಕಾಡು ಎಂದರೇ ಪ್ರಕೃತಿ ಮಾತೆಯ ಸಂಪತ್ತು ಇದ್ದಂತೆ!! ಅಲ್ಲವೇ? ಕಾಡೂ, ಕಾಡು ಪ್ರಾಣಿಗಳಿಗೆ ಮಾತ್ರ ಸೀಮಿತನಾ? ಅನಂತ ಲಕ್ಷ ಕೋಟಿ ಜೀವ ರಾಶಿಗಳ ತವರೂರು ಅದು !! ಅಲ್ಲವೇ? ಮರಗಳು ಗಿಡಗಳು ಎತ್ತರವಾಗಿ ಬೆಳೆದು ನಿಂತು,ಆಕಾಶಕ್ಕೆ ಚುಂಬನ ನೀಡಿದಂತೆ ಭಾಸವಾಗುವುದ್ದಿಲ್ಲವೇ? ಮಳೆಯನ್ನು ತನ್ನಡೆಗೆ ಕರೆದೊಯ್ಯುವ ಪರಿ ಅದು,ಏನಂತೀರಾ? ಈ ಜಗವೂ ಒಂದು ರಹಸ್ಯದ ತವರೂರು ಇದ್ದಂತೆ! ನಿಮ್ಮ ನಿಲುವು? ನನಗೆ ಈ ವಿಷಯ ನೋಡಿದಂತೆ ತಟ್ಟನೇ ನನಗೆ ಅನಿಸಿದ ಕಥೆಯನ್ನು ನಿಮ್ಮ ಎಲ್ಲರಿಗೂ ಅಂಚಿಕೊಳ್ಳೋಣ ಅಂತ!!

ಕಾಡಿನಲ್ಲಿ ವಾಸ ಮಾಡುತ್ತಿದ್ದ ಮಾರ ಮತ್ತು ಅವಳ ಹೆಂಡತಿ ಅಹಲ್ಯಾ, ಪ್ರಕೃತಿ ಮಾತೆ ಗೇ, ಅವಳ ಸೌಂದರ್ಯಕ್ಕೆ, ಸೊಬಗಿಗೆ ಶರಣಾಗಿದ್ದರು!! ಮಾರ ತನ್ನ ತಂದೆಯಿಂದ ಮತ್ತು ವಂಶ ಪಾರಂಪರಿಕವಾಗಿ ಬಂದ ಆಯುರ್ವೇದ ದಲ್ಲಿ ಪರಿಣಿತಿ ಹೊಂದಿದನು , ನೈಸರ್ಗಿಕವಾಗಿ ಸಿಗುವ ಬೇರು , ಔಷದಿ ಗಿಡಗಳ ಸಹಾಯದಿಂದ ರಸವನ್ನು ಮಾಡಿ ಔಷದಿಯನ್ನು ತಯಾರಿಸುತ್ತಿದ್ದ , ತನ್ನ ಕೈಲಾದ ಸಹಾಯ ಬಡವರಿಗೆ ಮಾಡುತ್ತಿದ್ದ, ಅವನ ಈ ಔಷದಿಕ ಪಾಲನೆ ಇಂದ, ಬಂದ ಜನರೆಲ್ಲಾರು ರೋಗದಿಂದ ಗುಣಮುಖರಾಗಿ ಹೋಗುತ್ತಿದ್ದರು!  

ಬ್ರಿಟಿಷ್ ಆಡಳಿತ ನಡೆಯುತ್ತಿದ್ದ ಕಾಲವದು, ಜನರೆಲ್ಲರೂ ಮಾರನ ಬಳಿ ಹೋಗುತ್ತಿದ್ದರಿಂದ ಅವರ ಇಂಗ್ಲಿಷ್ ಮೆಡಿಸಿನ್ ಯಾರು ತೆಗೆದುಕೊಳ್ಳುತ್ತಿರಲಿಲ್ಲ, ಇದರಿಂದ ಅವರಿಗೆ ನಷ್ಟ ವಾಗಲು ಶುರುವಾಗಿತ್ತು, ಬ್ರಿಟಿಷರವರದು ಕುತಂತ್ರ ಬುದ್ದಿಯಲ್ಲವೇ! ಕೊನೆಗೆ ಜನರೆಲ್ಲಾ ಒಂದುಗೂಡಿಸಿ "ನೋಡಿ ಸಾರ್ವಜನಿಕರೇ !! ನೀವು ಮಾರ ನಾ ಸೊಪ್ಪಿನ ರಸವನ್ನು ತೆಗೆದುಕೊಳ್ಳುವುದು ತಪ್ಪು! ಸಂಶೋಧನೆಯಿಂದ ಕಂಡು ಬಂದಿದೆ " ಈಗಲೇ ಬ್ರಿಟಿಷ್ ಸರಕಾರದಿಂದ ಅವೆಲ್ಲವನ್ನೂ ಬ್ಯಾನ್ ಮಾಡಲಾಗುತ್ತಿದೆ ಅಂತ ಮುಚ್ಚೆಬಿಟ್ಟರೂ, ಜನರೆಲ್ಲರೂ ಅವನ ಬಳಿ ಹೋಗುವುದನ್ನು ಕಡಿಮೆ ಮಾಡಿದರು

     ಮಾರ ಕಂಗಲಾಗಿದ್ದನ್ನು ಕಂಡು " ರೀ! ಎಲ್ಲಾ ಅ ಪರಿಸರ ಮಾತೆಯ ಲೀಲೆ, ಅವಳನ್ನು ನಂಬಿರುವ ನಮ್ಮನ್ನು ಅವಳು ಯಾವತ್ತೂ ಕೈ ಬಿಡುವುದಿಲ್ಲ, ನೀವು ಬೇಜಾರು ಮಾಡಿಕೊಳ್ಳಬೇಡಿ ,ನಿಮ್ಮ ಈ ವೃತ್ತಿ ಮುಂದುವರೆಯಲಿ ಅವಳನ್ನು ನಂಬಿ", ಅಂತ ದೈರ್ಯ ತುಂಬಿದಳು ಅಹಲ್ಯಾ..

  " ನನಗೆ ಬೇಜಾರು ಅದಕ್ಕಲ್ಲಾ, ನಮ್ಮ ಜನರೆಲ್ಲರೂ ತುಂಬಾ ಮುಗ್ದ, ಅವರನ್ನು ದಬ್ಬಾಳಿಕೆ ಮಾಡುತ್ತಿರುವ ಬ್ರಿಟಿಷ್ ಸರಕಾರದ ಬಗ್ಗೆ ನನಗೆ ಬೇಸರವಿದೆ!!" ಅಂತ ಹೇಳಿದ ಮಾರ, ಆಯ್ತು ಮಲಗು ನೀನು ನಾನು ಹಸು ಕರುಗಳಿಗೆ ಹುಲ್ಲು ಹಾಕಿ ಮಲಗುತ್ತೇನೆ ಅಂತ ಆಚೆ ಬಂದ

  

    ದೂರದಲ್ಲಿ ಯಾರೋ " ಕಾಪಾಡಿ! ಕಾಪಾಡಿ!" ಅಂತ ಜೋರಾಗಿ ಕೂಗಿಕೊಂಡು ಬರುತ್ತಿರಲು , ಮಾರ ಹೋಗಿ ನೋಡಿದ , "ನಾನು ಬ್ರಿಟಿಷ್ ಸರಕಾರದ ಸೇವಕ ನಿಮಗೆ ಸುದ್ದಿ ಒಂದನ್ನು ತಂದಿರುವೆ! ಬ್ರಿಟಿಷ್ ರಾಜನಿಗೆ ಹಾವು ಕಚ್ಚಿ ಸಾಯುವ ಸ್ಥಿತಿ ತಲುಪಿದ್ದಾರೆ, ಯಾವ ಇಂಗ್ಲಿಷ್ ಮೆಡಿಸಿನ್ ಕೆಲಸ ಮಾಡದ ಕಾರಣ, ನಿಮ್ಮನ್ನು ಔಷದಿ ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ ,ದಯವಿಟ್ಟು ಬನ್ನಿ" ಅಂತ ಕರೆಯಲು.. ಅಲ್ಲಿಗೆ ಬಂದ ಅಹಲ್ಯಾ " ನೋಡಿ , ಯಾರು ಬೇಡ ಅಂದರೋ, ಅವರೇ ಮತ್ತೆ ಕರೆಯುವ ಹಾಗೆ ಮಾಡಿದ್ದಾಳೆ, ಈ ಪರಿಸರ ತಾಯಿ!! ನಾವು ಧನ್ಯಾ ನೀವು ಹೋಗಿ ಬನ್ನಿ," ಅಂತ ಹೇಳಿ ಕಳುಹಿಸಿದಳು.

   ಪ್ರಕೃತಿ ಮಾತೆಗೆ ಅಲ್ಲೇ ನಮಸ್ಕರಿಸಿ , ಬ್ರಿಟಿಷ್ ರಾಜ ನಾ ಕಾಪಾಡಿದ ಮಾರ, ಬ್ರಿಟಿಷ್ ಸರ್ಕಾರದಿಂದಲೇ ಗೌರವ ಪಡೆದು ಮತ್ತೆ ತನ್ನ ವೃತ್ತಿಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ದನು, ಜಗದ ವಿಕ್ಯತಿ ಪಡೆದನು!!


ಅದಕ್ಕೆ ಹೇಳೋದು ಪ್ರಕೃತಿ ರಹಸ್ಯದ ತೊಟ್ಟಿಲು ಅಂತ!! ನಿಮಗೆ ನನ್ನ ಸಣ್ಣ ಪ್ರಯತ್ನ ಹೇಗೆ ಅನಿಸಿತು


ಈ ನನ್ನ ಪುಟ್ಟ ಕಥೆ ನಿಮಗೆ ಹೇಗೆ ಅನಿಸಿತು ,ಅಂತ ತಿಳಿಸಲು ಮರೆಯಬೇಡಿ, ಹೀಗೆ ಬರೆಯಲು ಪ್ರೋತ್ಸಾಹ ನೀಡುತ್ತಿರುವ ನಿಮಗೆಲ್ಲಾ ನನ್ನ ಧನ್ಯವಾದಗಳು!!!


Rate this content
Log in

Similar kannada story from Horror