ಪ್ರೀತಿಯ ಅಪ್ಪ
ಪ್ರೀತಿಯ ಅಪ್ಪ
ಒಬ್ಬ ವಯಸ್ಸಾದ ಮುದುಕನು ಅಳುತ್ತ ತಾನು ಇದ್ದ ವೃದ್ದಾಶ್ರಮದಲ್ಲಿ ತನ್ನ ವಯಸ್ಸಾದ ಸ್ನೇಹಿತನ ಜೊತೆಗೆ ಅಳಲನ್ನು ತೋಡಿಕೊಂಡನು... ಮದುವೆಯಾಗಿ ಮಕ್ಕಳಾಗದ ಕಾರಣ ನಾವು ಒಂದು ಗಂಡು ಮಗುವವನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡಿದ್ದೆವು... ಆ ನಂತರ ಕೆಲವೇ ತಿಂಗಳಲ್ಲಿ ನನ್ನ ಒಡತಿ ಮಡಿದಳು. ನಾ ಮತ್ತೊಂದು ಮದುವೆಯ ಕಡೆ ತಿರುವದೆ, ಒಬ್ಬನೆ ಮುದ್ದು ಮಗನೆಂದು ತಾಯಿಯ ಪ್ರೀತಿಗೆ ಕೊರತೆ ಬಾರದಂತೆ ಸಾಕಿದೆ.. ಆತ ತರುಣನಿದ್ದಾಗ ಅವನ ಕಣ್ಣಿರನ್ನು ಒರೆಸುತ್ತಾ, ಅವನಲ್ಲಿ ಸಂತೋಷವನ್ನು ಕಾಣಲು ಬಯಸುತ್ತಿದ್ದೆ. ಮಿಠಾಯಿಗೆಂದು ಒಂದು ರೂಪಾಯಿ ಕೊಡುತ್ತಿದ್ದ ಕಾಲ ಅಂದು. ನನ್ನ ಅರಿದ ಬಟ್ಟೆಯನ್ನು ಲೆಕ್ಕಿಸದೆ, ಬೆವರ ಹನಿಯನ್ನು ಒರೆಸದೆ, ಹೊಟ್ಟೆಯ ಹಸಿವನ್ನು ಬಚ್ಚಿಟ್ಟು, ನನ್ನ ಮಗನನ್ನು ಕೇಳುತ್ತಿದ್ದೆ " ನಿನಗೇನು ಬೇಕು ಮಗನೆ ಎಂದು". ಅಂದು ಅವನ ಭವಿಷ್ಯಕ್ಕೆ ನನ್ನ ಜೀವನ ಮುಡಿಪಾಗಿಟ್ಟೆ. ಇಂದು ಅವ ಕೇಳಲಿಲ್ಲ ಅಪ್ಪ ನಿನಗೇನು ಬೇಕೆಂದು. ಅವನಿಗಾಗಿ ನನ್ನ ಸಂತೋಷವನ್ನು ಬಚ್ಚಿಟ್ಟೆ, ಇಂದು ಹೆಂಡತಿಯ ಸೆರಗಿನಲ್ಲಿ ಬಚ್ಚಿಟ್ಟುಕೊಂಡನಾತ. ಒಳ್ಳೆಯ ಶಾಲೆಯನ್ನು ಹುಡುಕುತ್ತಿದ್ದೆ ಆತನಿಗೆ, ಇಂದು ನನಗೆ ವಯಸ್ಸಾಗಿದೆ ಎಂದು ವೃದ್ಧಾಶ್ರಮ ಹುಡುಕಿದ.. ದತ್ತು ಮಗನೆನ್ನದೆ ನಾ ಪಟ್ಟೆ ಶ್ರಮ ಕೊನೆಗೆ ಅವನು ಸೇರಿಸಿದನು ಈ ವೃದ್ಧಾಶ್ರಮಕ್ಕೆ. ಅನಾಥಾಶ್ರಮದಿಂದ ಬಂದ ನನ್ನ ಮಡಿಲಿನಲ್ಲಿ ಬೆಳೆದ ಕೂಸು, ಇಂದು ನನ್ನನ್ನು ವೃದ್ಧಾಶ್ರಮಕ್ಕೆ ತಳ್ಳಿದ ಎಂದು ಪ್ರಾಣಬಿಟ್ಟನು.
