ಪ್ರೀತಿ ಪ್ರೇಮ ಬದುಕು
ಪ್ರೀತಿ ಪ್ರೇಮ ಬದುಕು
ಪ್ರೀತಿ ಅನ್ನೋದು ಒಂದು ಸುಂದರ ಅನುಭವ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುವುದು ಅದರ ನಿಜವಾದ ಅರ್ಥ. ಜಗತ್ತಿನಲ್ಲಿ ಪ್ರೀತಿ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಕುಟುಂಬದಲ್ಲಾದರೂ ಪ್ರೀತಿ ಇದ್ದಾಗ ಮಾತ್ರ ಆ ಕುಟುಂಬ ನೆಮ್ಮದಿಯಿಂದ ಸಂತೋಷದಿಂದ ಇರಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿ ಅನ್ನೋದು ವ್ಯಾಪಾರದ ವಸ್ತುವಾಗಿ ಕಾಣಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಪ್ರೀತಿಯ ನಿಜವಾದ ಅರ್ಥ ಗೊತ್ತಿಲ್ಲದೆ ವಯೋ ಸಹಜವಾದ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸಿ, ದುಡುಕು ನಿರ್ಧಾರಗಳಿಂದ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ಪ್ರೀತಿಯನ್ನು ಪಡೆಯಲು ತಾಳ್ಮೆ ಅತ್ಯವಶ್ಯಕ, ಬಲವಂತವಾಗಿ ಪಡೆದ ಪ್ರೀತಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಪ್ರೀತಿಸುವವರ ಮನಸನ್ನು ಅರ್ಥ ಮಾಡಿಕೊಂಡು, ಅವರ ಭಾವನೆಗಳಿಗೆ ಬೆಲೆ ಕೊಟ್ಟು ಜೊತೆಯಾಗಿ ನಡೆದರೆ ಆ ಪ್ರೀತಿ ಯಾವಾಗಲೂ ಶಾಶ್ವತವಾಗಿರುತ್ತದೆ.

