RAGHU S K

Romance Classics Others

4  

RAGHU S K

Romance Classics Others

ಪ್ರೇಮ ಧ್ಯಾನ ಪಥದಲಿ

ಪ್ರೇಮ ಧ್ಯಾನ ಪಥದಲಿ

1 min
1.0K


ಸ್ನೇಹ ಪ್ರೇಮದ ಚೈತನ್ಯಧಾರಿಣಿ

ನಗುವಿನ ಸ್ನೇಹಸಖಿಗೆ.


ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು

ನಮ್ಮಿಬ್ಬರನು ಮತ್ತೆ ಬಂದಿಸಿಹುದೋ ಕಾಣೆ.


ನಿನಗೆ ನೆನಪಿರಲೂಬಹುದು ನನ್ನ ನಿನ್ನ ಮೊದಲ ಭೇಟಿಯ ಆ ದಿನ ಆ ಕ್ಷಣ. ತುಂಬು ನಗೆಯಿಂದ ಅತ್ತ-ಇತ್ತ ಓಡಾಡುತ್ತಿದ್ದ ನಿನ್ನನ್ನು ನಾ ನೋಡಿ ಅದ್ಭುತವೇ ಎದುರಿದೆ ಅನ್ನುವಂತೆ ಕಣ್ತುಂಬಿಕೊಳ್ಳುತ್ತಿದ್ದೆ.

ಬಹುಶಃ ಅದೇ ದಿನ ಸಂಪೂರ್ಣ ನನ್ನನ್ನು ನಾನು ಕಳೆದುಕೊಂಡೆ, ನನ್ನನ್ನು ನಾನು ಆ ನಗುವಿಗೆ ಅರ್ಪಿಸಿಬಿಟ್ಟು ಆ ಸನಿಹದಲ್ಲಿಯೇ ಇರುವಷ್ಟು ಕಾಲ ಬದುಕಬೇಕು ಅಂದುಕೊಂಡೆ.

ಯಾವ ಶಕ್ತಿ ನಿನ್ನಡೆಗೆ ನನ್ನ ನೂಕಿತೋ, ಯಾವುದು ಸೆಳೆಯಿತೋ ತಿಳಿಯದು.

 ಪ್ರೇಮ.. ಪ್ರೇಮ... ಪ್ರೇಮ.... 

ಅದೇ,

ಅಂದೇ ಮೊದಲ ನೋಟದಲ್ಲೇ ಪ್ರೇಮ ಚಿಗುರಿತು.

ನನ್ನಾತ್ಮ ನಿನ್ನಲ್ಲಿ ಸಂಪೂರ್ಣ ಲೀನವಾಗುವಂತೆ ಪ್ರೇರೇಪಿಸುತ್ತಿತ್ತು ಈಗಲೂ ಪ್ರೇರೇಪಿಸುತ್ತಿದೆ ಕೂಡ...  


ಮೊದಲ ಬಾರಿಗೆ ನಿನ್ನ ನನ್ನ ಕಣ್ಣುಗಳು ಸಂಧಿಸಿದ ಆ ಕ್ಷಣದಲ್ಲಿ ಚೈತನ್ಯವೇ ಪ್ರವಹಿಸಿದಂತ ಅನುಭವ. ನಿನ್ನೊಂದಿಗೆಯೇ ಬದುಕುವ,

ನಿನ್ನೊಂದಿಗೆಯೇ

 ಉಳಿಯುವ, ಬೆಳೆಯುವ, ಅಳಿಯುವ

ಕನಸು ಕಟ್ಟಿಕೊಂಡೆ.

ಜೀವನದ ಮಹಾದ್ಭುತ ಕ್ಷಣವದು ನನಗೆ.


ನನ್ನನ್ನು ನಾ ನಿಯಂತ್ರಿಸಲು ಅರಸಹಾಸ ಪಡಬೇಕಾಯಿತು. ನನ್ನಾತ್ಮವ ನಿನ್ನೊಂದಿಗೆ ವಿಹರಿಸಲು ಬಿಟ್ಟೆ, ಪ್ರೇಮಿಸಲು ಬಿಟ್ಟೆ.

 ಅದೆಷ್ಟು ಬಾರಿ ಯೋಚಿಸಿದ್ದೇನೊ ಏನೋ ನಿನ್ನ ನಗುವಿನ ಕುರಿತು ಅಗಣಿತವೇ ಸರಿ. ನಿನ್ನ ಸಂದೇಶ ಬರುವುದೆಂದು ನನ್ನ ಮನ ಅದೆಷ್ಟು ನಿಖರವಾಗಿ ಸೂಚಿಸುತ್ತಿತ್ತು ಹಾಗೆಯೇ ಬಂತು ಕೂಡ; ಸ್ನೇಹ ಸಂದೇಶ , ನೀನೇ ಕಳಿಸಿಕೊಟ್ಟೆ.

ಅದಕ್ಕೂ ಮೊದಲು ಅದೆಷ್ಟೋ ಸಂದೇಶಗಳನ್ನು ಕಳಿಸಬೇಕೆಂದು ಯೋಚಿಸಿ ಮನದೊಳಗೆ ಬರೆದು ಬರೆದು ಬಚ್ಚಿಟ್ಟಿದ್ದೇನೊ.

 

ಕಾಲ ಉರುಳಿತು 

ಸ್ನೇಹ ಬಲಿಯಿತು 

ನನ್ನ ಪ್ರೀತಿ ನಿಲುಕದೆತ್ತರಕ್ಕೆ ಎರುತ್ತಿತ್ತು.

ಸಹಜತೆಯಿಂದ ಅಸಹಜತೆಯ ಕಡೆಗೆ,

ಲೌಕಿಕದಿಂದ ಅಲೌಕಿಕದೆಡೆಗೆ,

ಅನಂತತೆಯ ಕಡೆಗೆ ಸಾಗುತ್ತಿತ್ತು.


ನಿನ್ನುದ್ಧಾರವನ್ನೇ ಜೀವನದ ಪರಮ ಗುರಿಯಾಗಿಸಿತು ನನ್ನ ಪ್ರೇಮ. ಹಾಗೆ ಬದುಕಿದೆ, ಬದುಕುತ್ತಿರುವೆ, ಬದುಕುವೆ ಕೂಡ. 

(ವಿಕಸಿತವಾಗುವುದು)


ಓದುವುದು ಮರೆಯಬೇಡ 

ನೇಸರ


ನಿನ್ನವನಿಂದ



Rate this content
Log in

Similar kannada story from Romance