ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ
ಭವ್ಯ ಭಾರತ ಶ್ರೀಮಂತ ಸಂಸ್ಕ್ರತಿಯ ತವರು. ಇಲ್ಲಿನ ಆಚಾರ-ವಿಚಾರವನ್ನು ಮತ್ತೆಲ್ಲಿಯೂ ಕಾಣಲಾಗದು. ಹಿಂದೊಮ್ಮೆ ಪತ್ನಿಯು ಪತಿಯೇ ದೈವ ಎಂಬ ಮಾತನ್ನು ಪರಿಪಾಲಿಸುತ್ತಿದ್ದಳು. ಗಂಡ ದುಡಿದು ಮನೆಗೆ ಬಂದರೆ ಮಡದಿಯಾದವಳು ಎದ್ದು ನಿಂತು ಗೌರವ ನೀಡಿ ಉಪಚರಿಸುತ್ತಿದ್ದಳು. ಇಂದು ನಮ್ಮಲ್ಲಿನ ಇಂತಹ ಎಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿದೆ. ಕಾರಣ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ. ಭಾರತದ ಉಡುಗೆ-ತೊಡುಗೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಇಂದು .....?????
ಅಂದು ಹರಿದ ಬಟ್ಟೆಯನ್ನು ಹಾಕಿಕೊಂಡರೆ ನಗುತ್ತಿದ್ದರು. ಇಂದು ಚೆನ್ನಾಗಿರುವ ಬಟ್ಟೆಯನ್ನು ಹರಿದು ಕಾಕಿಕೊಳ್ಳುತ್ತಿದ್ದಾರೆ. ಇದು ಇಂದಿನ ಫ್ಯಾಷನ್. ಇದಕ್ಕೆ ಕಾರಣ ವಿದೇಶಿ ಸಂಸ್ಕ್ರತಿ. ಅಂದು ಮನೆಯವರೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದರು. ಇಲ್ಲಿ ಪ್ರೀತಿಯನ್ನು ಕಾಣಬಹುದಾಗಿತ್ತು. ಇಂದು ಚಿತ್ರ ವಿಚಿತ್ರವಾದ ತಿಂಡಿ ತಿನಿಸುಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದು ನಮ್ಮ ಆಹಾರ ಶೈಲಿಯೇ ಬದಲಾಗಿದೆ. ಊಟ ತಿನ್ನುವ ವಿಧಾನವೂ ಬದಲಾಗಿದೆ. ಇದಕ್ಕೆ ಕಾರಣ ವಿದೇಶಿ ಸಂಸ್ಕ್ರತಿ. ಅಂದು ಪತ್ನಿಯಾದವಳು ತನ್ನ ಮಂಗಳ ಸೂತ್ರವನ್ನು ಯಾರಿಗೂ ಕಾಣದಂತೆ ಧರಿಸುತ್ತಿದ್ದಳು. ಇಂದು ಅದೇ ನಾರಿಯರು ಎಲ್ಲರಿಗೂ ಕಾಣುವಂತೆ ತೋರ್ಪಡಿಕೆಗಾಗಿ ಧರಿಸಿದ್ದಾರೆ. ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಮಂಗಳ ಸೂತ್ರವೇ ಇಲ್ಲದೆ ಆಧುನಿಕ ಜೀವನವನ್ನು ಮಾಡುತ್ತಿರುವ ನಾರಿಯರನ್ನೂ ಕಾಣಬಹುದು!!!!!!.
ಹೊಸ ವರ್ಷದ ಆಚರಣೆ, ಆ ಡೇ~ ಈ ಡೇ ಅಂತೆಲ್ಲಾ ಆಚರಿಸುತ್ತಿರುವ ನಮ್ಮ ಜನರೂ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ವಿದೇಶಿಗರು ಲಾಭಕೋರತನದಿಂದ ಇವುಗಳನ್ನು ಪರಿಚಯಿಸಿದ್ದು ನಮ್ಮ ಭಾರತೀಯರು ಇದಕ್ಕೆ ಬಲಿಪಶುಗಳಾಗಿದ್ದಾರೆ. ನಮ್ಮ ಭಾರತೀಯರು ಇಂದು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲೂ ಹಿಂಜರಿಯುತ್ತಾರೆ. ಕಾರಣ ವಿದೇಶಿ ಭಾಷೆಯ ವ್ಯಾಮೋಹ. ಮಗು ತನ್ನ ತಂದೆ-ತಾಯಿಯನ್ನು ಮಮ್ಮಿ-ಡ್ಯಾಡಿ ಎಂದು ಕರೆಯಬೇಕೆಂದು ಒತ್ತಾಯಿಸುತ್ತಿರುವುದನ್ನು ಕಾಣಬಹುದು. ಹುಟ್ಟಿದ ಪ್ರತಿಯೊಂದು ಮಗುವಿನ ಮೊದಲ ಪದವೆ ಅ. ಅಂದ್ರೆ ಅಮ್ಮ ಅಂತ. ಆದ್ರೆ ಇಂದು ಅಪ್ಪ~ಅಮ್ಮ ಪದವೇ ಕಳೆದು ಹೋಗಿದೆ. ನಮ್ಮಲ್ಲಿನ ಅಂಧಾನುಕರಣೆಯಿಂದ ವಿದೇಶಿ ಸಂಸ್ಕ್ರತಿಯ ಆಚರಣೆಯಿಂದ ಹಬ್ಬ ಹರಿದಿನಗಳು ಸಂಪೂರ್ಣವಾಗಿ ನಾಶವಾಗಿದೆ. ನಮ್ಮದಲ್ಲದ ಹಬ್ಬಗಳನ್ನು ವೈಭವವಾಗಿ ಆಚರಿಸುತ್ತಿದ್ದೇವೆ. ಇನ್ನು ೨೦ ವರ್ಷಗಳು ಕಳೆಯುವುದರೊಳಗೆ ನಮ್ಮ ಭಾರತ ಪ್ರತಿಯೊಂದು ವಿಷಯದಲ್ಲೂ ವಿದೇಶಿಯತೆಯನ್ನೇ ಅನುಸರಿಸುವ ದುರ್ದಿನಗಳು ಬರುವುದರಲ್ಲಿ ಅನುಮಾನವೇ ಇಲ್ಲ. ಸಾಧ್ಯವಾದರೆ ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ ಎಂಬ ಮಾತಿನ ಮಹತ್ವವನ್ನು ಎಲ್ಲೆಡೆ ಪಸರಿಸೋಣ.
