Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Shridevi Patil

Horror Inspirational Others


4  

Shridevi Patil

Horror Inspirational Others


ನನ್ನ ನಿನ್ನ ನಡುವೆ

ನನ್ನ ನಿನ್ನ ನಡುವೆ

2 mins 187 2 mins 187

ನನ್ನ ನಿನ್ನ ನಡುವೆ ಏನಿಲ್ಲ , ಏನೇನಿಲ್ಲ.


ಲೋ ಗೌರವ್ , ಯಾಕೋ ಹೀಗೆ ಮಾಡ್ತಿಡಿಯಾ? ಇತ್ತೀಚಿಗೆ ನಿನ್ನ ವರ್ತನೆ ತುಂಬಾ ವಿಚಿತ್ರವಾಗಿ ಕಾಣ್ತಿದೆ , ಯಾಕೋ ನೀನು ನನ್ನನ್ನು ಅವಾಯ್ಡ್ ಮಾಡ್ತಿದೀಯಾ ಅಂತ ಅನಿಸ್ತಿದೆ , ತುಂಬಾ ಹರ್ಟ್ ಆಗ್ತಿದೆ ಈಗ ನಿನ್ನ ಬಿಹೆವಿಯರ್ ನಿಂದ , ಎನ್ ಕೇಳಿದರೂ ಸರಿಯಾಗಿ ಉತ್ತರ ಕೊಡ್ತಿಲ್ಲ , ಹಿಂಗಾದ್ರೆ ಹೆಂಗೋ ? ಪ್ಲೀಸ್ ಗೌರವ್ ಏನಾದ್ರು ಹೇಳೋ.


ರಾಶಿಯ ಮಾತುಗಳನ್ನು ಕೇಳಿ ಕೇಳಿ ಗೌರವ್ , ಸ್ಟಾಪಿಡ್ ರಾಶಿ . ಆಗಿಂದ ತಲೆ ತಿಂತಿದಿಯಾ , ಎನ್ ಹೇಳಬೇಕು ನಿನಗೆ ? ನಾನೇನು ಹರ್ಟ್ ಮಾಡಿದಿನಿ ನಿನಗೆ ? ಹುಚ್ಚುಚ್ಚಾಗಿ ಏನೇನೋ ಮಾತಾಡ್ಬೇಡ ಪ್ಲೀಸ್.


ಎನ್ ಗೌರವ್ ನೀನು ಹೇಳ್ತಿರೋದು , ಹುಚ್ಚುಚ್ಚಾಗಿ ಆಡ್ತಿದೀನಾ? ಆ ಸಾನ್ಯಾ ಬಂದ್ ಮೇಲೆ ನಾನು ಹುಚ್ಚಿ ಆಗೋದೇ ಅಲ್ವಾ?


ನೋಡು ರಾಶಿ , ಏನೇನೋ ಹೇಳಬೇಡ , ಒಂದಕ್ಕೊಂದು ಲಿಂಕ್ ಮಾಡ್ಬೇಡ , ಪಾಪ ಸಾನ್ಯಾ ಹೆಸರು ಮಧ್ಯದಲ್ಲಿ ಬಳಸಬೇಡ .


ಹುನಪ್ಪಾ ಅವಳಿಗಂದ್ರೆ ನಿನ್ನ ಹೃದಯ ಚುರ್ರ್ ಅನ್ನುತ್ತೆ ಅಲ್ವಾ? ಅವಳು ಬರೋ ಮುಂಚೆ ಹೇಗಿದ್ದೆ ?

ಇಡೀ ಕಾಲೇಜಿಗೆ ಕಾಲೇಜೆ ಮಾತಾಡಿಕೊಳ್ಳೋ ತರಹ ನಾವಿಬ್ಬರು ಇದ್ದೆವು. ಒಬ್ಬರನ್ನೊಬ್ಬರು ಯಾವತ್ತೂ ಬಿಟ್ಟಿದ್ದವರಲ್ಲ , ಆದ್ರೆ ನಮ್ಮಿಬ್ಬರ ಮದ್ಯ ಬಂದ ಆ ಸಾನ್ಯಾಗೆ ಏನಾದ್ರು ಅಂದ್ರೆ ಸಾಕು , ಮೂಗಿನ ತುದಿಯಲ್ಲಿರೋ ಕೋಪ ಹಾಗೆ ಉಕ್ಕಿ ಹರದು , ರಾದ್ದಾಂತಾನೆ ಮಾಡಿಬಿಡ್ತೀಯಲ್ಲ.


ನೋಡು ರಾಶಿ , ನಾನಂತೂ ಜಗಳ ಮಾಡೋ ಮೂಡಲ್ಲಿ ಇಲ್ಲ , ಅದಕ್ಕೆ ಸಮಯಾನೂ ಇಲ್ಲ , ಅಷ್ಟಕ್ಕೂ ನೀನು ಹೇಳ್ತಿರೋದು ಅರ್ಥಾನೂ ಆಗ್ತಿಲ್ಲ ,


ಸದ್ಯಕ್ಕೆ ಮನೆಗೆ ಹೋಗು ಚಿನ್ನು , ನಾಳೆ ಮಾತಾಡೋಣ.


ಹಾ ಹಾ ಹೋಗ್ತೀನಿ , ಇನ್ಯಾವತ್ತು ಮಾತಾಡೋ ಜರೂರತ್ ಇಲ್ಲ , ನೀನು ಆ ಸಾನ್ಯಾ ಜೊತೆಗೆ ಇರು. ಗುಡ್ ಬಾಯ್.


ಗೌರವ್ ಮನಸ್ಸಲ್ಲಿ , ಇವಳದ್ದು ಇದೆ ಆಗೋಯ್ತು , ತನ್ನ ಬಿಟ್ಟು ಮತ್ತೊಬ್ಬರನ್ನು ಮಾತಾಡಿಸಿದರೆ ಮುಗಿಯಿತು , ಒಳ್ಳೆ ರಾಗಾ ತೆಗೀತಾಳೆ , ನನ್ನನ್ನು ರಿಸರ್ವ ಮಾಡ್ಕೊಂಡ್ ಹಾಗೆ ಮಾಡ್ತಿರ್ತಾಳೆ , ಯಾರನ್ನ ಮಾತಾಡಿಸಿದ್ರೂ ಪೊಸೆಸಿವ್ ಆಗಿ ಹಿಂಗ ಜಗಳ ಮಾಡಿ ಹಿಂಸೆ ಮಾಡ್ತಿರ್ತಾಳೆ, ಎರಡು ದಿನ ಕಳೆದರೆ ಸರಿ ಹೋಗ್ತಾಳೆ , ಪರವಾಗಿಲ್ಲ ಅವಳು ಹೆಂಗಿದ್ರು ನನ್ನ ಬೆಸ್ಟ್ ಫ್ರೆಂಡ್ ಅವಳೇ.


ಹೀಗೆ ಯೋಚಿಸುತ್ತಾ ಮನೆ ತಲುಪಿದ ಗೌರವ್.


ಅಷ್ಟರಲ್ಲಿ ಒಂದು ಫೋನ್ ಕಾಲ್ ಬಂದು ಗೌರವನನ್ನು ಭಯದಲ್ಲಿ ಬೀಳುವಂತೆ ಮಾಡಿತು. ಕ್ಷಣಮಾತ್ರದಲ್ಲಿ ಆಸ್ಪತ್ರೆ ತಲುಪಿದನು. ಓಡಿ ಹೋಗಿ ರಿಸಪ್ಸೆನಿಸ್ಟ್ ಕಡೆ ಮಾತಾಡಿ ಐ.ಸಿ.ಯು ಕಡೆಗೆ ಓಡಿದನು .


ಅಷ್ಟರಲ್ಲಾಗಲೇ ಅಲ್ಲಿ ಬಾಗಿಲು ಹಾಕಿಯಾಗಿತ್ತು. ಜೊತೆಗೆ ಬಾಗಲಲ್ಲಿ ರವಿ ಸಿಕ್ಕು , ಗೌರವ್ ನನ್ನು ಕಂಡು ಬೇಜಾರು ಮಾಡಿಕೊಂಡ. ತನ್ನ ತಂಗಿ ರಾಶಿ ಮಾಡಿಕೊಂಡ ಆವಾಂತರಕ್ಕೆ ಬೈಯ್ದನು. ಅಷ್ಟರಲ್ಲಿ ಆಕೆಯನ್ನು ವಾರ್ಡ್ ಗೆ ಶಿಫ್ಟ್ ಮಾಡಿದರು . ಅಲ್ಲಿ ರವಿ ಜೊತೆ ಗೌರವ್ ಕೂಡ ಹೋದನು. ಹೋಗಿ ಮಾತನಾಡಿದನು. ರಾಶಿಯ ಮನದಲ್ಲಿದ್ದ ಭಾವನೆಯನ್ನು ಕಿತ್ತೊಗೆಯಲು ಹೇಳಿದನು. ಆದರೆ ರಾಶಿಯ ಉತ್ತರವೇ ಬೇರೆ ಇತ್ತು.


ಹಾಗಾದರೆ ರಾಶಿಯ ಉತ್ತರವೇನು?

ಗೌರವ್ ನ ಮುಂದಿನ ನಡೆ ಏನು ?


ಮುಂದಿನ ಭಾಗದಲ್ಲಿ ನೋಡೋಣ...Rate this content
Log in

More kannada story from Shridevi Patil

Similar kannada story from Horror