STORYMIRROR

Kiran Kumar S K

Abstract Drama Inspirational

3  

Kiran Kumar S K

Abstract Drama Inspirational

ಮನುಜತ್ವದ ದೀಪ

ಮನುಜತ್ವದ ದೀಪ

1 min
131

ಅದೊಂದು ಕುಗ್ರಾಮ. ಆ ಗ್ರಾಮದಲ್ಲಿ ಬಹಳಷ್ಟು ಕುಟುಂಬಗಳು ವ್ಯವಸಾಯದ ಮೇಲೆ ಅವಲಂಬಿತರಾಗಿ, ಕೆಲವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಆ ಗ್ರಾಮದಲ್ಲಿ ಕೃಷ್ಣಪ್ಪ ಎಂಬ ರೈತನಿದ್ದ. ಆತ ಶ್ರಮ, ಭಕ್ತಿ ಕಷ್ಟಪಟ್ಟು ತನ್ನ ಕೆಲಸ ಮಾಡುತ್ತಿದ್ದನ್ನಲ್ಲದೆ, ಅವನ ಒಳ್ಳೆಯ ಗುಣಗಳಿಂದ ಎಲ್ಲರ ಪ್ರೀತಿಪಾತ್ರನಾಗಿದ್ದ. ತನ್ನ ಕೈಲಾದಷ್ಟು ಬಡವರಿಗೆ ಸಹಾಯ ಮಾಡುವಲ್ಲಿ ಸದಾ ನಿರತನಾಗುತಿದ್ದ. ಅಂದು ದೀಪಾವಳಿ, ಊರಿನ ಜನ ಪೂಜೆ, ಪುನಸ್ಕಾರಗಳನ್ನು ಮಾಡಿ ಹಬ್ಬವನ್ನು ವಿಜೃಂಬಣೆಯಿಂದ ಸಂಭ್ರಮಿಸುತ್ತಿದ್ದರು. ಮಕ್ಕಳು ಹಿರಿಯರೊಡನೆ ಪಟಾಕಿ ಸಿಡಿಸಿ ಹಬ್ಬ ಆಚರಿಸುತ್ತಿದ್ದರು. ಆದರೆ ಕೃಷ್ಣಪ್ಪ ದೀಪಾವಳಿಯ ದಿನದಂದು ತಾನು ವರ್ಷಪೂರ್ತಿ ದುಡಿದು ಕೂಡಿಟ್ಟ ಸ್ವಲ್ಪ ಹಣ, ದವಸ ದಾನ್ಯಗಳನ್ನು ಬಡವರಿಗೆ, ನಿರ್ಗತಿಕರಿಗೆ ಕೊಟ್ಟು ಪ್ರೀತಿ, ಪ್ರೇಮ, ಮನುಜತ್ವದ ದೀಪಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದನು. ದೀಪಾವಳಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ, ಅರ್ಥಪೂರ್ಣವಾಗಿ ಸಂಭ್ರಮಿಸಿ ಇತರರಿಗೆ ನೆರವಾಗಿ, ಅವರ ಜೀವನದಲ್ಲಿ ಬೆಳಕನ್ನು ಹರಡುತ್ತಿದ್ದ. ಇದೆ ರೀತಿಯಲ್ಲಿ, ಪ್ರತಿ ದೀಪಾವಳಿಗೆ, ಬಡವರ ಬಾಳಲ್ಲಿ ಬೆಳಕನ್ನು ಹರಡಿ, ಎಲ್ಲರ ಮನದಲ್ಲಿ ದಿವ್ಯಜ್ಯೋತಿಯಾಗಿ ಅನವರತ ಬೆಳಗುತ್ತಿದ್ದ.


ಬಡವ, ಬಲ್ಲಿದರ ಬಾಳಲ್ಲಿ ಬೆಳಕನ್ನು ಪಸರಿಸುವುದಲ್ಲವೇ ನಿಜವಾದ ದೀಪಾವಳಿ ಸಡಗರ!!


Rate this content
Log in

More kannada story from Kiran Kumar S K

Similar kannada story from Abstract