Aishwarya Ananth

Romance

4.5  

Aishwarya Ananth

Romance

ಮದುವೆ ಬಂಧವೋ ಬಂಧನವೋ..!

ಮದುವೆ ಬಂಧವೋ ಬಂಧನವೋ..!

5 mins
409



ಏ ಆಂಕಲ್ ಏನ್ ರೀ ಹಾಗೆ ನೋಡ್ತಾ ಇದ್ದಿರ ನಾನು ಇಷ್ಟ ಇಲ್ವಾ ನಿಮ್ಮಗೆ...? ಯಾಕೆ ನಾನು ನಿಮ್ಮ ಆ ಸುಬ್ಬಿ ಅಷ್ಟು ಚೆಂದ ಇಲ್ಲ ಅಂತನಾ ಆದರೆ ನಾನೂ ಏನೂ ಮಾಡಲಿ ನಾನೂ ಇರುವುದೇ ಕಪ್ಪು...! ಕಪ್ಪು ಅಂದರೆ ಕೃಷ್ಣ ವರ್ಣ ಅಂತಾರೆ ಆದರೆ ಯಾರೂ ಸಹ ನನ್ನ ಕೃಷ್ಣ ಅಂತ ಇರಲಿ ಒಬ್ಬ ಮನುಷ್ಯೆ ಅಂತಾ ಕೂಡ ನೋಡಲ್ಲ ಆಂಕಲ್ ಎನ್ನುತ್ತಾ ಡೈಲಾಗ್ ಹೇಳಿ ಮುಗಿಸಿ ಕುಳಿತಳು ಮುದ್ದು ಬೊಂಬೆ. 


'' ಓ ಸೂಪರ್ ಮೇಡಂ ಸೂಪರ್ ಎಷ್ಟು ಚೆನ್ನಾಗಿ ಅಭಿನಯಿಸಿದ್ದಿರಿ ಅಂದರೆ ಪಕ್ಕ ನಮ್ಮ ಫಿಲಂ ಹೀಟ್ ಆಗೋದರಲ್ಲಿ ಡೌಟ್ ಏ ಇಲ್ಲ '' ಎಂದರು ಡೈರೆಕ್ಟರ್ ಸರ್.. 


ಸುಮ್ಮನೆ ನಕ್ಕಳು ಅವಳು ಎಂದೋ ಇದೇ ಡೈರೆಕ್ಟರ್ ಹೇಳಿದ ಮಾತು ನೆನಪಾಯಿತು.. 

'' ಎಲ್ಲಿಂದ ಬರ್ತಿರಮ್ಮ ನೀವು ಥೂ ಒಂದು ಚಿಕ್ಕ ಡೈಲಾಗ್ ಹೇಳುವುದಕ್ಕೆ ಬರುವುದಿಲ್ಲ...! ಏನೂ ಇಲ್ಲ ನಿಮ್ಮಂತಹ ಜನಕ್ಕೆ ಯಾಕ್ರೀ ಬೇಕು ಆಕ್ಟಿಂಗ್ ಎಲ್ಲಾ ಹೋಗಿ ಮದುವೆ ಆಗಿ ಅದೇ ಸರಿ'' ಎಂದು ಎಲ್ಲರ ಎದುರು ಅವಮಾನ ಮಾಡಿದ್ದು ಕಂಡು ಅಂದಿನ ದಿನ ಅಳು ಬಂದರೆ ಅದೇ ಇಂದು ಅದನ್ನು ನೆನೆದು ನಗು ಬಂದಿತ್ತು. 

ಜೀವನ ಎಷ್ಟು ವಿಚಿತ್ರ ಎಂದು ಆಶ್ಚರ್ಯವಾಯಿತು ಎಂದೋ ನಾವು ದುಃಖದಲ್ಲಿ ಇದ್ದ ಸಂದರ್ಭವನ್ನು ನೆನೆದರೆ ಖುಷಿ ನೀಡುತ್ತದೆ ಅದೇ ನಾವು ಖುಷಿಯಲ್ಲಿ ಇದ್ದ ಸಂದರ್ಭವನ್ನು ನೆನೆದರೆ ಕಣ್ಣು ಅಂಚು ಒದ್ದೆಯಾಗುತ್ತಾದೆ ಎಂದುಕೊಂಡವಳ ಕಣ್ಣು ಅಂಚು ಒದ್ದೆಯಾಯಿತ್ತು ತನ್ನ ಇನಿಯನ ನೆನೆದು.. 


ತಾನೇ ಇಷ್ಟ ಪಟ್ಟು ಬಿಡುಗಡೆ ಹೊಂದಿದ್ದ ಸಂಬಂಧ ಅದು ಆದರೆ ಆ ನೆನಪು ಇನ್ನೂ ಮಾಸಿಲ್ಲ ಎಂಬುದು ಸತ್ಯ. ಏಕೆ ಎಂಬುದಕ್ಕೆ ಉತ್ತರ...! ಹೂ ಹೂ ದೊರಕಿಲ್ಲ. ಹೌದು ತನ್ನ ವೃತ್ತಿ ಜೀವನಕ್ಕಾಗಿ ತನ್ನ ಕೌಟುಂಬಿಕ ಜೀವನವನ್ನೆ ತ್ಯಜಿಸಿದ ಹುಡುಗಿ ಇವಳು ಸಾದ್ವಿಕ ಬೆಣ್ಣೆ ಮುದ್ದೆಯಂತೆ ಮೈ ಬಣ್ಣ ಗುಂಗುರು ಕೂದಲಿನ ಚೆಲುವೆ.. 


*******

ಏ ಶ್ರೀಗಂಧ ನಿನ್ನ ಸುತ್ತಲೇ ಇರಬೇಕು ಎಂದು ಮನ ಬಯಸುತ್ತಿದೆ ಕಣೇ ಅಬ್ಬಾ ಏನೇ ಇಷ್ಟೊಂದು ಪರಿಮಳ ನಿನ್ನ ಗಂಧ ಹುಚ್ಚು ಹಿಡಿಸುತ್ತದೇ ಕಣೇ ಎಂದವ ಆ ಮರದ ಫೋಟೋ ಒಂದನ್ನು ತೆಗೆದು ತನ್ನ ಇನ್ಸ್ಟಾಗ್ರಮ್ ನಲ್ಲಿ ಆಪ್ಲೊಡ್ ಮಾಡಿ ಅಲ್ಲಿಯೇ ಒಂದು ಬಂಡೆಯ ಮೇಲೆ ಕುಳಿತವನ ಕಿವಿಯಲ್ಲಿ ಗುಯ್ ಗುಯ್ ಎಂದಿತ್ತು ಮಿಂಚಿನ ಹುಳು. 


ಓ ಹುಳುವೇ ಗುಟ್ಟೊಂದನ್ನು ಹೇಳಲು ಬಂದಿರುವೇಯ ಬರೋ ನನ್ನ ಗೆಳೆಯ ಹೇಳು ಗುಟ್ಟು ನಾ ಮಾಡೇನೂ ರಟ್ಟು ಎಂದು ತುಂಟನಗೆ ನಕ್ಕ ಚೆಂದದ ಹುಡುಗ ಕಪ್ಪು ಬಣ್ಣದ ಮೈ ಬಣ್ಣ ತುಂಟ ಕಂಗಳ ಒಡೆಯ ಅಗ್ನೇಯ್.. 


ಆ ಹುಳುವೂ ಅವನ ಮಾತು ಕೇಳಿ ನಾ ಏನೂ ಹೇಳೇನೂ ಎಂದು ಹಾರಿಹೋಯಿತು. ಅದನ್ನು ಕಂಡವನು ಏ ಮಿಂಚಿನ ಹುಳುವೇ ನಿನಗೂ ಬೇಡವಾದೇನಾ ನಾ ಏಕೋ ನಾ ಕಪ್ಪು ಬಣ್ಣವೆಂಬ ಕಾರಣಕ್ಕ ಎಂದು ಬೇಸರಿಸಿಕೊಂಡ ಹುಡುಗ ಮತ್ತೆ ಏನಾನೋ ನೆನಪಿಸಿಕೊಂಡು ನಕ್ಕ.. 


******


ರೀ ಮಿಸ್ಟರ್ ಪ್ರಕಾಶ್ ಎಲ್ಲರಿಗೂ ಹೇಳಿ ಬಿಡಿ ಇದೆ ನನ್ನ ಲಾಸ್ಟ್ ಫಿಲ್ಮ್ ಅಂತ ಮತ್ತೆ ಇನ್ನೂ ಯಾರಿಗೂ ಸಹ ಡೇಟ್ಸ್ ಕೊಡೋದು ಆಗಲಿ ಇಲ್ಲ ಅಷ್ಟೇ ಎಂದವಳು ಕಾಲ್ ಕಟ್ ಮಾಡಿ ಇನಿಯನ ಇನ್ಸ್ಟಾಗ್ರಮ್ ಪೋಸ್ಟ್ ನೋಡಿದವಳ ಮೊಗದಲ್ಲಿ ಮುದ್ದಾದ ಮುಗುಳುನಗೆ ತಕ್ಷಣ ತನ್ನ ಪಿ. ಎ ಗೆ ಕರೆ ಮಾಡಿ ಕೇರಳ ಗೆ ಒಂದು ಫ್ಲೈಟ್ ಟೀಕೆಟ್ ಬೂಕ್ ಮಾಡಿಸಿ ತಾನು ಕೂಡ ಬಟ್ಟೆ ಪ್ಯಾಕ್ ಮಾಡಿ ಹೊರಟಳು ತನ್ನ ಒಲವನ್ನು ಮರಳಿ ಸೇರುವುದಕ್ಕಾಗಿ.. 


*******


ಇತ್ತ ರೂಮಿಗೆ ಬಂದ ಅಗ್ನೇಯ್ ಮಂಚದ ಮೇಲೆ ಮಲಗಿ ಟಿವಿ ನೋಡುತ್ತಾ ಇದ್ದವನನ್ನು ಎಚ್ಚರಿಸಿದ್ದು ಒಂದು ಸುದ್ದಿ. 


'' ಖ್ಯಾತ ನಾಯಕಿ ಎಂದೇ ಪ್ರಸಿದ್ಧಿ ಪಡೆದಿರುವ ಸಾದ್ವಿಕ ವರ್ಮ ರವರು ತಮ್ಮ ಮೂರು ವರ್ಷಗಳ ಫಿಲ್ಮ್ ಕೆರಿಯರ್ ಗೆ ವಿದಾಯ ಹೇಳಿದ್ದಾರೆ. '' 


'' ಇದರ ಮರ್ಮ ಏನಿರಬಹುದು ಏನು ಇದರ ಹಿಂದಿನ ಉದ್ದೇಶ ಸಾಧ್ಯ ದಲ್ಲಿಯೇ ತಿಳಿಯುತ್ತದೆ. '' 


ಥೂ ಏನೂ ನ್ಯೂಸ್ ಅಂತ ಪ್ರಸಾರ ಮಾಡುತ್ತಾರೋ ಏನೋ ಒಂದು ವಿಷಯ ಇಲ್ಲ ಜನಗಳಿಗೆ ಒಂದು ಸಂದೇಶ ಇಲ್ಲ ಎಂದು ಬೈದುಕೊಂಡು ಟಿ. ವಿ ಆಫ್ ಮಾಡಿ ಮಲಗಿದ್ದರು ಮನದಲ್ಲಿ ಒಂದು ಬಗ್ಗೆಯ ಖುಷಿ ಇತ್ತು. 


*******


ಅಬ್ಬಾ ಕೊನೆಗೂ ಕೇರಳಗೆ ಬಂದು ಆಯಿತು ಎಂದು ನಿಟ್ಟುಸಿರು ಬಿಟ್ಟು ಹೋಟೆಲ್ ನತ್ತ ನಡೆದಳು ಸಾದ್ವಿಕ... 


******



ರಾತ್ರಿ ಈ ಸಮಯದಲ್ಲಿ ಯಾರು ಬೆಲ್ ಮಾಡುತ್ತಾರೆ ಎಂದು ಬಾಗಿಲು ತೆರೆದವನನ್ನು ಅಪ್ಪಿದಳೂ ಹುಡುಗಿ. ಅವಳನ್ನು ದೂರ ಸರಿಸಿ ಮುನಿದು ನಿಂತ ಹುಡುಗ.. 


ಒಯ್ ಅಗ್ನಿ ಸಾಹೇಬರೇ ಯಾಕ್ರೀ ಕೋಪ ನೀವು ಕೊಟ್ಟಿರುವ ಸಮಯಕ್ಕೆ ಸರಿಯಾಗಿಯೇ ಬಂದಿದ್ದೇನೆ ಎಂದಳು ತಾನು ಏನೂ ಅವನಿಗೆ ಕಮ್ಮಿ ಇಲ್ಲ ಎಂದು ಕೋಪ ನಟಿಸುತ್ತ. 


ಏ ಸಾದ್ವಿ ಕೋಪ ಮಾಡಿಕೊಳ್ಳ ಬೇಕಾಗಿರುವುದು ನಾನು ನೀನು ಅಲ್ಲ ಸರಿನಾ ಎಂದ ಅಗ್ನೇಯ್ ತುಸು ಏರಿದ ಧ್ವನಿಯಲ್ಲಿ.. 


ಹೌದಾ ಮಿಸ್ಟರ್ ಅಗ್ನೇಯ್ ಹೇಳುತ್ತಾ ಹತ್ತಿರ ಬಂದಳು ಸಾದ್ವಿಕ. 


ಅವಳ ನಡೆಗೆ ದೊಡ್ಡ ಕಣ್ಣು ಬಿಟ್ಟವ ಅವಳನ್ನು ಅತ್ತ ಸರಿಸಿ ಬಾಗಿಲು ಮುಚ್ಚಿ ಅವಳ ಸನಿಹ ಬಂದ. 


ಹುಡುಗ ಸನಿಹ ಬಂದಿದೆ ಹುಡುಗಿಯ ಎದೆ ಬಡಿತ ನೂರಕ್ಕೂ ಹೆಚ್ಚು.. 


ಯಾಕ್ರೀ ಸಾದ್ವಿ ಎದೆ ಬಡಿತ ಜೋರಾಗಿದೆ ಎಂದ ತುಂಟ ನಗೆ ನಕ್ಕು.. 


ಅದೂ ನಮ್ಮ ಇನಿಯ ಹತ್ತಿರ ಇದ್ದಾರೆ ಎಂಬ ಸೂಚನೆ ನೀಡುತ್ತಾ ಇದೆ ಎಂದಳು ಅವನಂತೆಯೇ ತುಂಟ ನಗು ನಕ್ಕು.. 


ಅವಳ ಪರಿಗೆ ಹುಡುಗನಿಗೆ ಮುದ್ದು ಉಕ್ಕಿತ್ತು, ಅಪ್ಪಿದ ಅವಳನ್ನು. 


ತಾನು ಏನೂ ಕಡಿಮೆ ಇಲ್ಲ ಎಂಬಂತೆ ತುಸು ಗಟ್ಟಿಯಾಗಿಯೇ ಆಪ್ಪಿದವಳು '' ಮದುವೆ ಎಂದರೇ ಬಂಧನ ಎಂದು ತಿಳಿದಿದೆ ಆದರೆ ಆ ಅಭಿಪ್ರಾಯ ಬದಲಾಗುವಂತೆ ಮಾಡಿದ್ದು ನೀನು ಅಗ್ನಿ '' ಎಂದು ಅವನ ಕಿವಿಯಲ್ಲಿ ಪಿಸುನುಡಿದಳು. 



ಅವಳ ಪಿಸುಮಾತಿಗೆ ನಕ್ಕವ ಅವಳ ಬಿಸಿ ಉಸಿರು ತಾಕಿ ರೋಮಾಂಚನಗೊಡವನ್ನೆ ಅವಳ ಕುತ್ತಿಗೆ ಚುಂಬಿಸಿದ್ದ ಅವನ ಚುಂಬನಕ್ಕೆ ಹುಡುಗಿ ನಡುಗಿದ್ದಳು. ಮತ್ತು ಮುಂದುವರೆದವ ಅವಳ ಮುಖ ಪೂರ್ತಿ ಚುಂಬಿಸಿ ತುಟಿಯ ಕಡೆ ಬಾಗಿ ಅವಳ ಕಡೆ ದೃಷ್ಟಿಸಿದ್ದ ಅವನ ನೋಟದ ಅರ್ಥ ಬಲ್ಲವಳು ಅವಳೇ ಚುಂಬಿಸಿ ತಮ್ಮ ನಾಲ್ಕು ವರ್ಷದ ದಾಂಪತ್ಯಕ್ಕೆ ಮುನ್ನುಡಿ ಬರೆಯುವ ಮೂಲಕ ತಮ್ಮ ನಡುವಿನ ಅಂತರವನ್ನು ಸಂಪೂರ್ಣವಾಗಿ ದೂರಗೊಳಿಸಿದ್ದರು. 


ತನ್ನ ಎದೆಯ ಮೇಲೆ ತಲೆ ಇಟ್ಟು ಮಲಗಿದ್ದವಳನ್ನು ಕಂಡು ಚೆಂದವಾಗಿ ನಕ್ಕ ಅಗ್ನೇಯ್ ತಮ್ಮ ಗತ ಜೀವನವನ್ನು ನೆನಪಿಸಿಕೊಂಡ. 


ಅಗ್ನೇಯ್ ಹೆಸರಿನಂತೆ ಅಗ್ನಿಯೇ ಅವನ ಕನಸು ನೇಚರ್ ಫೋಟೋಗ್ರಾಫಿ ಆದರೆ ವೃತ್ತಿಯಲ್ಲಿ ಡಾಕ್ಟರ್.. 

ಅವನ ಕಪ್ಪು ಬಣ್ಣದ ಕಾರಣ ವಯಸ್ಸು ಮೂವತ್ತೆರಡು ಆದರೂ ಮದುವೆ ಭಾಗ್ಯವೇ ಇರಲಿಲ್ಲ. 


ಅಂತಹ ಸಂದರ್ಭದಲ್ಲಿ ಸಿಕ್ಕವಳೇ ಸಾದ್ವಿಕ ವಯಸ್ಸು ಇಪ್ಪತ್ತು ಸೆಕೆಂಡ್ ಪಿಯುಸಿ ಮಧ್ಯಮವರ್ಗದ ಮನೆಯ ಹುಡುಗಿ ಅವಳೋ ಕನಸೋ ನಟಿಯಾಗಿ ಮಿಂಚಬೇಕು ಎಂಬುದು ಆದರೆ ಅದಕ್ಕೆ ಮನೆಯಲ್ಲಿ ಅವಕಾಶವಿಲ್ಲ ಕಾರಣ ತುಸು ಹೆಚ್ಚೇ ಪಾಲಿಸುವ ಹಳೆಯ ಸಂಪ್ರದಾಯ ಹೆಣ್ಣು ಮಕ್ಕಳು ಹೊರಗೆ ಹೋಗಿ ದುಡಿಯುವ ಆಗಿಲ್ಲ ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುವ ಮನೆಯವರು.. 


ಹುಡುಗನ ಮನೆಯವರು ತುಸು ಹೆಚ್ಚೇ ಶ್ರೀಮಂತರಾದ ಕಾರಣ ಏನು ಕೇಳದೇ ಕಡೆ ಪಕ್ಷ ಸಾದ್ವಿಕಳನ್ನು ಒಪ್ಪಿಗೆ ಕೇಳದೆ ಮದುವೆ ಮಾಡಿ ಬಿಟ್ಟರು. 


ಆದರೆ ತನ್ನ ಕನಸಿನ ಬಗ್ಗೆ ತುಂಬಾ ಆಸೆಗಳನ್ನು ಇಟ್ಟುಕೊಂಡಿದ್ದ ಹುಡುಗಿಗೆ ಮದುವೆಯೇ ಒಂದು ಬಂಧನ ಎಂಬಂತೆ ಅನ್ನಿಸಿತು ಅದನ್ನು ಕಳೆದುಕೊಳ್ಳುವ ಸಲುವಾಗಿ ಮೊದಲನೇ ರಾತ್ರಿಯೇ ಗಂಡನ ಬಳಿ ಡೈವರ್ಸ್ ಕೇಳಿದ ಹುಚ್ಚು ಹುಡುಗಿ ಆದರೆ ಅದನ್ನು ಕೇಳಿ ಗಾಬರಿಯಾದ ಹುಡುಗ ಏಕೆ ನಾನು ಕಪ್ಪು ಬಣ್ಣ ಎಂಬ ಕಾರಣಕ್ಕ ಎಂದು ಕೇಳಿದ.. 


ಅದನ್ನು ಕೇಳಿ ಇಲ್ಲ ಇಲ್ಲ ಆದರೆ ಎಂದು ತನ್ನ ಆಸೆಯನ್ನು ತಿಳಿಸಿದ ಹುಡುಗಿಯನ್ನು ಕಂಡು ನಕ್ಕುಬಿಟ್ಟ ಅಗ್ನೇಯ್ ಅವ ನಗುತ್ತಾ ಇರುವುದನ್ನು ಕಂಡ ಹುಡುಗಿಗೆ ಬೇಸರವಾಗಿ ಅಳಲು ಶುರುಮಾಡಿತ್ತು. ಅವಳ ಅಳು ಕಂಡು ನಗು ನಿಲ್ಲಿಸಿ ಗಂಭೀರವಾಗಿ ಹೇಳಿದ ಒಂದು ವರ್ಷ ತನ್ನ ಜೊತೆಯಲ್ಲಿ ಇರುವಂತೆ...


ಯಾಕೆ ಎಂದು ಕೇಳಿದ ಹುಡುಗಿಗೆ ನೀನು ಇರೂ ಆಗಲೂ ಇಷ್ಟ ಆಗಲಿಲ್ಲ ಎಂದರೆ ನಿನ್ನ ದಾರಿ ನಿನಗೆ ಎಂದ ಹೂ ಹೇಳಿದವಳು ಅವನು ಹೇಳಿದಂತೆಯೇ ಇದ್ದಳು ಆದರೆ ಯಾವುದೇ ಬದಲಾವಣೆ ಕಾಣಲಿಲ್ಲ ಒಂದು ವರ್ಷ ಕಳೆದೂ ಅವಳು ಹೋಗುವ ದಿನ '' ಹೀಗೆ ಹೇಳ್ತೀನಿ ಅಂತ ಬೇಸರವಾಗಬೇಡ ಸಾದ್ವಿ ನಿನ್ನ ಎಲ್ಲ ಕನಸನ್ನು ನನಸು ಮಾಡಿಕೊಂಡ ನಂತರ ನಿನಗೆ ಒಂಟಿ ಎನ್ನಿಸಿದರೆ ನನ್ನ ಒಂದು ಬಾರಿ ನೆನಪು ಮಾಡಿಕೋ ನಿನಗೊಸ್ಕರ ಇನ್ನೂ ಮೂರು ವರ್ಷಗಳು ಕಾಯುವೇ ಅಂದರೆ ನನ್ನ ನಿನ್ನ ಮದುವೆ ವಾರ್ಷಿಕೋತ್ಸವ ದ ವರೆಗೂ ಆಗಲೂ ನಿನ್ನ ಮನಸ್ಸು ಬದಲಾವಣೆ ಆಗಲಿಲ್ಲ ಎಂದರೆ ನಾನು ನಿನ್ನ ಮರೆಯಲು ಪ್ರಯತ್ನ ಮಾಡುವೆ ಮತ್ತು ಡೈವರ್ಸ್ ಪೇಪರ್ ಕಳಿಸುತ್ತಿನಿ'' ಹೇಳಿದವ ಅವಳನ್ನು ಬಿಳ್ಕೋಟ. 


ಮೊದ ಮೊದಲು ಎಲ್ಲಿಯೂ ಚಾನ್ಸ್ ದೊರೆಯದೆ ಕಷ್ಟ ಪಟ್ಟರು ನಂತರ ಪ್ರಯತ್ನಕ್ಕೆ ತಕ್ಕ ಫಲ ಎಂಬಂತೆ ಶುರುವಾಯಿತು ಹುಡುಗಿಯ ಒಂಟಿ ಪಯಣ ಸ್ಪಲ್ಪ ಕಾಲ ಏನೂ ಅನ್ನಿಸದೇ ಇದ್ದರು ಕಾಲಕ್ರಮೇಣ ಅಗ್ನೇಯ್ ನ್ನ ನೆನಪು ಕಾಡಲು ಶುರುವಾಯಿತು. ಹಾಗೆಯೇ ಇಂದು ಸಹ ಕಪ್ಪು ಬಣ್ಣ ಎಂಬುದು ಕೇಳಿ ಅವನ ನೆನಪು ಹೆಚ್ಚಾಗಿ ಕಾಡಿತ್ತು ಇನ್ನೂ ಆಗದೂ ಎನ್ನಿಸಿದಾಗ ಕ್ಯಾಲೆಂಡರ್ ನೋಡಿದ ಹುಡುಗಿಗೆ ಅರಿವಾಗಿದ್ದು ಅಗ್ನೇಯ್ ಹೇಳಿದ ದಿನಕ್ಕೆ ಒಂದೇ ದಿನ ಬಾಕಿ ಎಂದು ಅದಕ್ಕಾಗಿಯೇ ತಕ್ಷಣ ಅಗ್ನೇಯ್ ನ್ನ ಇನ್ಸ್ಟಾಗ್ರಮ್ ನೋಡಿದಳು ಅಲ್ಲಿ ಕೇರಳ ಎಂಬ ಕ್ಯಾಪ್ಷನ್ ಕಂಡಿದ್ದೆ ತನ್ನ ಪಿ. ಎ ಗೆ ಹೇಳಿ ಫ್ಲೈಟ್ ಟಿಕೆಟ್ ಬುಕ್ ಮಾಡಿಸಿ ಕೇರಳಕ್ಕೆ ಬಂದು ತಲುಪಿದಳು ಹುಡುಗಿ. 


ಎಲ್ಲವನ್ನೂ ನೆನದವನ ಮೊಗದಲ್ಲಿ ನಗು ಮೂಡಿತು ಪಕ್ಕದಲ್ಲಿ ಮಲಗಿದ್ದ ತನ್ನ ಮಡದಿ ಸಾದ್ವಿಕ ಳನ್ನು ಕಂಡಿದ್ದೆ ಏನೋ ತೃಪ್ತಿ ಎನ್ನಿಸಿತು ಟೈಮ್ ನೋಡಿದವ ಅವಳ ಹಣೆಯ ಮೇಲಿನ ಕೂದಲನ್ನು ಸರಿಸಿ ಒಂದು ಬೆಚ್ಚನೆಯ ಮುತ್ತು ಕೊಟ್ಟು '' ಹ್ಯಾಪಿ ಆನಿವರ್ಸರಿ ಮಿಸ್ಸೆಸ್ ಸಾದ್ವಿಕ ಅಗ್ನೇಯ್ '' ಎಂದ. 


ಅವನೂ ಮುತ್ತು ಕೊಟ್ಟಾಗಲೇ ಎಚ್ಚರವಾದ ಹುಡುಗಿ ಅವ ವಿಶ್ ಮಾಡಿದ್ದನ್ನು ಕೇಳಿಸಿಕೊಂಡು ಅವನನ್ನು ಗಟ್ಟಿಯಾಗಿ ತಬ್ಬಿ ನಿಮ್ಮಗೂ ಅಷ್ಟೇ'' ಹ್ಯಾಪಿ ಆನಿವರ್ಸರಿ ಮಿಸ್ಟರ್ ಅಗ್ನೇಯ್ '' ಎಂದಳು. 


ಅಷ್ಟೇನ ಎಂದು ಕಣ್ಣು ಹೊಡೆದ ತುಂಟ ಹುಡುಗ. 


ಅವನ ಮಾತಿಗೆ ನಾಚಿದ ಹುಡುಗಿ ಅವನ ಎದೆಯಲ್ಲಿ ಮುಖ ಉದುಗಿಸಿ '' ಥ್ಯಾಂಕ್ಸ್ '' ಹೇಳಿದವಳ ಕಣ್ಣಿನ ನೀರು ಅವನ ಎದೆ ಸೋಕಿತ್ತು. 


ತನ್ನ ಎದೆ ಒದ್ದೆ ಯಾದ ಅನುಭವ ಆದಾಗ ಅವಳ ಮುಖ ಸರಿಸಿ ನೋಡಿದ ಅಗ್ನೇಯ್ ಬೆಚ್ಚಿದ ಯಾಕೆ ಸಾದ್ವಿ ಕಣ್ಣಲ್ಲಿ ನೀರು ಎಂದ ಗಾಬರಿಯಲ್ಲಿ.. 


ಅದೂ ಖುಷಿಗೆ ಅಗ್ನಿ ನಾನು ಏನೇ ತಪ್ಪು ಮಾಡಿದರೂ ನಿಮ್ಮನ್ನು ಎಷ್ಟೆ ದೂರ ಇಟ್ಟರು ನನ್ನಗೊಸ್ಕರ ಕಾಯುತ್ತಿದ್ದಿರಿ ನಾನು ಎಷ್ಟು ಅದೃಷ್ಟವಂತೆ ಎಂದಳು ಭಾವುಕವಾಗಿ. 


ಆಗೆಲ್ಲ ಏನೂ ಇಲ್ಲ ನಾನೂ ಬೇರೆ ಕರಿಯ ನೀನೂ ಸಿಕ್ಕಿದೆ ತುಂಬಾ ಸಮಯ ಆದಮೇಲೆ ಮತ್ತೆ ಇನ್ನೊಬ್ಬಳನ್ನು ಹುಡುಕಿ ಮದುವೆ ಆಗುವುದು ಅಸಾಧ್ಯ ಎಂದು ನಿನಗಾಗಿ ಕಾಯುತ್ತಿದ್ದೆ ಎಂದ ತಮಾಷೆಯಾಗಿ.. 


ಅವನ ಮಾತಿಗೆ ಹುಸಿ ಮುನಿಸು ತೋರಿ ಅವನನ್ನು ಅಪ್ಪಿದ ಹುಡುಗಿ '' ಮದುವೆ ಎಂಬುದು ಖಂಡಿತ ಬಂಧನ ಅಲ್ಲ ಇದೊಂದು ಗಟ್ಟಿಯಾದ ಬಂಧ ಸುಂದರವಾದ ಅನುಬಂಧ'' ಎಂದಿತ್ತು. 


ಹೂ ಎಂದವ ಅವಳನ್ನು ಮುದ್ದಿಸಲು ಶುರುಮಾಡಿದ. ಅವನಿಗೆ ಪ್ರತಿಯಾಗಿ ಸ್ಪಂದಿಸಿದ ಹುಡುಗಿ ಅವನೊಂದಿಗೆ ಒಂದಾದಳು.



ಮುಕ್ತಾಯ..




Rate this content
Log in

Similar kannada story from Romance