mookonda damayanthi

Horror Others

4  

mookonda damayanthi

Horror Others

ಕೊಳ್ಳಿ ದೆವ್ವ

ಕೊಳ್ಳಿ ದೆವ್ವ

1 min
727


ಸುತ್ತಲು ಬೆಟ್ಟ ಗುಡ್ಡ, ಕೆಳಗೆ ಕಣಿವೆ ಅದರ ಜೊತೆಯಲ್ಲಿ ಮುಳ್ಳು ಗಿಡಗಂಟಿಗಳ ಪೊದೆಗಳ ಸಾಲು. ಅದರ ಮಧ್ಯದಲ್ಲೊಂದು ಪುರಾತನಕಾಲದ ಮನೆ. ಅಲ್ಲಿ ಯಾರು ವಾಸ ಇಲ್ಲ. ಅದೊಂದು ದೆವ್ವದಮನೆಯೆಂದು ಅಲ್ಲಿನ ಜನರ ನಂಬಿಕೆ. ಅಕ್ಕ ಪಕ್ಕದಲ್ಲಿ ಪಾಳು ಬಿದ್ದಮಂಟಪಗಳು, ಅದರ ಹತ್ತಿರದಲ್ಲಿ ಕಾಲುದಾರಿ, ಆ ದಾರಿಯಲ್ಲಿ ಸ್ವಲ್ಪಮುಂದಕ್ಕೆ ದಟ್ಟವಾದ ಕಾಡು.

ರಾತ್ರಿಯ ಸಮಯದಲ್ಲಿ ಯಾರ ಓಡಾಟವು ಇರುವುದಿಲ್ಲ. ಇರುಳುಕತ್ತಲು ತುಂಬಾ ಭಯಾನಕ, ಆಕಾಶ ಭೂಮಿ ಒಂದಾಗಿ ಕಪ್ಪನೆಯಬೃಹತಾಕಾರದ ಭೂತ ಎದ್ದು ನಿಂತಂತೆ ಕಾಣುತ್ತದೆ. ಎಲ್ಲೆಲ್ಲೂ ಭಯಾನಕನೀರವ ಮೌನ. ಒಮ್ಮೊಮ್ಮೆ ನರಿ, ಗೂಬೆ, ಕಾಡು ಪ್ರಾಣಿಗಳಕಿರುಚಾಟದ ಭಯಂಕರ ಕೂಗು. ಆ ಸದ್ದಿಗೆ ಹೆದರಿ, ಜನರು ಭಯದಿಂದಪ್ರಾಣವನ್ನು ಬಿಟ್ಟಿದಾರೆ.

ರಾತ್ರಿಯಾದರೆ, ಆ ಕಣಿವೆಗಳು ಕಪ್ಪನೆ ಉದ್ದವಾದ ಹೆಬ್ಬಾವುಗಳುಮಲಗಿದಂತೆ ಗೋಚರಿಸುತ್ತಿದ್ದವು. ಒಂದೊಂದು ಸಲ ದೆವ್ವಗಳ ತಲೆಕೂದಲು ಹರಿದಾಡಿದಂತೆ ಕಾಣುತಿತ್ತು. ಮಂಟಪದ ಪಕ್ಕದಲ್ಲಿ ಇರುವದೊಡ್ಡ ಮರದ ಕೊಂಬೆಗಳಲ್ಲಿ ನೇತಾಡುತಿರುವ ಬೇರುಗಳು ರಾತ್ರಿಯವೇಳೆ ಹಾವುಗಳು ನೇತಾಡುತಿರುವಂತೆ ಕಾಣುತ್ತಿದ್ದವು. ಮಂಟಪದಗೋಡಗಳಲ್ಲಿ ಚಿತ್ರ ವಿಚಿತ್ರವಾದ ಭಯಾನಕ ಚಿತ್ರಗಳು, ಸತ್ತ ಮನುಷ್ಯರತಲೆ ಬುರುಡೆಯ ಚಿತ್ರವನ್ನು ಹೋಲುತ್ತಿತ್ತು.  

ದಾರಿ ತಪ್ಪಿ ಆ ಸ್ಥಳಕ್ಕೆ ರಾತ್ರಿ ವೇಳೆ ಮನುಷ್ಯರು ಬಂದರೆ, ಆ ಭಯಾನಕಧೃಶ್ಯವನ್ನು ನೋಡಿ ರಕ್ತ ಕಾರಿಯೇ ಸಾಯುತ್ತಿದ್ದರು.

 

ಅಮಾವಾಸೆಯ ದಿನ, ಮಂಟಪದ ಒಳಗಡೆ ಮರ ಕತ್ತರಿಸುವ ಸದ್ದು, ಕಾಲು ದಾರಿಯಲ್ಲಿ ಲಾರಿಗಳ ಓಡಾಟದ ಸದ್ದು. ಲಾರಿಗಳ ಜೊತೆಯಲ್ಲಿ, ಕೊಳ್ಳಿದೆವ್ವ (ಬೆಂಕಿ ಕೊಳ್ಳಿಯನ್ನು ಹಿಡಿದ ದೆವ್ವ) ಓಡಾಡುತ್ತಿರುವುದನ್ನುನೋಡಿದ್ದೇವೆಂದು ಕೆಲವರು ಹೇಳುತ್ತಾರೆ.

 

ಮಟ ಮಟ ಮಧ್ಯಾಹ್ನದ ಹೊತ್ತು, ಗಂಡ ಹೆಂಡತಿರಿಬ್ಬರು, ಹೆಸರುನಂಜಣ್ಣ ರಾಮಕ್ಕ ಆ ಜಾಗಕ್ಕೆ ಬಂದರು. ಅಲ್ಲಿನ ಪುರಾತನ ಮನೆಯನ್ನುನೋಡಿದರು. ಯಾರು ವಾಸವಿಲ್ಲದ ಪಾಳು ಮನೆಯನ್ನು ನೋಡಿತುಂಬಾ ಖುಷಿಯಾಯಿತು. ಇರಲಿಕ್ಕೆ ಸೂರು ಸಿಕ್ಕಾಯಿತು ಎಂದುದೇವರಿಗೆ ಕೃತಜ್ಞತೆ ಯನ್ನು ಸಲ್ಲಿಸಿ, ನೆಮ್ಮದಿಯಿಂದ ಇರ ತೊಡಗಿದರು. 

 

ಆ ಊರಿನ ಜನರಿಗೆ ಇವರ ಆ ಮನೆಯಲ್ಲಿ ವಾಸ ಮಾಡುತ್ತಿರುವವಿಷಯ ತಿಳಿದು ಅಲ್ಲಿಗೆ ಬಂದು ಹೇಳಿದರು, " ಭೂತ ಪಿಶಾಚಿಗಳುಇರುವ ಸ್ಥಳದಲ್ಲಿ ನೀವು ಇರಬೇಡಿ". ಅದಕ್ಕೆ ನಂಜಣ್ಣ ಹೇಳಿದನು, "ಕೆಟ್ಟಜನರ ಸಹವಾಸಕ್ಕಿಂತ ದೆವ್ವಗಳ ಸಹವಾಸ ಎಷ್ಟೋ ವಾಸಿ, ಅವುಸುಮ್ಮನೆ ಯಾರಿಗೂ ತೊಂದರೆ ಕೊಡುವುದಿಲ್ಲ, ನಮಗೆ ಅವುಗಳಭಯವಿಲ್ಲ".

 

ಮನೆಯ ಸುತ್ತ ಮುತ್ತ ಇದ್ದ ಮುಳ್ಳು ಗಿಡ ಗಂಟಿಗಳೆಲ್ಲವನ್ನು ಕಡಿದು, ಜಾಗ ಸಮ ಮಾಡಿ ತರಕಾರಿಗಳನ್ನು ಬೆಳೆಸಿದರು. ಜೊತೆಯಲ್ಲಿ ವಿಧವಿಧದ ಬಾಳೆಹಣ್ಣಿನ ಗಿಡಗಳನ್ನು ನೆಟ್ಟರು. ವಾರಕೊಮ್ಮೆ ನಂಜಣ್ಣ ಮತ್ತುರಾಮಕ್ಕ ಸಂತೆಗೆ ಹೋಗಿ ತಾವು ಬೆಳದ ತರಕಾರಿ ಹಣ್ಣುಗಳನ್ನುಮಾರುತ್ತಿದ್ದರು. 

 

ಇವರ ನೆಮ್ಮದಿಯ ಜೀವನವನ್ನು ನೋಡಿ ಅಲ್ಲಿನ ಜನರಿಗೆಆಶ್ಚರ್ಯವಾಗುತ್ತಿತು. ಕೆಲವರು ಅವರನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದರು.  

 

ಆ ಊರಿನಲ್ಲಿ ಮಂಜ ಮತ್ತು ತಿಮ್ಮ ಎಂಬ ಸೋಮಾರಿಗಳಿದ್ದರು. ಯಾವ ಕೆಲಸವನ್ನು ಮಾಡದೆ ಅಲ್ಲಿ ಇಲ್ಲಿ ಕಳ್ಳತನ ಮಾಡಿಕೊಂಡುಜೀವನ ಸಾಗಿಸುತ್ತಿದ್ದರು. 

 

ಒಂದು ದಿನ ಸಂತೆಯಲ್ಲಿ ನಂಜಣ್ಣ ಮಾರಲು ಇಟ್ಟಿದ ರಸ ಬಾಳೆಹಣ್ಣಿನಗೊನೆಯನ್ನು ನೋಡಿದ ಮಂಜ. ಏನು ನಂಜಣ್ಣ ಬಾಳೆ ವ್ಯಾಪಾರಜೋರಾಗಿ ನಡೆಯುತ್ತಿದೆಯಲ್ಲ, ಒಂದೇ ಗೊನೆ ಬಾಕಿ ಇದೆ.

 

ಯಾಕಪ್ಪ, ನಿನಗೆ ಬೇಕಾದರೆ ತೆಗೆದುಕೋ. ಇನ್ನು ಎರಡು ಮೂರು ರಸಬಾಳೆ ಗೊನೆ ಇದೆ, ಬರುವ ಸಂತೆಗೆ ಅದನ್ನು ಹೊತ್ತು ಕೊಂಡು ತರುತ್ತೇನೆ.

 

ಮಂಜ ತಿಮ್ಮ ಒಬ್ಬರ ಮುಖ ಒಬ್ಬರು ಕಣ್ಸನ್ನೆಯಲ್ಲಿ ಏನೋ ಮಾತಾಡಿಅಲ್ಲಿಂದ ಹೊರಟು ಹೋದರು.

 

ನಂಜಣ್ಣನಿಗೆ ಅವರ ಮೇಲೆ ಏನೋ ಸಂಶಯ ಉಂಟಾಯಿತು. 

 

ರಾತ್ರಿ ಗಂಟೆ ೧೨ ಹೊಡೆಯಿತು. ಅಂದು ಅಮಾವಾಸ್ಯೆ ಬೇರೆ. ಹೊರಗಡೆಏನೋ ಸದ್ದು ಕೇಳಿ ಬಂತು. 

ಆ ಸದ್ದಿಗೆ ನಂಜಣ್ಣನಿಗೆ ಎಚ್ಚರವಾಯಿತು. ಬಾಯಾರಿಕೆಯಾಗಿ ನೀರುಕುಡಿಯಲು ಅಡುಗೆ ಕೋಣೆಗೆ ಹೋದನು. ಕಿಟಿಕಿಯಿಂದ ಉರಿಯುವಬೆಂಕಿ ಕಾಣಿಸಿತು. ಭಯವಾಗಿ ಬೆನ್ನು ಮೂಳೆಯಲ್ಲಿ ನಡುಕವುಂಟಾಯಿತು. ಧೈರ್ಯದಿಂದ ಒಂದು ಘಳಿಗೆ ಹಾಗೆಯೇ ಗೋಡೆಗೆಒರಗಿ ನಿಂತುಕೊಂಡನು. ಹೊರಗಡೆಯಿಂದ ಯಾರೋ ಮಾತನಾಡುವಧ್ವನಿ ಕೇಳಿಸಿತು. ಆ ಸ್ವರವನ್ನು ಎಲ್ಲೋ ಕೇಳಿದಂತೆ ಇತ್ತು. ಮೆಲ್ಲನೆಕಿಟಿಕಿಯ ಸಂಧಿಯಿಂದ ಇಣಕಿ ಹೊರಗಡೆ ನೋಡಿದನು. ಬಿಳಿ ಬಟ್ಟೆಧರಿಸಿದ ವ್ಯಕ್ತಿ ನಿಂತಿದನು. ಅವನ ಕೈಯಲ್ಲಿ ಉರಿಯುತ್ತಿರುವ ಬೆಂಕಿಯಪಂಜು. ಇನ್ನೊಬ್ಬನು ಕತ್ತಿಯಿಂದ ರಸ ಬಾಳೆ ಗೊನೆಯನ್ನುಕಡಿಯುತ್ತಿದ್ದನು, ಅವನೇ ಸಂತೆಯಲ್ಲಿ ನೋಡಿದ ತಿಮ್ಮ ನಾಗಿದ್ದನು.

 

ನಂಜಣ್ಣ ಒಳಗಡೆ ಹೋಗಿ ಬಿಳಿಯ ಚಾದರವನ್ನು ತಲೆಯಿಂದಕಾಲಿನವರೆಗೆ ಸುತ್ತಿಕೊಂಡನು. ಕೈಯಲ್ಲಿ ಬಿದಿರಿನ ಬೊಂಬಿಯಲ್ಲಿಉರಿಯುವ ಬೆಂಕಿ. ನಿಧಾನವಾಗಿ ಮನೆಯ ಹೊರಗೆ ಹೋಗಿ ಅವರುಬರುವ ದಾರಿಯಲ್ಲಿ ನಿಂತನು. 

 

ತಿಮ್ಮ ಮತ್ತು ಇನ್ನೊಬ್ಬ ಎರಡು ರಸ ಬಾಳೆ ಗೊನೆಯನ್ನು ಎತ್ತಿಕೊಂಡುಬಂದರು. ಬಿಳಿ ಬಟ್ಟೆ ಧರಿಸಿ, ಕೈಯಲ್ಲಿ ಉರಿಯುವ ಬೆಂಕಿಯ ಪಂಜನ್ನುನೋಡಿ, ಭಯದಿಂದ ಬಾಳೆ ಗೊನೆಯನ್ನು ಅಲ್ಲಿಯೇ ಬಿಟ್ಟು, " ಕೊಳ್ಳಿದೆವ್ವ, ಕೊಳ್ಳಿ ದೆವ್ವ..." ಎಂದು ಕಿರುಚುತ್ತಾ ಓಡಿ ಹೋದರು. 

 

ನಂಜಣ್ಣ ಬಾಳೆ ಗೊನೆಯನ್ನು ಎತ್ತಿಕೊಂಡು ಮನೆಗೆ ಹೋದನು.    


Rate this content
Log in

More kannada story from mookonda damayanthi

Similar kannada story from Horror