nagavara murali

Classics Inspirational Others

2  

nagavara murali

Classics Inspirational Others

ಭಾಗ್ಯದ ಬಾಗಿಲು

ಭಾಗ್ಯದ ಬಾಗಿಲು

5 mins
122


ಭಾಗ್ಯ ಸ್ಪುರದ್ರೂಪಿ ಹುಡುಗಿ .ಯಾರೇ ಆದರೂ ಇವಳ ನ್ನ ಒಮ್ಮೆ ನೋಡಿದರೆ ಮತ್ತೆ ನೋಡ ಬಯಸುವ ಅಪ್ರತಿಮ ಸೌಂಧರ್ಯ. ಬಹಳ ಕಷ್ಟ ಪಟ್ಟು B. com ಮುಗಿಸಿ ಒಂದು ಖಾಸಗಿ ಬ್ಯಾಂಕ್ ನಲ್ಲಿ ನೌಕರಿ ಮಾಡು ತ್ತಿದ್ದಾಳೆ. ಮನೆಯಲ್ಲಿ ತಂದೆ ತಾಯಿ ಒಬ್ಬ ಅಣ್ಣ ಮಾತ್ರ. ಅಣ್ಣ SSLC ಎರಡು ಸಲ ಫೇಲ್ ಆಗಿ ಒಂದು ಲಾಯರ್ ಆಫೀಸ್ ನಲ್ಲಿ ಸಹಾಯಕನ ಕೆಲಸ ಮಾಡ್ಕೋಂಡು ಇದ್ದಾನೆ. ಇವಳ ಸಹಕಾರದಿಂದ ಸಂಸಾರ ಹೇಗೋ ಮೊದಲಿಗಿಂತ ಈಗ ಸುಧಾರಿಸಿದೆ. ಭಾಗ್ಯಳಿಗೂ ಇತರ ಹುಡುಗಿಯರಂತೆ ನೂರಾರು ಕನಸಗಳು. ಆದರೆ ಯಾವುದೂ ಕೈಗೂಡವುದು ಅಷ್ಟು ಸುಲಭವಾಗಿರಲಿಲ್ಲ. ಒಳ್ಳೆಯ ನೌಕರಿಯಲ್ಲಿರುವ ಹುಡುಗನಾದರೂ ಇಷ್ಟ ಪಟ್ಟು ಮದುವೆಯಾದರೆ ಆ ಆಸೆಗಳು ಈಡೇರಬಹುದೇ ನೋ ಎನ್ನುವ ಒಂದೇ ಆಸೆಗೂ ಮನೆಯ ವಾತಾವರಣ ಸಹಕಾರಿಯಾಗಿಲ್ಲ.


       ಹೀಗಿರುವಾಗ ಒಂದು ದಿನ ಇವಳ ಬ್ಯಾಂಕ್ ಮ್ಯಾನೇಜರ್ ತಮ್ಮ ಚೇಂಬರ್ ಗೆ ಕರೆದು ಹೇಳಿದರು ನೋಡಿ ಭಾಗ್ಯ , ನೀವು ಹೋದ ವರ್ಷ ಟಾರ್ಗೆಟ್ ರೀಚ್ ಮಾಡಿಲ್ಲದಿದ್ದರೂ ಸುಮ್ಮನಿದ್ದೆ. ಈ ವರ್ಷವೂ ನಿಮ್ಮದು ಅದೇ ಪರಿಸ್ಥಿತಿ. ನೀವು ಕೆಲಸಕ್ಕೆ ಸೇರುವಾಗ ಲೇ ಬ್ಯಾಂಕ್ ನ ಎಲ್ಲಾ ಕಂಡೀಶನ್ ಗಳಿಗೂ ಒಪ್ಪಿ ಸಹಿ ಮಾಡಿದ್ದೀರಿ. ನನಗೆ ಹೆಡ್ ಆಫೀಸ್ ನಿಂದ ಟಾರ್ಗೆಟ್ ರೀಚ್ ಮಾಡದೇ ಇರೋರ list ಕಳಿಸಿಕೊಡಿ ಅಂತ ಬಹಳ ಒತ್ತಡ ಬರ್ತಾ ಇದೆ. ನಿಮಗೆ ತಿಳಿದಿರುವ ಹಾಗೆ , ಹೀಗೇ ಮುಂದುವರೆದರೆ ನಿಮ್ಮ ಕೆಲಸ ಹೋದರೂ ಆಶ್ಚರ್ಯ ವಿಲ್ಲ. ನಂತರ ನಾನೇನೂ ಮಾಡಕ್ಕಾಗ ಲ್ಲ .ನೀವು ಬೇರೆ ಎಲ್ಲಾ ಕೆಲಸ ಬಹಳ ಶಿಸ್ತಿನಿಂದ ಮಾಡ್ತಾ ಇದ್ದರೂ ಟಾರ್ಗೆಟ್ ರೀಚ್ ಮಾಡದೇ ಇದ್ದರೆ ಏನು ಪ್ರಯೋಜನ ಹೇಳಿ ಅಂದಾಗ ಭಾಗ್ಯ ಗಳಗಳ ಅತ್ತು ನನ್ನ ಕೈಲಿ ಆಗ್ತಾ ಇಲ್ಲ ಸಾರ್ ಬೇರೆಯವರಂತೆ ಅವರಿವರನ್ನ ಹಿಡಿದು ಡಿಪಾಸಿಟ್ ಮಾಡಿಸಲು ಆಗ್ತಿಲ್ಲ. ನಮ್ಮ ಮನೆ ವಿಷಯ ನಿಮಗೆ ತಿಳಿದೇ ಇದೆ ಕೆಲಸ ಹೋದರಂತೂ ನಾನು ಬದುಕಿ ಉಳಿಯಲ್ಲ. ಮತ್ತೆ ಬಿಕ್ಕಿ ಬಿಕ್ಕಿ ಅತ್ತಾಗ ಮ್ಯಾನೇಜರ್ ಮನಸು ಕರಗಿಹೋಗಿ ಅಳಬೇಡಿ. ಹೊರಗೆ ಇರೋರು ತಪ್ಪು ತಿಳ್ಕೊಂಡಾರು. ನನಗೂ ಅರ್ಥ ಆಗತ್ತೆ. ಆಯ್ತು ನಾನು ಒಂದು ಸಹಾಯ ಮಾಡಬಹುದು .ನನಗೆ ಬಹಳ ಬೇಕಾದವರೊಬ್ಬರು ಇದ್ದಾರೆ. ಅವರು ನನ್ನ ದೂರದ ಸಂಬಧಿಯೂ ಹೌದು . ಒಬ್ಬರೇ ಇರ್ತಾರೆ. ಅವರ ಮೂರು ಜನ ಮಕ್ಕಳು ವಿದೇ ಶದಲ್ಲಿ ಇದ್ದಾರೆ. ಇತ್ತೀಚೆಗೆ ಯಾವುದೋ ಹಳೇ ಕೋರ್ಟ್ ಕೇಸ್ ಒಂದು ಇವರ ಕಡೆ ಆಗಿ ಅವರಿಗೆ ಒಂದು ಕೋಟಿ ರೂಪಾಯಿ ಮುಂದಿನ ವಾರ ಬರುವುದರಲ್ಲಿದೆ. ಅವ ರಿಗೆ ಯಾರಲ್ಲೂ ನಂಬಿಕೆ ಇಲ್ಲ .ಆದರೆ ನಾನು ನಮ್ಮ ಬ್ಯಾಂಕ್ ನಲ್ಲಿ ಇಡಲು ಹೇಳಿದೆ. ಬೇಡಪ್ಪ ನೆಂಟರ ಹತ್ತಿರ ಹಣದ ವ್ವವಹಾರ ಒಳ್ಳೆಯದಲ್ಲ ಅಂದರು .ಆದರೂ ಅವರು ಅದನ್ನ  ಸೀರಿಯಸ್ ಆಗಿ ಹೇಳಿದ್ದಲ್ಲ ಅಂತ ನನ್ನ ಭಾವನೆ. ನೀವು ಅವರನ್ನು ಕಂಡು convince ಮಾಡಿ ನಮ್ಮ ಬ್ಯಾಂಕ್ ಬಗ್ಗೆ ಇನ್ನಷ್ಟು ಚೆನ್ನಾಗಿ ತಿಳಿಸ ಬೇಕು ಎಂದಾಗ ಸ್ವಲ್ಪ ಸಮಾಧಾನ ಆಯ್ತು. ಧನ್ಯವಾದ ಹೇಳಿ ಹೊರಬಂದಳು. 


ಇದೇ ಬ್ಯಾಂಕ್ ನಲ್ಲಿ ಕೆಲಸ ಮಾಡುವ ರಾಣಿಗೆ ಈ ವಿಷ ಯ ಹೇಗೋ ತಿಳಿದು ಭಾಗ್ಯಳ ಹತ್ತಿರ ಬಂದು ಹೆಸರಿಗೆ ತಕ್ಕ ಹಾಗೆ ನಿಂದು ಅದೃಷ್ಟನಮ್ಮ .ನನ್ನ ದುರಾದೃಷ್ಟ ನೋಡು ಟಾರ್ಗೆಟ್ ಅಂತ ಹಗಲೂ ರಾತ್ರಿ ಸುತ್ತಿದರೂ ರೀಚ್ ಆಗಕ್ಕೇ ಆಗ್ತಾ ಇಲ್ಲ. ನಿನ್ನ ಮನೆ ಪರಿಸ್ಥಿತಿಗಿಂತ ನನ್ನದು ಕೆಟ್ಟದಾಗಿದೆ. ನಿನಗಾದರೂ ಮ್ಯಾನೇಜರ್ ಸಹಾಯ ಮಾಡ್ತಾರೆ. ನನಗೆ ಯಾರು ಮಾಡ್ತಾರೆ. ನಾನೂ ನಿನ್ನ ಹಾಗೆ ನೋಡಕ್ಕೆ ಸುಂದರವಾಗಿ ಇದ್ದಿದ್ದರೆ ಯಾರಾ ದರೂ ಸಹಾಯ ಮಾಡ್ತಿದ್ದರೇನೋ. ನನ್ನ ದುರಾದೃಷ್ಟ ಅಂತ ಬಾಯಿಗೆ ಬಂದ ಹಾಗೆ ಏನೇನೋ ಮಾತಾಡಿ ಹೊರಟು ಹೋದಳು.


ಭಾಗ್ಯಳ ಮನಸ್ಸು ಕೆಟ್ಟು ಅರ್ಧ ದಿನ ರಜ ಹಾಕಿಬಂದ ಳು .ಮನೇಗೆ ಹೋದರೆ ಕಾರಣ ಕೇಳ್ತಾರೆ ಅಂತ ರಂಗ ನಾಥನ ದೇವಸ್ಥಾನಕ್ಕೆ ಬಂದು ಕೈಮುಗಿದು ಅದರ ಪಕ್ಕದಲ್ಲಿ ಹರಿಯೋ ಕಾವೇರಿ ನದಿ ದಡದ ಮೇಲೆ ಒಬ್ಬ ಳೇ ಮರಳಲ್ಲಿ ಕೂತು ಹಾಗೇ ಒಂದು ಕ್ಷಣ ಕಣ್ಣು ಮುಚ್ಚಿ ದಳು .ಯಾರೋ ತಲೆ ಮೇಲೆ ಕೈ ಇಟ್ಟ ಹಾಗಾಗಿ ಹೆದರಿ ಕಣ್ಣು ಬಿಟ್ಟರೆ ವಯಸ್ಸಾದ ಒಂದು ಹೆಂಗಸು ಅರಿಸಿನ ಕುಂಕುಮ ಹೂವು ಕೊಟ್ಟು ನಗುತ್ತಾ ಇವತ್ತು ಮಾಘ ಪೌರ್ಣಿಮೆ .ಯಾರಿಗಾದರೂ ಐದು ಜನ ಮದುವೆ ಯಾಗದ ಹೆಣ್ಣು ಮಕ್ಕಳಿಗೆ ಏನಾದರೂ ಸಹಾಯ ಮಾಡುವುದು ನಮ್ಮ ತಾಯಿ ಕಾಲದಿಂದ ನಡೆದು ಕೊಂಡು ಬಂದಿದೆ. ಈಗ ಹೇಳು ನಿನಗೆ ನನ್ನಿಂದ ಏನು ಸಹಾಯ ಬೇಕು. ಸಂಕೋಚವಿಲ್ಲದೆ ನನ್ನನ್ನ ನಿನ್ನ ತಾಯಿ ಅಂತಲೇ ತಿಳಿದು ಕೇಳು ಅಂದರು.ಆ ಹೆಂಗಸನ್ನ ನೋಡಿದ ತಕ್ಷಣ ಇವಳಿಗೆ ಹೊರಗಿನವರು ಅಂತ ಅನಿಸಲೇ ಇಲ್ಲ. ಮಾತು ಅಷ್ಟೇ . ಅಮ್ಮಾ ಒಂದೊಂದು ಹೆಣ್ಣಿಗೆ ಒಂದೊಂದು ಕಷ್ಟ .ಒಬ್ಬರಿಗೆ ಬೆಟ್ಟದಷ್ಟು ಇರಬಹುದು ಮತ್ತೊಬ್ಬರಿಗೆ ಸಾಸುವೆ ಕಾಳಿನಷ್ಟು ಇರಬಹುದು. ಆದರೆ ಕೆಲವು ಕಷ್ಟಗಳಂತೂ ಹುಟ್ಟಿ ನಿಂದಲೇ ಬಂದು ಬಿಡದೇ ಕಾಡುತ್ತೆ. ಅಂದಾಗ ಅದೆಲ್ಲಾ ನನಗೂ ಗೊತ್ತು. ಇಲ್ಲೇ ಇರು ನಮಸ್ಕಾರ ಮಾಡಿ ಬರ್ತೀನಿ ಅಂತ ಹೇಳಿ ಅವರ ಕೈಲಿದ್ದ ಬ್ಯಾಗ್ ಕೊಟ್ಟು ಹೋದರು. ಹತ್ತೇ ನಿಮಿಷದಲ್ಲಿ ವಾಪಸ್ ಬಂದು ಬಾಮ್ಮ ನಮ್ಮ ಮನೆ ಇದೇ ರಸ್ತೆಯ ಕೊನೇಲಿದೆ ಅಂತ ಹೇಳಿದಾಗ ಇಬ್ಬರೂ ಹೊರಟರು.


ಮನೆ ನೋಡಿದ ತಕ್ಷಣ ಭಾಗ್ಯಳಿಗೆ ಆಶ್ಚರ್ಯ. ಅಷ್ಟು ದೊಡ್ಡ ಬಂಗಲೆ. ಕಾಂಪೌಂಡ್ ಒಳಗೆ ಎರಡು ಕಾರು. ಗೇಟ್ ತೆಗೆದು ಒಳಗೆ ಹೋದಾಗ ಆ ಮನೆಗೆ ಹೋಗದೆ ಪಕ್ಕದಲ್ಲಿ ಹೋಗಿ ಹಿಂದೆ ಇದ್ದ ಔಟ್ ಹೌಸ್ ಬಾಗಿಲು ತೆಗೆದಾಗ ಅಯ್ಯೋ ನಾನು ಏನೇನೋ ಊಹಿಸಿದ್ದೆ ‌.ಇವರು ಇಲ್ಲಿ ಬಾಡಿಗೆಗೆ ಇರೋರು ನನಗೆ ಏನು ಸಹಾಯ ಮಾಡ್ತಾರೆ ಅಂತ ಅಂದು ಕೊಳ್ಳುವಾಗ ಫ್ಲಾಸ್ಕ್ ನಲ್ಲಿದ್ದ ಕಾಫಿ ಬೆಳ್ಳಿ ಲೋಟಕ್ಕೆ ಹಾಕಿ ತಂದು ಕೊಟ್ಟು ಈಗ ಹೇಳು ಮಗಳೇ ಏನು ಸಹಾಯ ಬೇಕು.ಅದಕ್ಕೆ ಮೊದಲು ನೀನು ಯಾರು ಏನು ಮಾಡ್ತಾ ಇದ್ದೀಯೆ ಅಂದಾಗ ಭಾಗ್ಯ ಅವಳ ಬ್ಯಾಂಕ್ ಹೆಸರು ಹೇಳಿದ ತಕ್ಷಣ ಓಹ್ ನಮ್ಮ ರಾಜೀವ ನಿಮ್ಮ ಮ್ಯಾನೇಜರ್. ಹೇಳಮ್ಮ ಅಂದರು. ಅಮ್ಮ ನಿಮಗೆ ಅವರು ಗೊತ್ತಾ ಅಂದಳು. ಅವನಿಗೆ M.Com ವರೆಗೂ ಫೀಸ್ ಕೊಟ್ಟು ಓದಿಸಿದೋಳು ನಾನೇ ಇಲ್ಲದಿ ದ್ದರೆ ಆಗಲೇ ಬಾಂಬೆಗೆ ಯಾರ ಹಿಂದೆಯೋ ಓಡಿ ಹೋಗಕ್ಕೆ ನೋಡ್ತಿದ್ದ . ಆದರೂ ಒಳ್ಳೆಯವನು ಬುದ್ಧಿ ವಂತ. ಐದೇ ವರ್ಷದಲ್ಲಿ ಮ್ಯಾನೇಜರ್ ಆದ ನೋಡು ಅಂದರು. ಮಾತು ಮುಂದುವರೆಸಿ ಹೇಳಿದರು .ಅವನು ಹೋದವಾರ ನಮ್ಮ ಹತ್ತಿರದವರ ಒಂದು ಮದುವೆಗೆ ಬಂದಿದ್ದ. ಅಲ್ಲೂ ಬ್ಯಾಂಕ್ ವಿಷಯಾನೇ ಮಾತಾಡ್ತಾನೆ . ನಾನೇ ಬೈದೆ . ನಿನ್ನ ನೋಡಿದಾಗಿನಿಂದ ನನ್ನ ಮಗಳೇ ಏಕೋ ಜ್ಞಾಪಕಕ್ಕೆ ಬರ್ತಿದಾಳೆ .ಅವಳು ಆಸ್ಟ್ರೇ ಲಿಯಾಗೆ ಹೋಗಿ ಹತ್ತು ವರ್ಷ ಆಯ್ತು ಅಂದರು.ಇವರ ಬಗ್ಗೆ ಇದ್ದ ಅಭಿಪ್ರಾಯ ಮತ್ತೆ ಒಂದು ಕ್ಷಣಕ್ಕೆ ಬದಲಾಯ್ತು. ಅಮ್ಮಾ ಹಾಗಾದರೆ ನೀವು ಒಬ್ಬರೇ ಇದ್ದೀರಾ ಅಂದಾಗ .ಹೌದು ನಮ್ಮ ಮನೆಯವರು ಹೋಗಿ ಐದು ವರ್ಷಗಳಾಯ್ತು.

ಇನ್ನೂ ಇಬ್ಬರು ಮಕ್ಕಳು ವಿದೇಶದಲ್ಲೇ ಇದ್ದಾರೆ. ಈಗೆಲ್ಲಾ ಹೀಗೇ ತಾನೆ ಜೀವನ ಅಂದಾಗ ಅವರ ಕಣ್ಣಲ್ಲಿ ಹನಿ ನೀರು. ಸೀರೆಯ ಅಂಚಲ್ಲಿ ಒರೆಸಿಕೊಂಡು ನಮ್ಮ ತಂದೆ ಶ್ರೀ ರಂಗಪಟ್ಟಣ ದ ಹತ್ತಿರದ ಐದು ಹಳ್ಳಿಯ ಜೋಡಿದಾ ರ್ರು .ನೂರು ಎಕರೆ ಗದ್ದೆ. ಆಗಲೇ ಟೆನೆನ್ಸಿ ಆಕ್ಟ್ ನಲ್ಲಿ ಎಲ್ಲಾ ಹೋಯಿತು. ಈಗ ಈ ಬಂಗಲೆ ಮಾತ್ರ. ಅದು ಒಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೀನಿ ಅಂದಾಗ ಭಾಗ್ಯ ದ ಬಾಗಿಲು ತೆಗೆದ ಹಾಗಾಗಿ ಇವರೇ ನನಗೆ ಬೇಕಾಗಿತ್ತು .


ರಂಗನಾಥ ಸ್ವಾಮಿ ಇವರ ಹತ್ತಿರಾನೇ ನನ್ನನ್ನು ಕರೆದು ಕೊಂಡು ಬಂದು ಪವಾಡ ಮಾಡಿದ್ದಾನೆ ಅಂತ ಮನಸ್ಸಿನ ಲ್ಲೇ ಅವನಿಗೆ ಧನ್ಯವಾದ ಹೇಳಿದಳು.ಅಷ್ಟರಲ್ಲಿ ಬೆನ್ನು ತಟ್ಟಿ ಏಕಮ್ಮ ಏನೋ ಆಳವಾಗಿ ಯೋಚನೆ ಮಾಡ್ತಾ ಇರೋಹಾಗಿದೆ ಅಂದಾಗ ,ಭಾಗ್ಯ ಅಮ್ಮಾ ನನಗೆ ಏನು ಹೇಳ್ಬೇಕೋ ತಿಳೀತಿಲ್ಲ. ಇದೊಂದು ಪವಾಡ ಅಂದು ಕೊಳ್ತೀನಿ. ಮುಂದಿನವಾರ ನಿಮ್ಮನ್ನು ನೋಡಕ್ಕೆ ನಾನೇ ಬರಬೇಕಿತ್ತು. ಮ್ಯಾನೇಜರ್ ನಿಮ್ಮ ಹತ್ತಿರ ಒಂದು ಕೋಟಿ ಗೆ ಡಿಪಾಸಿಟ್ ಮಾಡಿಸೋ ಭಾರ ನನ್ನ ಮೇಲೆ ಹಾಕಿದಾರೆ. ಅದರಲ್ಲಿ ನನ್ನ ಸ್ವಾರ್ಥ ವೂ ಇದೆ .ಈ ಡಿಪಾಸಿಟ್ ಸಿಗದೇ ಹೋದರೆ ನನ್ನ ಕೆಲಸಾ ಹೋದರೂ ಹೋಗಬಹುದು. ಇದು ಅವರೇ ಹೇಳಿದ್ದು ಅಂದಾ ಗ .ಅವನ ನಂಬರ್ ಗೆ ಫೋನ್ ಮಾಡಿಕೊಡು ಅಂತ ಹೇಳಿ ಅವರೇ ಏ ರಾಜೀವ ಏನೋ ಹೆಣ್ಣು ಮಕ್ಕಳನ್ನ ಹೀಗೆ ಹೆದರಿಸಿ ಬೆದರಿಸಿ ಕೆಲಸ ಮಾಡಿಸ್ತೀಯಾ.ಕೆಲಸ ಕಳ್ಕೊತೀಯೆ ಅಂತ ಹೆದರಿಸ್ತೀಯಂತೆ. ಏನೋ ಇದೆಲ್ಲಾ ಭಾಗ್ಯ ನನ್ನ ಮಗಳು ಇದ್ದ ಹಾಗೆ ಕಣೋ. ರಾಜೀವನಿಗೆ ತಲೆ ಬುಡ ಅರ್ಥ ವಾಗಲಿಲ್ಲ. ಹಾಗೇ ಭಾಗ್ಯನಿಗೆ ಅವರ ಅಡ್ರೆಸ್ ಹೇಗೆ ಸಿಕ್ತು ಅಂತ ಕುತೂಹಲ ಬೇರೆ.ಭಾಗ್ಯಳಿಗೆ  ಈಗ ನಿಜವಾಗಿ ಹೆದರಿಕೆ ಆಯ್ತು. ನಾಳೆ ಆಫೀಸ್ನಲ್ಲಿ ತನಗೆ ಮಂಗಳಾರತಿ ಅಂತ ಅಂದ್ಕೊಂಡ್ಲು . ರಾಜೀವ ಡಿಪಾಸಿಟ್ ಬಗ್ಗೆ ನಿನ್ನ ಹತ್ತಿರಾನೇ ಮಾತಾಡಬೇಕು ಈಗಲೇ ಇಲ್ಲಿಗೆ ಬಾ ಅಂತ ಹೇಳಿ ‌ಫೋನ್ ವಾಪಸ್ ಕೊಟ್ಟರು. ಅಮ್ಮ ಅವರು ಇಲ್ಲಿಗೆ ಬರ್ತಾರಾ ಅಂತ ಕೇಳಿದಳು. ಹೌದು ಏಕೆ ಭಯಾನಾ ನೀನೇಕೆ ಹೆದರ ಬೇಕು ಬರಲಿ ನಾನು ನೋಡ್ಕೋತೀನಿ ಅಂದರು. ಅರ್ಧ ಗಂಟೆ ಯಲ್ಲಿ ಬಂದ.

ಕಾಫಿ ಕೊಟ್ಟು ನಡೆದ ಎಲ್ಲಾ ವಿಷಯ ತಿಳಿಸಿದಾಗ. ನೋಡಿ ಆ ರಂಗನಾಥನೇ ಹೇಗೆ ನಿಮಗೆ ಸಹಾಯ ಮಾಡಿದ ಅಂದ ಭಾಗ್ಯಳ ತಿರುಗಿ ರಾಜೀವ್.

 

ಒಂದು ವರ್ಷ ದ ನಂತರ ರಾಜೀವ್ ಒಂದು ದಿನ ನೀವು ಕೆಲಸಕ್ಕೆ ರಿಸೈನ್ ಮಾಡಬೇಕಾಗುತ್ತೆ ಅಂದಾಗ ಭಾಗ್ಯ ಹೆದರಿ ಏಕೆ ಸಾರ್ ನಾನು ಮಾಡಿರೋ ತಪ್ಪಾದರೂ ಏನು ಏಕೆ ಇಂಥ ಶಿಕ್ಷೆ ಅಂದಾಗ ‌,ನಕ್ಕು ನಾವಿಬ್ಬರೂ ಒಂದೇ ಕಡೆ 

ಕೆಲಸ ಮಾಡೋದು ನನಗೆ ಇಷ್ಟ ಆಗಲ್ಲ ಅದಕ್ಕೆ ಅಂದಾ ಗ.ಅವಳಿಗೆ ಅರ್ಥ ಆಗದೇ ರಾಜೀವನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದಳು. ಈದಿನ ಎಂದೂ ಇಲ್ಲದ ಆ ಕಣ್ಣಲ್ಲಿ ಸೆಳೆತ .ಏನಂತ ಅರ್ಥ ಆಗ್ತಿಲ್ಲ. ಹೆದರ ಬೇಡ ಇವತ್ತಿನಿಂದ ನಿನ್ನನ್ನ ಹೋಗಿ ಬನ್ನಿ ಅಂತ ಕರೆಯಲ್ಲ. ಭಾನುವಾರ ನಿನ್ನನ್ನು ಕೇಳಕ್ಕೆ ನನ್ನ ಅಮ್ಮ ನ ಜೊತೆಗೆ ನಿಮ್ಮ ಮನೇಗೆ ಬರ್ತೀನಿ. ಇದಕ್ಕೆಲ್ಲಾ ಕಾರಣ ಆದಿನ ಡಿಪಾಸಿಟ್ ಮಾಡಿ ದ ಆ ಹೆಂಗಸು ಅಂದಾಗ ಭಾಗ್ಯ ನಾಚಿಕೆಯಿಂದ ಓಡಿ ಹೋದಳು. ಅವಳ ಕನಸುಗಳೆಲ್ಲಾ ಒಂದೊಂದಾಗಿ ಗರಿಗಳಂತೆ ಬಿಚ್ಚಿಕೊಂಡು. ಆಕಾಶದಲ್ಲಿ ಹಾರಾಡೋ ಹಕ್ಕಿಯಂತಾದಳು .



Rate this content
Log in

Similar kannada story from Classics