STORYMIRROR

Umesh Naik

Abstract Drama Others

3  

Umesh Naik

Abstract Drama Others

ಅವಳೂಂದು ಮಾಯೆ !

ಅವಳೂಂದು ಮಾಯೆ !

2 mins
157

ಭಾಗ ೧.

ಸೂಚನೆ. ಈ ಕಥೆ ನನ್ನ ವೈಯಕ್ತಿಕ ಜೀವನದ ಮುಖ್ಯವಾದ ಕಥೆ ಯಾಗದೆ. ಇದರಲ್ಲಿ ಬರುವ ಘಟನೆ ಗಳು ನೈಜಜ ವಾಗಿದ್ದು, ಪಾತ್ರಗಳ ಹೆಸರುಗಳು ಬದಲಾವಣೆ ಮಾಡಲಾಗಿದೆ. ಮತ್ತು ಕನ್ನಡ ಬರಹದಲ್ಲಿ ಏನಾದರೂ ತಪ್ಪು ಕಂಡಲ್ಲಿ ಕ್ಷಮೆ ಇರಲಿ.

 ಕಥೆ ಪ್ರಾರಂಭ....

ಈ ಕಥೆ ಪ್ರಾರಂಭ 2005ರಲ್ಲಿ ದಿನಾಂಕ February 22 ಅವತ್ತು ರಂಗ ಪಂಚಮಿಯಾಗಿತು. ಅವತ್ತು ನಮ್ಮ ಸಂಬಂಧಿಕರ ಮದುವೆ , ಆವಾಗ ನನ್ನಗೆ ಚಿಕ್ಕ ವಯಸ್ಸು ಸುಮಾರು 9 ವಷ್ರ ಇರಬೇಕು , ನಮ್ಮ ಅಮ್ಮ ಒಂದು ದಿನ ಮುಂಚನೆ ಆ ಮದುವೆ ಲಿಬನ ಕರೆಯುವುದಕ್ಕೆ ಹೋಗಿದ್ರು, ಮದುವೆ ಅಂದ್ರೆ ನಮ್ಮ ಓಣಿಯಲ್ಲಿ ತುಂಬಾ ಸಡಗರ ಸಂಭ್ರಮದಿಂದ ಮಾಡುತ್ತಾರೆ ಇದು ಹಾಗೆ ಮಾಡುತ್ತಲೇ ಇದ್ದರು ಹಿಂಗ ಇರುವಾಗ ಅವತ್ತು ರಂಗ ಪಂಚಮಿಯಾಗಿರುವರಿಂದ , ಎಲ್ಲಾ ಊರಲ್ಲಿ ಮತ್ತು ರಸ್ತೆಗಳ ಬಣ್ಣ ಆಡುತ್ತಿದ್ದರು ನಾವು ಮಾತ್ರ ಹೂಳಿ ಹುಣ್ಣಿಮೆ ದಿನದಂದು ಆಡಿ ರಂಗ ಪಂಚಮದಂದು ಮದುವೆ ಮಾಡುತ್ತಿದ್ದವು. ಅವತ್ತು ಸುಮಾರು 11.30 ಇರುಬಹುದು 

ಮದುವೆ ಲಿಬನ ಬಂತು ಅಂತ ನಾನು ನಮ್ಮ ಅಮ್ಮ ನ ನೋಡಬೇಕು ಅಂತ ಹೋದೆ , ಆದರೆ ಅಮ್ಮ ಕಾಣಲಿಲ್ಲ ಬದಲಿಗೆ ಮದುವೆ ಹೆಣ್ಣು ಕಂಡಿದ್ದು, ಅವಳನ್ನೇ ನೋಡುತ್ತಾ ನಿಂತುಬಿಟ್ಟದೆ , ಅವಳ ಹೆಸರು ಹೇಮಾ( ಹೆಸರು ಬದಲಾವಣೆ ಮಾಡಿದ್ದೇನೆ )ಅವಳೇ ಕಥೆಗೆ ಸ್ಫೂರ್ತಿ ಅವಳು ಸುಮಾರು 15 ವಷ್ರ ಇರಬೇಕು ಇನ್ನೂ ಚಿಕ್ಕ ವಯಸ್ಸು ಅಲ್ಲವಾ ತುಂಬಾ ಚೆನ್ನಾಗಿ ಕಾಣಿಸುತ್ತಾಳೆ ಅಂತ ನೋಡ್ತಾ ಇದೆ. ಅಂದಿನಿಂದ ಇಂದಿನವರೆಗೆ ಅವಳನ್ನೇ ನೋಡ್ತಾ ಇರ್ತೇನೆ.

 ಮದುವೆ ಮುಂಚೆ ಹುಡುಗನ ಬಗ್ಗೆ ಕೆಟ್ಟದಾಗಿ ಅವರು ಸಂಬಂಧಿಕರು ಆದಂತ ( ಹುಡುಗನ ದೂಡ್ಡ ಅಪ್ಪನ ಮಗನ ಹೆಂಡತಿ ಅಂದೆರೆ ಅತ್ತಿಗೆ ಅಥವಾ ವೈನಿ) ಲೀಲಾವರು ಹೇಮಾ ಮನೆಯವರಿಗೇ ಹೇಳಿದರಂತೆ, ಹುಡುಗ ಸರಿಯಿಲ್ಲವೆಂದು ಮತ್ತು ಹುಡುಗ ವಿಪರೀತ ಕುಡಿಯುತ್ತಾನೇ , ಎಂದು ಹೇಳಿದರಂತೆ. ಆ ವಿಷಯ ಗೊತ್ತಾ ಇದ್ದರು ಕೊಡಾ ಮದುವೆ ಆಯಿತು ಹೇಗೆ ಅಂತ ಮುಂದೆ ಕಥೆಯಲ್ಲಿ ಹೇಳುತ್ತೇನೆ.

 ಮದುವೆ ಮುಂಚೆ....

  ಹುಡುಗನ ತಾಯಿ ಮತ್ತು ಲೀಲಾ ಗೆ ತುಂಬಾ ಜಗಳವಾಗಿತ್ತು

ಅಂದಿನಿಂದ ಸರಿಯಾಗಿ ಅವರು ಅವರು ಜೊತೆ ಮಾತನಾಡುತ್ತಲಿರೀಲ್ಲ. ಲೀಲಾ ಅವರ ಆಸೆ ಏನು ಅಂದರೆ ಅವಳಿಗೆ ಇಬ್ಬರು ತಂಗಿಯರು ಅದರಲ್ಲಿ ಒಬ್ಬರನ್ನು ಹೇಮಾ ಗಂಡನಿಗೆ ಮದುವೆ ಮಾಡಬೇಕು ಅಂತ, ಅದಕ್ಕೆ ಮದುವೆ ನಿಲ್ಲಿಸಲು ಈ ತರಹ ಹೇಳಿದರಂತೆ .

    ಮದುವೆ ಆದ ನಂತರ ಎಲ್ಲವೂ ಚೆನ್ನಾಗಿತ್ತು , ಆದರೆ ಹೇಮಾ ಮದುವೆಗೆ ಮುಂಚನೆ ಒಬ್ಬ ಹುಡುಗನ ಇಷ್ಟ ಪಟ್ಟಿದ್ದರಂತೆ,ಆ ಹುಡುಗ ಬೇರೆ ಯಾರೋ ಅಲ್ಲ ಅದು ಲೀಲಾ ಅವರ ಸಂಬಂಧಿ , ಆಮೇಲೆ ಗೊತ್ತಾಗೀತು ಅಂದ್ರೆ ಹೇಮಾ ಆ ಹುಡುಗ ತುಂಬಾ ಇಷ್ಟ ಪಟ್ಟಿದಳು ಅವನ ಜೊತೆ ಅಲ್ಲಿ ತಿರುಗುತ್ತಯದರಂತೆ ಅದಕ್ಕೆ ಅವರ ಮನೆಯವರು ಅವಳು ಶಾಲೆ ಬಿಡಿಸಿ ಮದುವೆ ಮಾಡಿದರಂತೆ.

 ಆದರೂ ಅವಳು ಮದುವೆಯಾಗಿ ಗಂಡು ಇದ್ದರೂ ಕೂಡ ಆ ಹುಡುಗ ಜೊತೆ ಸಂಬಂಧ ಹಾಗೆ ಇಟ್ಟು ಕೊಂಡಿದಳು .ಅವಾಗ ಅವಾಗ ಭೇಟಿಯಾಗತಿದ್ದಳು . ಮನೆಯಲ್ಲಿ ಇರುವಾಗ ಪೋನ್ ಮಾಡುವುದು ಮತ್ತೇ msg ಮಾಡುವುದು ಇದನ್ನೇ ಎಲ್ಲಾ ಮಾಡುತ್ತಿದ್ದಳು. ಇದೆಲ್ಲವೂ ಒಮ್ಮೆ ಮನೆಯಲ್ಲಿ ಅವರ ಅತ್ತೆ ಮಾವನಿಗೆ ಓಣಿಯಲ್ಲಿ ಇರುವ ಒಬ್ಬ ವ್ಯಕ್ತಿಯಿಂದ ಗೊತ್ತಾಗಿತ್ತು ಅವಗಾ ಅವರು ಮನೆಯಲ್ಲಿ ತುಂಬಾ ಜಗಳವಾಗಿತ್ತು .ಆದರೆ ಅದನ್ನು ಗೊತ್ತಿಲ್ಲ ಅವಳು ಗಂಡನ ಮಾತ್ರ ಅವಳು ಹೇಳಿದಾಂಗೆ ಕೇಳಬೇಕು .ಆ ತರಹ ಇಟ್ಟುಕೊಂಡಿದಳು.

  ಆ ಜಗಳ ಆದ್ದರಿಂದ ಕೆಲವು ದಿನದ ಮಟ್ಟಿಗೆ ಆ ಹುಡುಗ ಜೊತೆ ಮಾತನಾಡುವುದು ಅಥವಾ msg ಮಾಡುವುದು ನಿಲ್ಲಿಸಿದಳು, ಹೀಗೆ ಇರುವಾಗ ಅದ್ಯಾವುದೋ ಕಾರಣಕ್ಕೆ ಅವಳು ಅವನು ಸಂಬಂಧ ದೂರ ಮಾಡಿದಳು . ಆನಂತರ ಅವಳು ಒಂದು ಮಗುವಿಗೆ ಜನ್ಮ ನೀಡುತ್ತಾಳೆ. 

ಹೇಮಾಗೆ ಮತ್ತು ಅವಳ್ ಗಂಡನಿಗೆ ತುಂಬಾ ಜಗಳವಾಗಿತ್ತು ಇರುತ್ತಿತ್ತು ಅವಳ್ ಗಂಡ ವಿಪರೀತ ಕುಡಿಯುತ್ತಿದ್ದ ಬಂದ ಸಂಬಳವನ್ನು ಮನೆಯಲ್ಲಿ ಹೇಮಾ ಮತ್ತು ಅವರ ಅತ್ತೆ ಮಾವನಗೆ ಕೊಡುತ್ತಿರಲಿಲ್ಲ ಹೀಗಾಗಿ ಅವರು ಮಧ್ಯ ಈ ಕಾರಣಕ್ಕೆ ಜಗಳವಾಗತ ಇರುತ್ತಿತ್ತು.



Rate this content
Log in

Similar kannada story from Abstract