Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

Jyothi Baliga

Inspirational

4.0  

Jyothi Baliga

Inspirational

ಅಡುಗೆ ಅರಮನೆ

ಅಡುಗೆ ಅರಮನೆ

1 min
11.2K


ಮದುವೆಯಾದ ಹೊಸತರಲ್ಲೇ ಅಪಘಾತವೊಂದರಲ್ಲಿ ಗಂಡನ ಕಳೆದುಕೊಂಡ ಸುಮ ತವರು ಸೇರಿದ್ದಳು.

ಎರಡನೆಯ ಮದುವೆಗಾಗಿ ಬಂದ ವರ ತನಗಿಂತ ಹದಿನೈದು ವರ್ಷ ದೊಡ್ಡವನೆಂದು ತಿಳಿದರೂ ತುಟಿಬಿಚ್ಚದೇ ಅವನು ಕಟ್ಟಿದ ತಾಳಿಗೆ ಕೊರಳೊಡ್ಡಿದ್ದಳು. ದೈವ ಇಚ್ಛೆಯೋ? ಸುಮಳಾ ಕೆಟ್ಟ ಗ್ರಹಚಾರದ ಫಲವೋ‌ ಎರಡನೆಯ ವರನೂ‌ ಸಾವನ್ನಪ್ಪಿದ. ಅನಿಷ್ಟ ಜಾತಕದವಳೆಂದು ಅಣ್ಣ ಅತ್ತಿಗೆ ತವರಿಗೆ ಕರೆಯದೇ ಇದ್ದಾಗ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ ಬೆಂಕಿ ಹಚ್ಚಿ ಸಾಯಲು ಹೊರಟವಳಿಗೆ ಅಡುಗೆ ಮನೆಯಲ್ಲಿದ್ದ ಮಸಾಲೆ ಪದಾರ್ಥಗಳ ಡಬ್ಬಗಳು ಅಣಕಿಸಿದಂತಾಗಿ ತನ್ನ ನಿರ್ಧಾರವನ್ನು ಬದಲಿಸಿದಳು.ಇಷ್ಟು ವರ್ಷದ ಅಡುಗೆಯ ಅನುಭವವನ್ನು ಬಳಸಿ ಸಣ್ಣ ಮಟ್ಟದಲ್ಲಿ ತೆರೆದ

ಮಸಾಲೆ ಪುಡಿಗಳ ಉತ್ಪನ್ನ ದೇಶದ್ಯಾದಂತ ಮಾರಾಟವಾಗುವುದನ್ನು ನೋಡಿ ಆನಂದಭಾಷ್ಪ ಸುರಿಸಿದಳು. 'ಅನಿಷ್ಟ' ಎಂದು ದೂರ ತಳ್ಳಿದವರ ಎದುರಿನಲ್ಲಿ ರಾಣಿಯ ಹಾಗೆ ಮೆರೆದಳು.


Rate this content
Log in

More kannada story from Jyothi Baliga

Similar kannada story from Inspirational