STORYMIRROR

Spandana n

Abstract Horror Thriller

2.4  

Spandana n

Abstract Horror Thriller

ಆತ್ಮದ ಪ್ರೀತಿ

ಆತ್ಮದ ಪ್ರೀತಿ

2 mins
39

ನನ್ನ ಜೀವನದಲ್ಲಿ ನಡೆದಂತ ಘಟನೆ ಇದು. ನಾನು ಮತ್ತು ನನ್ನ ಅಕ್ಕಂದಿರು ಹಾಸ್ಟೆಲ್ ನಲ್ಲಿ ಓದುತ್ತಿದ್ದೆವು. ನಾನು ಅವಾಗ 7ನೇ ತರಗತಿಯಲ್ಲಿ ಓದುತ್ತಿದ್ದೆ. ನಮಗೆ ಅವಾಗ ಅರ್ಚನಾ ಮತ್ತು ಅನನ್ಯ ಎನ್ನುವರು ಸ್ನೇಹಿತರು ಆದರು. ಅಕ್ಕ ಅರ್ಚನಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದರು. ತಂಗಿ ಅನನ್ಯ ತುಂಬಾ ಬಾಯ್ ಬಡಕಿ ಆಗಿದ್ದಳು. ಹೀಗೆ ಒಂದು ದಿನ ಎಲ್ಲರೂ ಊಟಕ್ಕೆ ಹೋದೆವು ಆಗ ಗಂಟೆ 7:00 ಆಗಿತ್ತು. ಅವತ್ತು ನಮಗೆ ಊಟದ ಜೊತೆಯಲ್ಲಿ ಮೊಟ್ಟೆ ಕೊಡುತ್ತಿದ್ದರು. ಎಲ್ಲರೂ ಮೊಟ್ಟೆ ತಿನ್ನುವಾಗ ಅನನ್ಯ ತನ್ನ ಮೊಟ್ಟೆಯನ್ನು ತಿಂದು ಇನ್ನೊಂದು ಮೊಟ್ಟೆ ಬೇಕು ಎಂದು ಕೇಳಿದಳು ಆಗ ಅಕ್ಕ ಅರ್ಚನಾ ತನ್ನ ಮೊಟ್ಟೆಯನ್ನು ಕೊಟ್ಟಳು ನಂತರ ಆ ಮೊಟ್ಟೆಯನ್ನು ತಿಂದು ಮತ್ತೆ ಇನ್ನೊಂದು ಮೊಟ್ಟೆಯನ್ನು ಕೆಳ ತೊಡಗಿದಳು ಆಗ ನಮ್ಮಲ್ಲಿದ್ದ ಸ್ವಲ್ಪ ಮೊಟ್ಟೆಯನ್ನು ಅವಳಿಗೆ ಕೊಟ್ಟೆವು ಅದನ್ನು ತಿಂದು ಕೂಡ ಇನ್ನು ಮೊಟ್ಟೆ ಬೇಕು ಎಂದು ಅರಚ ತೊಡಗಿದಳು. ಆಗ ನಾವು ಅವಳಿಗೆ ತುಂಬಾ ಹೊಟ್ಟೆ ಹಸಿದಿರಬೇಕು ಎಂದುಕೊಂಡೆವು ಅವಳು ಮೂರು ಸಾರಿ ಊಟ ಹಾಕಿಕೊಂಡಿದ್ದಳು. ಇದನ್ನು ನೋಡಿ ನಮಗೆ ತುಂಬಾ ಆಶ್ಚರ್ಯವಾಯಿತು. ನಂತರ ಎಲ್ಲರೂ ಊಟ ಮುಗಿದ ಮೇಲೆ ತಮ್ಮ ತಮ್ಮ ರೂಮಿಗೆ ಹೋದೆವು. ಆಗ ಇದ್ದಕ್ಕಿದ್ದಾಗೆ ಅನನ್ಯ ತುಂಬಾ ಜೋರಾಗಿ ಅಳೆತೊಡಗಿದಳು. ನಂತರ ತನ್ನ ಅಕ್ಕ ಅರ್ಜನ ಹಾಕಿಕೊಂಡಿದ್ದ ಖಡ್ಗವನ್ನು ಕಿತ್ತು ಹಾಕಿದಳು. ಇದನ್ನು ನೋಡಿ ನಮಗೆ ತುಂಬಾ ಭಯವಾಯಿತು. ನಂತರ ನಮ್ಮ ಬಳಿ ಯೇಸುವಿನ ಹೋಲಿ ವಾಟರ್ ಇತ್ತು. ಅದನ್ನು ನಾವು ಅವಳ ಮೇಲೆ ಎರಚಿದೆವು. ಅದನ್ನು ಹಾಕಿದ ಕೂಡಲೇ ಅವಳು ಜೋರಾಗಿ ಕಿರುಚಿದಳು. ಇದನ್ನು ನೋಡಿದ ತಕ್ಷಣ ನಮಗೆ ತುಂಬಾ ಭಯವಾಗಿ ರೂಮಿನಿಂದ ಹೊರಗೆ ಹೋದೆವು. ನಂತರ ಅಡುಗೆ ಕೆಲಸ ಮಾಡುತ್ತಿದ್ದ ಆಂಟಿ ಏನಾಯಿತು ಎಂದು ನಮ್ಮನ್ನು ಕೇಳಿದರು. ಆಗ ನಾವು ನಡೆದಿದ್ದ ವಿಷಯವನ್ನೆಲ್ಲ ಆಂಟಿಗೆ ಹೇಳಿದ್ದೆವು. ನಂತರ ಅಡುಗೆ ಆಂಟಿ ಅವಳನ್ನು ರೂಮಿನಿಂದ ಹೊರಗೆ ಎಳೆದುಕೊಂಡು ಬಂದರು. ಅವಳಿಗೆ ಜೋರಾಗಿ ಹೊಡೆದರು. ನಂತರ ಅವಳಿಗೆ ಕೇಳಿದರು ನೀನುಯಾರು ಯಾಕೆ ಇವಳ ಮೇಲೆ ಬಂದಿದ್ದೀಯ ಹೇಳು ಅಂತ. ಆಗ ಆಕೆ ಹೇಳಿದಳು ನಾನು ಅರ್ಚನಾಳ ಹುಡುಗ ನಾನು ಅವಳನ್ನು ನನ್ನ ಜೊತೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಕಿರಿಚಿಕೊಂಡು ಹೇಳಿತು. ಆಗ ಅಡಿಕೆ ಆಂಟಿ ಅವಳು ಯಾಕೆ ನಿನಗೆ ಬೇಕು ಅವಳಿಗೆ ಮತ್ತೆ ಇತರ ಕಾಟ ಕೊಡಬೇಡ ಅಂತ ಹೇಳಿದರು. ಆಗ ಅದು ನಾನು ಅರ್ಚನಾಳನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೇನೆ ನಾನು ಅವಳನ್ನು ಮದುವೆ ಮಾಡಿಕೊಳ್ಳಬೇಕು ಬಾಸೆ ನನಗೆ ಇತ್ತು. ಆದರೆ ನನಗೆ ಕಾರು ಅಪಘಾತವಾಗಿತ್ತು ಆಗ ನಾನು ಸತ್ತುಹೋದೆ. ನನಗೆ ಅವಳು ಬೇಕು ಇವಾಗ ಅಳುತ್ತಾ ಹೇಳಿತ್ತು. ನಂತರ ಅಡುಗೆ ಆಂಟಿ ಅವಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅವಳ ಮೇಲೆ ಇದ್ದ ದೆವ್ವವನ್ನು ಬಿಡಿಸಿದರು. ನಂತರ ಅವಳು ಮೊದಲಿನಂತೆ ಆಗಿದ್ದಳು. ಆಗ ನಮಗೆ ಒಂದು ವಿಷಯ ಗೊತ್ತಾಗಿತ್ತು ಅದು ಏನೆಂದರೆ ಅರ್ಚನಾಳ ಹುಡುಗನ ಹೆಸರು ಸಂದೇಶ್ ಅಂತ. ಅವರಿಬ್ಬರೂ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು ಆದರೆ ಅವರ ಹುಡುಗ ಒಂದು ಸಣ್ಣ ಅಪಘಾತದಲ್ಲಿ ಸತ್ತು ಹೋದರು. ಇವಾಗ ಅರ್ಚನಾ ಮತ್ತು ಅನನ್ಯ ಮೊದಲಿನಂತೆ ಇದ್ದಾರೆ. ಯಾವುದೇ ದೆವ್ವದ ಕಾಟ ಇವಾಗ ಅವರಿಗಿಲ್ಲ.ಇದು ನನ್ನ ಜೀವನದಲ್ಲಿ ನಡೆದಂತಹ ಘಟನೆ 



Rate this content
Log in

Similar kannada story from Abstract