Prerana kulkarni

Abstract Classics Children

2  

Prerana kulkarni

Abstract Classics Children

ಆ ಮುಸ್ಸಂಜೆ....

ಆ ಮುಸ್ಸಂಜೆ....

1 min
164


ರೋಡಿನ ಆಚೆಯ ಮರದ ಕೆಳಗೆ ಆಡುತ್ತಿದ್ದ ಓರ್ವ ಮುದ್ದು ಹುಡುಗಿ 

" ಈ ಜಗತ್ತಿನಲ್ಲಿರುವ ನಾವೆಲ್ಲರೂ ಕೂಡಾ ದೇವತೆಗಳೇ"

ಮರದಲ್ಲಿದ್ದ ಹಕ್ಕಿಯ ಗೂಡಿನಿಂದ ಕೇಳಿಬರುತ್ತಿದ್ದ ಚಿಲಿಪಿಲಿ ಸದ್ದನ್ನು ತನ್ಮಿಯತೆಯಿಂದ 

ಕೇಳುತ್ತಾ ನಿಂತಿದ್ದ ಅವಳು ಮುಗ್ಧತೆಯಿಂದ ತನ್ನಷ್ಟಕ್ಕೇ ತಾನೇ ಹೇಳಿ ನಕ್ಕಿದ್ದಳು...


ಆದರೆ ಬಹಳ ಹೊತ್ತಿನಿಂದ ಕೆಂಗಣ್ಣು ಬೀರುತ್ತಾ ಅವಳ ಕಡೆಗೆ ನೋಡುತ

ಅಲ್ಲಿಯೇ ನಿಂತಿದ್ದ ಓರ್ವ ವ್ಯಕ್ತಿ " ಎಲ್ಲರೂ ಅಲ್ಲ...ಕೆಲವು ಕೆಡಕು ಮನಸ್ಸಿನ

ಕೆಟ್ಟ ದೆವ್ವಗಳು ಇವೆ ಇಲ್ಲಿ..." ಎನ್ನುತ್ತಾ ಗಹಗಹಿಸಿ ನಕ್ಕುಬಿಟ್ಟ.


ಆದರೂ ಆ ಹುಡುಗಿ ಮತ್ತೆ ಅದೇ ಮುಗ್ಧತೆಯಿಂದ

"ಹಾಗಾದರೆ ನೀನು ದೇವತೆಯೋ!?? ಕೆಟ್ಟ ಮನಸ್ಸಿನ ದೆವ್ವನೋ.!??

ಅವನನ್ನೇ ನೋಡುತ್ತಾ ಪ್ರಶ್ನೆ ಮಾಡಿದ್ದಳು...


ಅವಳ ಪ್ರಶ್ನೆಗೆ ಅವನ ಹಣೆಯ ಬೆವರಿನ ಹನಿಗಳ ಸಾಲುಗಳು ಕಾಣಿಸಿಕೊಂಡವು...

ಅವಳಿಗೆ ಏನೂ ಉತ್ತರ ಕೊಡಬೇಕು ಅಂತ ಗಲಿಬಿಲಿಯಾಯ್ತು ಅವನಿಗೆ...


 " ಈ ಹುಡುಗಿ,ಮುಸ್ಸಂಜೆ ಯಾಗಿದೆ ಈಗ. ಬೇಗ ಮನೆಗೆ ಹೋಗು ಅಮ್ಮ ಕಾಯುತ್ತಿರಬಹುದು "

ಎಂದಷ್ಟೇ ನುಡಿದು ಅಲ್ಲಿಂದ ಬಿರಬಿರನೆ ಹೊರಟು ಹೋದ.



Rate this content
Log in

Similar kannada story from Abstract