STORYMIRROR

Harish T H

Inspirational Others

4  

Harish T H

Inspirational Others

ಯಾವುದೂ ಶಾಶ್ವತವಲ್ಲ

ಯಾವುದೂ ಶಾಶ್ವತವಲ್ಲ

1 min
39

ನೀ ಪಡೆದ ಜನುಮ ಶಾಶ್ವತವಲ್ಲ.

ನೀ ಹೆದರೋ ಮರಣ ಶಾಶ್ವತವಲ್ಲ.

ಇವೆರಡರ ನಡುವಿರೋ ಬದುಕಿನ ಅನುಭವವೇ ಶಾಶ್ವತ.


ನಿನ್ನ ಸುಖ-ದುಃಖಗಳು ಶಾಶ್ವತವಲ್ಲ.

ನಿನ್ನ ನೋವು-ನಲಿವು ಶಾಶ್ವತವಲ್ಲ.

ಇದೆಲ್ಲದರಿಂದ ಕಲಿತ ಜೀವನದ ಪಾಠಗಳೇ ಶಾಶ್ವತ.


ನೀ ದುಡಿದ ಹಣವು ಶಾಶ್ವತವಲ್ಲ.

ನೀ ಸುಖಿಸುವ ಅಧಿಕಾರ ಶಾಶ್ವತವಲ್ಲ.

ಇವೆರಡರ ಹಿಂದಿರೋ ದಾನದ ಗುಣಗಳೇ ಶಾಶ್ವತ.


ನಿನ್ನ ಬಂಧು-ಬಳಗ ಶಾಶ್ವತವಲ್ಲ.

ನಿನ್ನ ಸ್ನೇಹ-ಪ್ರೀತಿ ಶಾಶ್ವತವಲ್ಲ.

ಇದೆಲ್ಲದರಿಂದ ದೊರೆತ ಮಧುರ ಕ್ಷಣಗಳೇ ಶಾಶ್ವತ.


ನೀ ಮಾಡುವ ಚಿಂತೆ ಶಾಶ್ವತವಲ್ಲ.

ನೀ ನಡುಗುವ ಭಯ ಶಾಶ್ವತವಲ್ಲ.

ಇವೆರಡರ ಒಳಗಿರೋ ಧೈರ್ಯದ ಮೂಲವೇ ಶಾಶ್ವತ.


ನಿನ್ನ ದೇಹ-ಪ್ರಾಣ ಶಾಶ್ವತವಲ್ಲ.

ನಿನ್ನ ರೂಪ-ಸೌಂದರ್ಯ ಶಾಶ್ವತವಲ್ಲ.

ಇದೆಲ್ಲದರಿಂದ ಅರಿತ ಆತ್ಮದ ಪರಿಶುದ್ಧತೆಯೇ ಶಾಶ್ವತ.


ಇಲ್ಲಿ ಯಾವುದೂ ಶಾಶ್ವತವಲ್ಲ. ಆದರೆ, 

ನೀ ಮಾಡಿದ ಒಳ್ಳೆಯ ಕಾರ್ಯಗಳು ಶಾಶ್ವತವಾಗುತ್ತದೆ.

ಅದುವೆ ನಿನ್ನನ್ನು ಸತ್ತ ಮೇಲೂ ಶಾಶ್ವತವಾಗಿ ಉಳಿಸುತ್ತದೆ.

    


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational