ಯಾವ ಹಾಡು ಹಾಡಲಿ?
ಯಾವ ಹಾಡು ಹಾಡಲಿ?
ಯಾವ ಧಾಟಿಯ ರಾಗದ
ಯಾವ ಹಾಡನು ಹಾಡಲಿ
ಯಾವ ಸಮಯದೇ ಹಾಡುತ ನಿನ್ನ ಪ್ರೀತಿಯ ಗೆಲ್ಲಲಿ
ಹಾಡಿ ಯಾವದೋ ನಡುವಿನ
ಕಾಡು ಹೂವನು ಅರಳಿಸಿ
ಮುಡಿಗೆ ಏರಿಸ ಬಯಸಿದೆ ಬದುಕಿನರ್ಥವ ಕಲ್ಪಿಸಿ
ಭ್ರಮಿಪ ಮನಸ್ಸಿನ ಕುದುರೆಯ
ಸಮಯ ಸಮಯದೇ ಪಳಗಿಸಿ
ನ್ಯಾಯದಾ ಹೆದ್ದಾರಿಯ ಬಳಸೆ ತೋರಿದೆ ಪಯಣದೇ
ಚಲಿಪ ಬಂಡಿಯ ಚಕ್ರವ
ಸೂಕ್ತ ದಿಸೆಯಲಿ ತಿರುಗಿಸಿ
ಬಾಳಿನಾ ಆ ಧ್ಯೇಯವ ನೀನೇ ತೋರಿಸಿ ಸಲಹಿದೆ
ನನ್ನ ದೇಹವೇ ನಿನ್ನದು
ನಿನ್ನದೇ ಆ ಮಿಡಿತವೂ
ನಿನ್ನ ಋಣವನು ಭರಿಸಲು ನಾ ಯಾವ ಕಾರ್ಯವ ಗಯ್ಯುಲೀ