ತಾಯಿ
ತಾಯಿ
ಅಕ್ಷರವ ತಿದ್ದಿಹಳು ಅಕ್ಕರೆಯ ತೋರಿಹಳು
ಆಸರೆಯಾಗಿ ನಿಂತು ಬದುಕು ನಡೆಸಿಹಳು
ಇಬ್ಬನಿಯ ಹನಿ ಹಾಗೇ ತಬ್ಬಿರಲು ತಂಪಾಗಿ
ಈಡೇರುಸುವಳು ಮನದೆಲ್ಲ ಸಿಹಿಕನಸುಗಳು
ಉಷೆ ನೀನು ಬಾಳಲ್ಲಿ ಮುಂಬೆಳಕು ನೀಡುತಲಿ
ಊರೂರು ಅಲೆದಾಡಿ ದುಡಿದು ನೀ ಸಲುಹಿದೆ
ಋಣವಿರಲು ನನ್ನ ಮೇಲೆ ತೀರಿಸಲು ಸಾಧ್ಯವೇನೆ
ಎಲ್ಲೆಯನು ಮೀರಿ ಹೆಜ್ಜೆಯನು ನಾನು ಹಾಕಲಾರೆ
ಏಳಿಗೆಯನು ಬಯಸಿದೆ ನೋವನ್ನು ಮರೆಸಿದೆ
ಐಕ್ಯದಿ ಬಾಳುವುದನ್ನು ನಮಗೆ ನೀನು ಕಲಿಸಿದೆ
ಒಳಗೊಳಗೆ ನೋವುಂಡು ನಗುಮುಖವ ತೋರಿದೆ
ಓಡೋಡಿ ಬಳಿ ಬಂದು ಒಲವಧಾರೆಯನು ಹರಿಸಿದೆ
ಔದಾರ್ಯ ಗುಣದಲ್ಲಿ ಸರಿಸಮರು ನಿನಗ್ಯಾರಿಲ್ಲಿ
ಅಂತರಂಗದಲಿ ನೆಲೆಸಿ ಅಂಬೆ ನಮ್ಮ ಹರಸುತಿಹೆ
