ಸುರ್ಯನ ಕಿರಣ ಇಲ್ಲವಾದಲ್ಲಿ,,
ಸುರ್ಯನ ಕಿರಣ ಇಲ್ಲವಾದಲ್ಲಿ,,
ಸುರಿಯುವ ಮಳೆಯಲ್ಲಿ
ಕೊರೆಯುವ ಚಳಿಯಲ್ಲಿ
ನಡು ಮಧ್ಯಾಹ್ನವಾದರೂ ಬಾರದ ಬಿಸಿಲಿಗಾಗಿ ಕಾಯುವ ಮನುಜರಿಲ್ಲಿ.....
ಕಪ್ಪು ಮೋಡದ ಬಾನಿನಲ್ಲಿ
ಮರೆಯಾಗಿರುವ ಸೂರ್ಯನಲ್ಲಿ,
ಎಲ್ಲರ ಮೊಗವನ್ನು ಪ್ರಕಾಶಿಸುವಂತೆ
ಮೋಡಸರಿಸಿ ಉದ್ಭವಿಸುವನು ಬಾನಲ್ಲಿ!!ಹೊಂಗಿರಣದ ಬೆಳಕಲ್ಲಿ
ಸೂರ್ಯನ ಕಿರಣ ರಶ್ಮಿಯು ಬಾನಂಗಳದಲ್ಲಿ.
ಹರುಷದಲ್ಲಿ ಅರಳಿ
ಮರಳಿ ತೊಡಗುವರು ಮತ್ತೆ
ಕೆಲಸ ಕಾರ್ಯಗಳಲ್ಲಿ.