ಸಂಕ್ರಾಂತಿ
ಸಂಕ್ರಾಂತಿ


ಹೊಸ ಕಾಂತಿ ತರುವ
ಹರುಷದಲಿ ಬನ್ನಿ
ಆಚರಿಸೋಣ ಸಂಕ್ರಾಂತಿ
ಸಡಗರದಲಿ..
ಎಳ್ಳು ಬೆಲ್ಲ ಕಬ್ಬನು ಸವಿದು
ಸ್ವಾಗತಿಸೋಣ ಸಂಕ್ರಾಂತಿ
ಎಲ್ಲರೊಳಗೊಂದಾಗಿ
ಮರೆಯೋಣ ಕಹಿಯನು
ಮಾಗಿಯ ಮಂಜಿನಂತೆ..
ಕಲಿಯೋಣ ಹೊಸ ನೀತಿ
ಎಳ್ಳು ಬೆಲ್ಲದ ರೀತಿ..
ತೋರಣದ ತಳಿರಿನಲಿ
ಹಾರೈಸುವ ಎಲ್ಲರಿಗೂ
ಶುಭವಾಗಲಿ..
ಮೂಡಲಿ ಮನೆ ಮುಂದೆ
ಮುದ ನೀಡೋ ರಂಗೋಲಿ..
ಎಲ್ಲಾ ಓದುಗ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು