ಸಂಬಂಧ
ಸಂಬಂಧ
ಹುಟ್ಟಿನಿಂದ ಬಂದಿರುವುದು ರಕ್ತಸಂಬಂಧ
ಒಡಹುಟ್ಟಿದವರ ಬಾಂಧವ್ಯ ಅಳಿಸಲಾಗದ ಅನುಬಂಧ
ಸತಿಪತಿಗಳಾಗುವುದು ಕೂಡಿಬಂದರೆ ಋಣಾನುಬಂಧ
ಅನುಬಂಧದಲ್ಲೇ ಇರುವುದು ಒಂದು ಸಂಬಂಧ
ತಾಯಿ ಕರೆದರೆ ಓಡಿ ಬರುವುದು ಪುಟ್ಟ ಕಂದ
ಅದಕ್ಕೆ ಇಲ್ಲ ಯಾವ ಬಂಧ
ಮಗುವಿನ ಮನವು ಸ್ವಚ್ಚಂದ
ಆಗದಿರಲಿ ಎಂದೂ ಮಂದ
ಸ್ನೇಹಿತರ ಒಡನಾಟದ ಸ್ನೇಹಾನುಬಂದ
ನೀಡುವುದು ಮನಸ್ಸಿಗೆ ಮಹದಾನಂದ
ಸಂಬಂಧಗಳು ಕಗ್ಗಂಟಾಗದಿರಲಿ
ಬಾಳಲಿ ತೊಂದರೆ ಎದುರಾಗದಿರಲಿ
ಕೋಪ ತಾಪ ಸರಸ ವಿರಸ ಏನೇ ಇರಲಿ
ಮರೆತು ಬಾಳಿದರೆ ಚಂದ ಬದುಕಿನಲಿ
ಸಂಬಂಧಗಳು ಹಾಳಾಗುವ ಮೊದಲು ಯೋಚಿಸಿ
ಯಾರ ಮನವು ನೋಯಿಸದಂತೆ ಜೀವಿಸಿ
