STORYMIRROR

mamta km

Classics Inspirational Others

4  

mamta km

Classics Inspirational Others

ಸಮಯವಿಲ್ಲ.

ಸಮಯವಿಲ್ಲ.

1 min
314


ಅವಸರದ ಜಗವಿದು ಅವಸರದ ಬದುಕಿದು, 

ಯಾರಿಗೆ ಯಾರನ್ನು ಕಾಯುತ್ತಾ, 

ಕುಳಿತುಕೊಳ್ಳಲು ಸಮಯವಿಲ್ಲ.

ಓಡುತ್ತಲೇ ಇರಬೇಕು, ಬೆಳಗಿಂದ ರಾತ್ರಿಯವರೆಗೂ..

ಬಿರುಸಿನ ಕೆಲಸದ ನಡುವೆ ಹಲವರಿಗೆ,

ಕೆರೆದುಕೊಳ್ಳಲು ಪುರುಸೊತ್ತಿಲ್ಲ.


ಬೆಳಿಗ್ಗೆ ಬೇಗನೆ ಏಳಬೇಕು, 

ಗಡಿಬಿಡಿಯಲ್ಲಿ ತಯಾರಾಗಿ ಓಡಬೇಕು, 

ನೋಡುತ ಸಮಯ, ಮಾಡುತ ದಿನಚರಿ, 

ಗಂಟೆಗಳು ಕಳೆಯುವುದು ನಿಮಿಷದಲ್ಲಿ.


ನಿದ್ದೆಗಣ್ಣ ಮಕ್ಕಳ ಎಬ್ಬಿಸಿ ಶಾಲೆಗೆ ಕಳುಹಿಸಬೇಕು.

ಕಚೇರಿಗೆ ಹೊರಡುವ ಗಂಡನ ಸಮಯಕ್ಕೆ, 

ಸರಿಯಾಗಿ ಕೆಲಸ ಹೊಂದಿಸಿಕೊಳ್ಳಬೇಕು.

ಎದ್ದಲ್ಲಿಂದ ತುಸು ಬಿಡುವಿಲ್ಲ, ಎಂದು ಹೇಳುವಂತಿಲ್ಲ

ಏಕೆಂದರೆ ಮನೆಯಲ್ಲಿ ಇರುವ ಗೃಹಿಣಿ ಇವಳಲ್ವಾ? 


ಹೆತ್ತವರಿಗೆ ಮಕ್ಕಳ ಒಡನೆ, 

ಸಮಯ ಕಳೆಯಲು ಬಿಡುವಿಲ್ಲ.

ಹಿರಿಯರ ಒಡನೆ ಬೆರೆತು ಒಡನಾಡಲು ಆಗುತ್ತಿಲ್ಲ.

ಮಾತಾಡಲೂ ಕೂಡ ಪುರುಸೊತ್ತಿಲ್ಲ.

ಪುಸ್ತಕ ಭಜನೆ ಕಥೆಗಳು ಎಂದು, 

ಓದಲು ಯಾರಿಗೆ ಸಮಯವೂ ಇಲ್ಲ. 


ಆದರೆ ಇದೆಲ್ಲಾ ಮಾಡಲು ಬೇಕೆಂದಾಗ, 

ಕೈಯಲ್ಲಿ ಮೊಬೈಲ್ ಇದೆಯಲ್ಲ.

ಅದರೊಳಗೆ ಈಗಾ ಇರುವರು ಎಲ್ಲಾ.

ಅವಸರ ಎನ್ನುತ ಎಲ್ಲರೂ ಕೈಯಲಿ 

ಚರವಾಣಿಯ ಹಿಡಿದಿಹರಲ್ಲಾ.

ಅದರಲೇ ದಿನ ಕಳೆಯುತಿದೆಯಲ್ಲಾ.


Rate this content
Log in

Similar kannada poem from Classics