ಶಿಕ್ಷಣ
ಶಿಕ್ಷಣ
ಶಿಕ್ಷಣದ ಮೌಲ್ಯ ಕುಸಿಯುತ್ತಿದೆ
ಅಂಕಗಳಿಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆ
ಜ್ಞಾನಕ್ಕಿಂತಲೂ ಮುಖ್ಯ ಅಂಕ ಗಳಿಕೆ
ನೂರಕ್ಕೆ ನೂರು ಅಂಕ ಗಳಿಸಬೇಕು
ಇದುವೇ ಜೀವನದ ಧ್ಯೇಯವಾಯ್ತು
ಪಾಲಕರ ಒತ್ತಾಯ ಮಕ್ಕಳ ಮೇಲೆ
ಶಿಕ್ಷಕರ ಒತ್ತಾಯ ಮಕ್ಕಳ ಮೇಲೆ
ಸಂಸ್ಥೆಯವರ ಒತ್ತಾಯ ಮಕ್ಕಳ ಮೇಲೆ
ಎಷ್ಟು ಅಂತಾ ಸಹಿಸಬೇಕು ಪುಟ್ಟ ಮಕ್ಕಳು
ಎಷ್ಟು ಅಂತಾ ಕಲಿಸಬೇಕು ಬಡಪಾಯಿ ಶಿಕ್ಷಕರು
ಫಲಿತಾಂಶವೇ ಜೀವನದ ಅಂತ್ಯವಲ್ಲ ತಿಳಿ
ಪ್ರಾಮಾಣಿಕ ಯಶಸ್ಸಿನ ಕಡಿಗೆ ನೀ ನಡಿ
ಕಲಿತ ಪ್ರತಿಯೊಂದು ಅಕ್ಷರದಲಿ ಇದೆ
ಬದುಕಿನ ಸಂಸ್ಕಾರದ ಸಿಹಿ ಅಡುಗಿ
ದಿನನಿತ್ಯ ಸವಿಯುತ್ತ ಸಾಗಲಿ ನಡಿಗಿ
