STORYMIRROR

Vaishnavi S Rao

Classics Inspirational Others

4  

Vaishnavi S Rao

Classics Inspirational Others

ಶೀರ್ಷಿಕೆ - ಹೆಣ್ಣು

ಶೀರ್ಷಿಕೆ - ಹೆಣ್ಣು

1 min
281

ಇಂದಿನ ಮಹಿಳೆ ಗಟ್ಟಿಗಾರ್ತಿ ನೀನು

ಸಾಧನೆ ಮಾಡಲು ಹುಟ್ಟಿದ್ದೀಯಾ ನೀನು

ಲಿಂಗ ತಾರತಮ್ಯ ತೊರೆದುಹಾಕಿದೆಯಲ್ಲ

ಅರಿತುಕೊಳ್ಳಲು ನೀನು ಶ್ರಮಿಸಿದೆಯಲ್ಲ


ವಿಜ್ಞಾನ ಕ್ಷೇತ್ರದಲ್ಲಿ ನಿನ್ನದೇ ಪಾತ್ರವಿದೆ

ಕ್ಷಿಪಣಿ ಮಹಿಳೆಯಾಗಿ ಹೆಸರು ಪಡೆದೆಯಾ

ಇಸ್ರೋದ ಧ್ರುವ ಮಹಿಳೆಯಾಗಿ ಹಾರಿದೆ

ಉದ್ಯಮ ಕ್ಷೇತ್ರಕ್ಕೂ ಕಾಲು ಇಟ್ಟಿದ್ದೀಯಾ


ಅತ್ಯದ್ಭುತ ಸಾಧನೆಗಾಗಿ ಬೆಳಗಬೇಕು

ಪ್ರಭಾವಶಾಲಿ ಮಹಿಳಾ ಪಟ್ಟಿ ನೀನು ಇರುವೆ

ಅಪೋಲೋ ಆಸ್ಪತ್ರೆ ಕಾರ್ಯ ಮಾಡುವೆ

ಪುರುಷಾತಿರೇಕದ ಧೋರಣೆಗಳ ತೊರೆಯಬೇಕು


ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಬೇಕು

ಎದೆ ಮುಂದೆ ಮಾಡಿ ನಡೆಯಬೇಕು

ನಿನ್ನ ಸಾಧನೆ ಬೆಳಕಿಗೆ ತಂದಿದೆ

ಮಹಿಳಾ ಹಕ್ಕುಗಳನ್ನು ನೀಡಿದೆ


ಗೆಲ್ಲುವ ಸಾಮರ್ಥ್ಯ ಭರವಸೆ ಮೂಡಿದೆ

ಆಟದ ಗೊಂಬೆ ಕಳಚಿ ಬಿದ್ದಿದೆ

ಅಪಮಾನಗಳ ವಿರುದ್ಧ ಪ್ರತಿಭಟನೆ ಇದೆ

ಪರಿವರ್ತನೆಯ ಕಾಲ ಬಂದಿದೆ


Rate this content
Log in

Similar kannada poem from Classics