ಪ್ರೀತಿ, ನನ್ನೊಡಲ ಭಾವನೆ
ಪ್ರೀತಿ, ನನ್ನೊಡಲ ಭಾವನೆ
ಮಳೆಗೆ ಮಂಜಾಗಿ, ಹಸಿರಾ ಉಸಿರಾಗಿ
ಸುರಿದೆ ನೀ ಧರೆಗಂದು, ನಗುವ ಕರೆತಂದು
ಮಳೆಯ ಹನಿಗೂಡಿ ನನ್ನೆದೆಗೆ ನುಸುಳಿದೆ
ಬಿಸಿ ದೇಹ ತಣಿಸಿದೆ, ಹೊಸ ಹುರುಪು ಮುಡಿದೆ
ಒಂದೊಂದು ಮಳೆ ಹನಿಗೂ ಮುತ್ತ ನೀ ಬೆರಿಸಿದೆ
ನನ್ನೆಡೆಗೆ ಕಳಿಸಿದೆ , ಪ್ರೀತಿ ಹೂ ಚಿಗುರಿದೆ
ತಣ್ಣನೆಯ ಗಾಳಿಯು ನಿನ್ನೊಡನೆ ಬೆರೆತಿದೆ
ನನ್ನೆಡೆಗೆ ಬಿಸಿದೆ, ಎದೆಮೇಲೆ ಒರಗಿದೆ

