STORYMIRROR

Nagaraja Gowda

Others

1  

Nagaraja Gowda

Others

ಅಮ್ಮ, ನಾ ಕಂಡ ದೇವರು

ಅಮ್ಮ, ನಾ ಕಂಡ ದೇವರು

1 min
534

ಅಮ್ಮಾ ಎಂದೆನಾ, ಅತ್ತರು ನಕ್ಕರು

ಅಮ್ಮಾ ಎಂದೆನಾ, ಎದ್ದರು ಬಿದ್ದರು


ಕಣ್ಣಿಗೆ ಕಾಣುವ ದೇವರು ,

ಇವಳು ,

ಕಣ್ಣಿಗೆ ಕಾಣುವ ದೇವರು


ನಗುತಾ ನಟಿಸುವಳು, ಅಳುವ ತೋರಳು

ನಿನ್ನಯಾ ಸೇವೆಯಲಿ ಜಗವಾ ಮರೆವಳು

ಮರೆಯಲಿ ನಿಂತರು ನಿನ್ನೇ ನೆನೆಯುವಳು

ಮಗುವಿನ ಗೆಲುವಿಗೆ ದುಡಿಮೆಗೆ ಹೊರಟವಳು


ಬೆವರಿನ ಹನಿಗಳಲಿ ಕಣ್ಣೀರು ಕಾಣದು

ಸುಡುವ ಬಿಸಿಲಿಗೆಂದೂ ದೇಹ ಮರುಗದು

ಆಡುವ ಮಾತುಗಳು ದೇಹಕೆ ಅಂಟದು

ತಾಯಿ ಪ್ರೀತಿಯು ಎಂದೂ ಮಾಸದು

            



Rate this content
Log in