ಪರದೆ ಸರಿಸಿ ಒಮ್ಮೆ
ಪರದೆ ಸರಿಸಿ ಒಮ್ಮೆ
ಅಜ್ಞಾನದ ಪರದೆ ಸರಿಸಿದರೆ
ಜ್ಞಾನ ಕಾಣುವುದು;
ಸುಳ್ಳಿನ ಪರದೆ ಸರಿಸಿದರೆ
ಸತ್ಯ ಕಾಣುವುದು;
ಕೆಟ್ಟ ಆಲೋಚನೆಗಳ ಪರದೆ ಸರಿಸಿದರೆ
ಒಳ್ಳೆಯ ಆಲೋಚನೆಗಳು ಕಾಣುವವು;
ಸೋಮಾರಿತನವೆಂಬ ಪರದೆ ಸರಿಸಿದರೆ
ಸಾಧನೆಗೆ ದಾರಿ ಕಾಣುವುದು;
ನಮಗೆ ನಾವೆ ಎಳೆದುಕೊಂಡ ಇಂತಹ ಪರದೆಗಳನ್ನು ಸರಿಸಿದಾಗ
ನಮ್ಮೊಳಗಿನ ಸ್ಫೂರ್ತಿ ಪುಟಿದೇಳುವುದು...
