ಫೀಡ್ ಬ್ಯಾಕ್ ತಿಳಿಸು..!
ಫೀಡ್ ಬ್ಯಾಕ್ ತಿಳಿಸು..!
ಮಾತನಾಡದೆ ಇದ್ದರು ಕಾಡುವ ನಡತೆಗೆ
ಮನಸೋತು ಒಮ್ಮೊಮ್ಮೆ
ದುಗುಡ ಹುಟ್ಟಿಸುವ ಹೃದಯಕೆ ಸಿಗದ ಉತ್ತರ
ನಿನ್ನ ನಗುವೆ ಕಾರಣ ಕೇಳುತಿದೆ..!
ಒಮ್ಮೆ ಸಮಾಧಾನದಿ,ನಿನ್ನ ಮನದಿ ಒಳ್ಳೆಯದೆ ಹುಡುಕಿ
ನೋಡು ಬರಿ ಒಳ್ಳೆಯ ಉತ್ತರ ಸಿಗುವುದು,ನನ್ನ ಅನಿಸಿಕೆ ತಿಳಿಯುವುದು,
ಮುಳ್ಳಾಗಿರುವ ದಾರಿ ಹೂವಿನ ದಾರಿಯಾಗಿ
ಕಾಣುವುದು..!
ಹೇಳದೆ ಇರುವುದಕೆ ಸಣ್ಣವೋ ದೊಡ್ಡವೋ
ಕಾರಣಗಳು ಇರುವುದು,ಇಂತಿಷ್ಟು ಹೇಳಿ ಕೊನೆಗೊಮ್ಮೆ
ನಿನಗೆ ಹೇಳುವುದು ಎಂದು ಅರಿತು ಇಂಗ್ಲೀಷ್
ಪದದಿ ಕಾಮೆಂಟ್ ಹೊಡೆಯದೆ ಫೀಡ್ ಬ್ಯಾಕ್ ತಿಳಿಸು..!

