STORYMIRROR

Pushpa Prasad

Classics Inspirational Others

4  

Pushpa Prasad

Classics Inspirational Others

ಓ ಹೆಣ್ಣೇ

ಓ ಹೆಣ್ಣೇ

1 min
31

ನನ್ನೊಳಗಿನ ಅರಿವಿನ ಶಕ್ತಿ ಹೊರ ಸೂಸಲಿ 

ಈ ಜಗದೆಲ್ಲೆಡೆ ತುಂಬಿ ತುಳುಕಲಿ 

ನೋವು - ಸಂಕಟ - ತವಕಗಳೆಲ್ಲವ ತೊಳೆಯಲಿ

ಓ ಶಕ್ತಿಯೇ ಈ ಹೃದಯದೊಳಗೆ ಬಾ!!


ಸಾಗರದ ನೀರು ಆವಿಯಾಗಿ ಆಗಸ ಸೇರಿದಂತೆ

ಮೋಡವಾಗಿ ಮೇಘದಲ್ಲಿ ತೇಲಿದಂತೆ

ಓ ಜ್ಞಾನವೇ ಬೆಳಕಾಗಿ ಬಾ

ಓ ಬೆಳಕೇ ಕವಿತೆಯಾಗು ಬಾ!!


ಎಲ್ಲೋ ಹುಟ್ಟಿ ಎಲ್ಲೋ ಹರಿಯುವ ಹೊಳೆಯಂತೆ 

ಹೆಣ್ಣಾಗಿ ಹುಟ್ಟಿ ಮನೆ ಬೆಳಗುವ ಜ್ಯೋತಿಯಂತೆ 

ಓ ಹೆಣ್ಣೇ ಬೆಳಕಾಗಿ ಬಾ

ಓ ಹೆಣ್ಣೇ ಮನೆಯನ್ನು ಬೆಳಗು ಬಾ!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics