ನನ್ನ ಆರೋಗ್ಯ ನನ್ನ ಭಾಗ್ಯ
ನನ್ನ ಆರೋಗ್ಯ ನನ್ನ ಭಾಗ್ಯ
ನನ್ನ ಆರೋಗ್ಯ ನನ್ನ ಭಾಗ್ಯ
ತಿಳಿದವರೇ ಇಂದು ಯೋಗ್ಯ
ಜೀವನವು ಬಹಳ ಅಮೂಲ್ಯ
ಜೋಪಾನ ಮಾಡಬೇಕು ನಿತ್ಯ!!
ಮಾಡಬೇಕು ಯೋಗ ಧ್ಯಾನ
ಇರಬೇಕು ಎಂದೂ ಸಮತೋಲನ
ಮಾಡುತ್ತಿರಬೇಕು ದೇವರ ದರ್ಶನ
ನೆಲೆಸುವುದಾಗ ಸದೃಢ ಮನ!!
ಸೇವಿಸಬೇಕು ಹಿತಮಿತ ಆಹಾರ
ಹೊಂದಬಹುದು ನಿರೋಗಿ ಶರೀರ
ಸುಖ ಶಾಂತಿಗೆ ದೂರಬಾರದು ಪರರ
ಇದ್ದುದ್ದರಲ್ಲಿ ಪಡೆಯಬೇಕು ಸಂತೋಷ!!
ಆರೋಗ್ಯವೇ ನನ್ನ ದೇಹದ ದೇಗುಲ
ಇದುವೇ ನನ್ನಯ ನಂದಾ ಗೋಕುಲ
ಮೈ ಬಗ್ಗಿಸಿ ದುಡಿದು ತಿಂದರೆ ಆರೋಗ್ಯ
ಕುಳಿತು ತಿಂದರೆ ವಕ್ಕರಿಸುವುದು ಅನಾರೋಗ್ಯ!!
