Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Romance Inspirational Thriller

4  

Arjun Maurya

Romance Inspirational Thriller

ನಂಬಿಕೆ

ನಂಬಿಕೆ

1 min
376


ಬಂದೆ ಬರುವಳು ಅವಳು

ಬಂದೇ ಬರುವಳು

ಪ್ರೀತಿಯೇ ಹಾಗೆ l

ಬಂದೇ ಬರುವಳು

ನನ್ನ ಹೃದಯ ಅರಿತವಳು ll


ಕಟ್ಟಳೆ ತುಂಬಿದ

ಕುಟುಂಬವ ದಾಟಿ

ಆಳದಿ ನನ್ನ ಹೃದಯ ಮೀಟಿ

ಬಂದೇ ಬರುವಳು l

ಪ್ರೀತಿಯೇ ಹಾಗೆ

ಬಂದೇ ಬರುವಳು ll


ದ್ವೇಷವೇ ತುಂಬಿದ

ಜಾತಿಯ ದಾಟಿ

ಜಗದ ಪ್ರೀತಿಯ ನೆಲೆಯ ಅರಿತು

ಬಂದೇ ಬರುವಳು l

ಪ್ರೀತಿಯೇ ಹಾಗೆ

ಬಂದೇ ಬರುವಳು ll


ಎಡರುಗಳ ಬೇಲಿಗಳನು

ಛಲದಲೇ ದಾಟಿ

ಜನ್ಮಜನ್ಮಗಳ ಬಂಧಕ್ಕಾಗಿ

ಬಂದೇ ಬರುವಳು l

ಪ್ರೀತಿಯೇ ಹಾಗೆ

ಬಂದೇ ಬರುವಳು ll


ಹೃದಯಗಾನದ

ಜನುಮಜೀವಕೆ

ಸೃಷ್ಟಿ ಸಾಕ್ಷಿಯಾಗಿ ನಿಂತು

ಬಳಸಲು ವರಿಸಲು ನನ್ನ

ಬಂದೇ ಬರುವಳು l

ಪ್ರೀತಿಯೇ ಹಾಗೆ l

ಬಂದೇ ಬರುವಳು

ನನ್ನವಳು ಅವಳು

ಪ್ರಕೃತಿ ಸಾಕ್ಷಿಯಾಗಿ ll


Rate this content
Log in

Similar kannada poem from Romance