ನಮಗಾಸರೆಯೇ ಮೇದಿನಿ
ನಮಗಾಸರೆಯೇ ಮೇದಿನಿ
ಹುಟ್ಟುವರೆಷ್ಟೋ ಸಾಯುವರೆಷ್ಟೋ!
ಹುಟ್ಟು ಸಾವಿನ ಮಧ್ಯೆ ಪ್ರಕೃತಿಯ ಸುಟ್ಟವರೆಷ್ಟೋ!
ಸುಡುವಂತಹ ಬಾಳು ಬೇಡ ಮನುಜ ಕೇಳು ನೀ,
ತಿಳಿದುಕೋ ಮನುಜ ನಮಗಾಸರೆಯೇ ಮೇದಿನಿ.
ಅರಿತವರೆಷ್ಟೋ ಅರಿಯದವರೆಷ್ಟೋ!
ಅರಿತು ಅರಿಯದೆ ಮಾಡುವ ಪಾಪವೆಷ್ಟೋ!
ಈಗಲಾದರೂ ಪಾಪವ ತೊರೆದು ಪುಣ್ಯದ ಬೆನ್ನು ಹತ್ತು ನೀ,
ತಿಳಿದುಕೋ ಮನುಜ ನಮಗಾಸರೆಯೇ ಮೇದಿನಿ.
ಸರಿ ಎಷ್ಟೋ ತಪ್ಪುಗಳೆಷ್ಟೋ!
ಸರಿ ತಪ್ಪುಗಳ ತಿಳಿದವರೆಷ್ಟೋ!
ಇನ್ನಾದರೂ ತಪ್ಪನ್ನು ತಿದ್ದಿ ಸರಿಯಾಗಿ ಬದುಕು ನೀ,
ತಿಳಿದುಕೋ ಮನುಜ ನಮಗಾಸರೆಯೇ ಮೇದಿನಿ.
ಧನಿಕರೆಷ್ಟೋ ಬಡವರೆಷ್ಟೋ!
ಧನಿಕ ಬಡವರ ನಡುವೆ ಭೇದವೆಷ್ಟೋ!
ಭೇದ ನೋಡದ ವೈರಾಣುವಿಗೆ ಹೆದರಿ ಬುದ್ದಿ ಕಲಿತೆ ಮನುಜ ನೀ,
ಕೊನೆಗೂ ತಿಳಿದೆ ಸತ್ಯವ ನೀ ನಮಗಾಸರೆಯೇ ಮೇದಿನಿ.