Kannika Narayanaswamy

Tragedy

4.7  

Kannika Narayanaswamy

Tragedy

ಕಳೆದು ಹೋದ ಕ್ಷಣಗಳು

ಕಳೆದು ಹೋದ ಕ್ಷಣಗಳು

1 min
803


ಕಣ್ಣುಗಳು ಮಿಟುಕಿಸುವಷ್ಟರಲ್ಲಿಯೇ,

ಹಲವು ವರ್ಷಗಳೇ ಮುಗಿದಂತೆ.

ನೋವು ನಲಿವಿನ ಪರಿವೇ ಇಲ್ಲದೆ,

ವಿಂಚಿನ ವೇಗದಲ್ಲಿಯೇ, ನನ್ನನು ಈ ಕ್ಷಣದಲ್ಲಿ ಸಿಳುಕಿಸಿದಂತೆ!


ಆ ಕಳೆದುಹೋದ ವರ್ಷಗಳನ್ನು ಬಗೆದರೆ,

ಸುಖಃ ದುಃಖವು ಅದರಲ್ಲಿ ಕಿತ್ತುತೋರುತ್ತವೆ!

ಒಂದು ಕ್ಷಣದಲ್ಲಿಯೇ ಎಲ್ಲವೂ -

ನೆನಪಿಗೆ ಬಂದು, ಕಣ್ಣನ್ನು ಕುಕ್ಕುತವೆ!


ಮುಂದೆ ಬರುವ ದಿನಗಳನ್ನು -

ನೆನೆದರೆ, ಭಯವೂ ಆಗುತ್ತದೆ.

ಮುಂದು ಹೋಗದೆ ಇಲ್ಲೇ ಇರುತ್ತೇನೆಂದರೆ

ಪ್ರಕೃತಿಯು ಒಲ್ಲೆ ಎನ್ನುತ್ತದೆ!


Rate this content
Log in

Similar kannada poem from Tragedy