Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಕಡಲ್ಕೊರೆತ

ಕಡಲ್ಕೊರೆತ

1 min
371



ಸಾಣೆಕಟ್ಟಾದ ಆ ಉಪ್ಪಿನಾಗರದಾಚೆ 

ಬಂದರಿನ ಉಪ್ಪು ಕಡಲಲ್ಲಿ 

ಅದರ ಒಡಲಲ್ಲಿ ಅದೇ ಭೋರ್ಗರೆತ !

ಬಂದರಿನ ಅತ್ತಿತ್ತ ಬಂದು ಅಪ್ಪಳಿಸಿ 

ಅಳಿಸಿ ಹಾಕುವ ರುಚಿ ಭೇದವಳಿದ 

ಕಡಲ್ಕೊರೆತ ಕಾಣುತ್ತೇನೆ !


ಸಾಗರದಲ್ಲಿ ತೇಲಾಡುವ 

ಮೀನು ಹಿಡಿಯಲು ಬಂದ

ಹಾಯ್ ದೋಣಿಗಳು ಈಗ ದಡ ಸೇರಿ 

ಮಳೆಗಾಲದ ವಿರಾಮ !

ಸುತ್ತ ಮುತ್ತ ಮರಳು ದಡದಲ್ಲಿ 

ದಣಿವರಿಯದ ದೇಹ ಕಾಣುತ್ತೇನೆ !


ಈ ತೀರದಿಂದ ಆ ತೀರಕ್ಕಿರುವ 

ಫಳ ಫಳ ಹೊಳೆವ 

ಅದೇ ತಿಳಿನೀಲ ಕಡಲು 

ಆಗಾಗ ಬೀಸಿ ಬರುವ 

ಅಬ್ಬರದ ಅಲೆಯನ್ನು ಕಾಣುತ್ತೇನೆ !

ದಡ ತಲುಪಿಸುವ ತೆರೆಗಳಲ್ಲಿ 

ಅದೆಂತಹ ಮೋಹ ,

ಅಪರೂಪದ ದಾಹ 

ಕಸಕಡ್ಡಿಗಳ ದಡ ಸೇರಿಸುವುದರಲ್ಲಿ 

ಅಬ್ಬರದ ಅಲೆಗಳನ್ನು ಕಾಣುತ್ತೇನೆ !


ಕಡಲು ಬಿರಿಯುವ ಈ ದಿನಗಳಲ್ಲಿ 

ಅದೆಂತಹ ಭಯ 

ಮನುಷ್ಯನಿಗೆ ಅಭಯ !

ಕಡಲ್ಕೊರೆತ ಲೆಕ್ಕಾಚಾರದಲ್ಲಿ 

ತಪ್ಪು ಲೆಕ್ಕ ಬರೆಯುತ್ತಾ 

ವಂಚಿಸುವ ಜನರನ್ನು ಕಾಣುತ್ತೇನೆ !!



Rate this content
Log in

Similar kannada poem from Classics