ಜನನಿ
ಜನನಿ
ಯುಗಗಳೇ ಕಳೆದರೂ ತೀರಿಸಲಾಗದು
ಅಮ್ಮ ನಿನ್ನ ಋಣವನ್ನು
ಜನುಮ ಜನುಮದಲ್ಲೂ ಬಣ್ಣಿಸಲಾಗದು
ತಾಯೆ ನಿನ್ನ ಹಿರಿಮೆಯನು
ನೋವನು ನುಂಗುವೆ ಜನುಮವ ನೀಡುವೆ
ಮಗುವಿನ ನಗೆಯಲಿ ಜಗವನೆ ಮರೆಯುವೆ
ಅನುರಾಗವನು ಕುಡಿಸುತ ಬೆಳೆಸುವೆ
ಬಾಳಿನ ಹೆಜ್ಜೆಗೆ ಬದುಕನೆ ಸವೆಸುವೆ
ಮೇಣದ ಬತ್ತಿಯ ತೆರದಲಿ ಕರಗುವೆ
ನಗುತ ನಗುತ ಬಾಳನು ಬೆಳಗುವೆ
ದೇವರು ಕಣ್ಣಿಗೆ ಕಾಣದೆ ಇಹನು
ಕಣ್ಣಿಗೆ ಕಾಣೋ ದೇವರು ನೀನು
ದೇವಗೆ ಇಹುದು ಸಾವಿರ ಹೆಸರು
ಆದರೂ ಅವನಿಗೆ ಅಮ್ಮನೆ ಉಸಿರು
ನಿನ್ನ ಮಮತೆ ಬಾಳಿಗೆ ಹಣತೆ
ನಿನ್ನೊಲವಿಗೆ ದವನ ಈ ಕವಿತೆ
