ಜಂಜಾಟ
ಜಂಜಾಟ
ಬದುಕ್ಕೊಂದು ಹೋರಾಟ
ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಟ
ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರದಾಟ
ಉದ್ಯೋಗಸ್ಥರು ಬಡ್ತಿಗಾಗಿ ಸೆಣಸಾಟ
ಹರೆಯದಲ್ಲಿ ವಧು ವರರ ಹುಡುಕಾಟ
ಮದುವೆಯ ಹೊಸತರಲ್ಲಿ ಜೀವನ ಸಿಹಿದೂಟ
ತಾಳಲಾರೆವು ಮಕ್ಕಳ ತುಂಟಾಟ
ಸಾಕಾಯಿತು ಸಂಸಾರದ ಜಂಜಾಟ
ಸಮಸ್ಯೆಗಳೊಂದಿಗೆ ಹೆಣಗಾಟ
ಸುಖ ದುಃಖದ ತೊಳಲಾಟ
ಸೋಲು ಗೆಲುವಿನ ಕಣ್ಣಾಮುಚ್ಚಾಲೆ ಆಟ
ಬಾಳೆಲ್ಲಾ ಏಳು ಬೀಳಿನ ಹಗ್ಗ ಜಗ್ಗಾಟ
ಕಾಮ ಕ್ರೋಧಗಳ ರಂಪಾಟ
ಕರ್ಮಗಳ ಜೊತೆ ವಿಧಿಯ ಮೋಜಿನ ಚೆಲ್ಲಾಟ
ಭಗವಂತ ಆಡಿಸುವನು ಚದುರಂಗದಾಟ
ಇರಲಿ ದೇವರ ಭಕ್ತಿ,ಸತ್ಸಂಗದ ಕಡೆ ನಮ್ಮ ನೋಟ
