STORYMIRROR

Harish T H

Inspirational Others

4  

Harish T H

Inspirational Others

ಜೀವನದ ಅಂತಿಮ ಧ್ಯೇಯ

ಜೀವನದ ಅಂತಿಮ ಧ್ಯೇಯ

1 min
40

ಜನನ-ಮರಣದ ನಡುವಿನ ಬದುಕಲ್ಲಿ,

ಸ್ವಾರ್ಥ ತೊರೆದು ಸೌಹಾರ್ದ ಮೆರೆದು ಬಾಳಬೇಕು.

ಕೋಪವ ಸಾಯಿಸಿ ತಾಳ್ಮೆಯ ಉದಯಿಸಿ ಬದುಕಬೇಕು.

ಆದಷ್ಟು ಸತ್ಯ ಧರ್ಮದ ಹಾದಿಯಲ್ಲಿಯೇ ನಡೆಯಬೇಕು.


ಪರರ ಸಂತೋಷದಲ್ಲಿ ನಮ್ಮ ಸಂತೋಷ ನೋಡಬೇಕು.

ಕಷ್ಟ ಎಂದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು.

ಅಹಂಕಾರ ತೊರೆದು ಹೃದಯದಿಂದ ಎಲ್ಲರನ್ನೂ ಪ್ರೇಮಿಸಬೇಕು.

ಇರುವಷ್ಟೂ ದಿನ ಒಳ್ಳೆಯತನದಿಂದ ಜೀವನ ಸಾಗಿಸಬೇಕು.


ಕೊನೆಯದಾಗಿ, ಜೀವನದ ಅಂತಿಮ ಧ್ಯೇಯವಾದ

ಮೋಕ್ಷದ ದಾರಿಯನ್ನು ಹುಡುಕಬೇಕು.

ಆತ್ಮವನ್ನು ಪರಮಾತ್ಮನಲ್ಲಿ ಸೇರಿಸಿ ಅಂತಿಮವೇ

ಇಲ್ಲದ ಈ ಬದುಕಿನ ಚಕ್ರದಿಂದ ಮುಕ್ತಿಯನ್ನು ಪಡಿಯಬೇಕು.



Rate this content
Log in

Similar kannada poem from Inspirational