STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಹಸಿರುಬಣ್ಣ

ಹಸಿರುಬಣ್ಣ

1 min
360

ಭೂಮಿತಾಯ ಮಡಿಲಲಿರುವ

ಹಸಿರ ಕುಸುರಿ ನೋಡುತ

ಕಣ್ಣು ತುಂಬಿ ಮನವು ತುಂಬಿ

ಕಾಣುವೆವು ನೆಮ್ಮದಿ॥

ಎಲೆಯ ಹಸಿರು ಧ್ವಜದ ಹಸಿರು

ನೂರು ಹಸಿರು ಬಣ್ಣವು

ಗಿಳಿಯ ಹಸಿರು ನವಿಲ ಹಸಿರು

ಮನಕೆ ನೂರು ಬಗೆಯದು॥

ಸುತ್ತ ನೋಡೆ ಕಣ್ಣ ತಣಿಪ

ಸೊಗದ ಹಸಿರು ಬಣ್ಣವು

ತುಂಬಿತುಳುಕುತಿರಲು ನಿತ್ಯ 

ಸುತ್ತಮುತ್ತ ಎತ್ತಲೂ॥

ಅಮ್ಮ ನಮಗೆ ನೀಡುತಿಹಳು

ಹಸಿದ ಹೊಟ್ಟೆಗನ್ನ 

ಬಿಡದೆ ಕೊಡುತ

ಬೆಳವಣಿಗೆಗೆ ಪೋಷಕಾಂಶ॥

ಅಂತೆ ನಮ್ಮ ಬಾಳ ರಥಕೆ

ಬೇಕು ಶಕ್ತಿ ಯುಕ್ತಿ

ಅದನು ನೀಡಿ ಸಲಹುತಿಹಳು

ತಾಯಿ ಭೂಮಿತಾಯಿ॥

ನಮ್ಮ ಪೊರೆವ ಮಾತೆಯನ್ನು

ಬಿಡದೆ ಕಾಯಬೇಕು

ಮಾತೆಯ ಮಾನ ಕಾಯುವಂತಹ

ಮಕ್ಕಳಾಗಬೇಕು॥


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics