STORYMIRROR

shristi Jat

Classics Inspirational Others

4  

shristi Jat

Classics Inspirational Others

ಹೀರೋ

ಹೀರೋ

1 min
392

"ಹೀರೋ ನಮ್ಮ ಜೀವನದಲ್ಲಿ ಅವನು

ಅಂಶಗಳನ್ನು ಅನುಸರಿಸಿ ನಡೆಯುವ ರೆಟ್ರೋ"

ಅಕ್ಕರೆಯ ಹಾಲುಣಿಸಿ ಸಂಸ್ಕಾರದ ಅಂಗಿ

ತೊಡಿಸಿ, ಶಿಸ್ತಿನ ಪಾಠ ಕಲಿಸಿ ಹೀರೋ ಆದಳು;         

ನಮ್ಮ ಬಾಳಿನಲಿ ತಾಯಿ.

ಅವಶ್ಯಕತೆಗಳನ್ನು ನಿಗುರಿಸಿ ಧೈರ್ಯದ ಛಾಪು ಮೂಡಿಸಿ,                               

ಸರಿಯಾದ ಮಾರ್ಗ ತೋರಿಸಿ ಹೀರೋ ಅದೇನು;  

ನಮ್ಮ ಬಾಳಿನಲಿ ತಂದೆ.

ಜ್ಞಾನದ ಜ್ಯೋತಿ ಬೆಳಗಿಸಿ ಗುರಿಯ ಹಸಿವು ತೋರಿಸಿ,                             

 ಯಶಸ್ಸಿನ ದಡ ತಲುಪಿಸಿ ಹೀರೋ ಆದನು;       

ನಮ್ಮ ಬಾಳಿನಲಿ ಗುರು.

ಆಟ-ಪಾಠಗಳ ನಲುವಿನಲಿ ಒಂದಾಗಿಸಿ ದುಃಖಕ್ಕೆ ಸ್ಪಂದಿಸಿ,                                

ಸಹಾಯಗಳ ಪೂರಕನಾಗಿಸಿ ಹೀರೋ ಆದನು;    

ನಮ್ಮ ಬಾಳಿನಲಿ ಸ್ನೇಹಿತ; 

ಒಲವಿನ ಆಸೆ ಬೆಳೆಸಿ ಬಂಧನದ ಗಂಟು ಕಟ್ಟಿಸಿ,   

ಸಂಸಾರದ ಪಾಲುದಾರನಾಗಿಸಿ ಹೀರೋ ಆದನು;  

ನಮ್ಮ ಬಾಳಿನಲಿ ಅರ್ಧಾಂಗಿ. 

"ಹೀರೋ ನಮ್ಮ ಜೀವನದಲ್ಲಿ ಅವನು ಅಂಶಗಳನ್ನು

ಅನುಸರಿಸಿ ನಡೆಯುವ ರೆಟ್ರೋ"                 


साहित्याला गुण द्या
लॉग इन

Similar kannada poem from Classics